ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ರೈತರ ಹಿತದ ಜತೆಗೆ ಕುಡಿಯುವ ನೀರು ಒದಗಿಸುವುದು ಬಹಳ ಮುಖ್ಯ. ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿ ತುಂಗಭದ್ರಾ ಕಾಲುವೆಗಳಿಗೆ ನೀರು ಹರಿಸಲು ಒಮ್ಮತದಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೆಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹೊಂದಿಸುವ ಕೆಲಸ ಮಾಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಕೊಪ್ಪಳ: ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ರೈತರ ಹಿತದ ಜತೆಗೆ ಕುಡಿಯುವ ನೀರು ಒದಗಿಸುವುದು ಬಹಳ ಮುಖ್ಯ. ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿ ತುಂಗಭದ್ರಾ ಕಾಲುವೆಗಳಿಗೆ ನೀರು ಹರಿಸಲು ಒಮ್ಮತದಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೆಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹೊಂದಿಸುವ ಕೆಲಸ ಮಾಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ತುಂಗಭದ್ರಾ ಡ್ಯಾಂನಲ್ಲಿ ಆಂಧ್ರ ಪಾಲಿನ ನೀರಿನ ಕೋಟಾದಡಿ ನೀರು ಬಳಕೆಗೆ ಆಂಧ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆಂಧ್ರದಲ್ಲಿ ಎರಡನೇ ಬೆಳೆಯನ್ನು ಹಾಕಿಲ್ಲ. ಆದರೆ ಅವರು ಈ ಬಾರಿ ಕುಡಿಯಲೆಂದೇ ತಮ್ಮ ಪಾಲಿನ ನೀರನ್ನು ಉಳಿಸಿಕೊಳ್ಳಲಾಗಿದೆ ಎಂದು ಹೇಳಿದರು. ನಮ್ಮ ಬಳಕೆಗೆ ನೀರು ಕೊಡಲು ಒಪ್ಪಲಿಲ್ಲ. ಆದರೂ ನಾವು ನಮ್ಮಲ್ಲಿ ಏಳುವರೆ ಲಕ್ಷ ರೈತರ ಹಿತ ಕಾಯಲು ರೈತರಿಗೂ ತೊಂದರೆಯಾಗದಂತೆ, ಕುಡಿಯುವ ನೀರಿಗೂ ತೊಂದರೆಯಾಗದಂತೆ ಸಿಎಂ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದರು.ಬಿಜೆಪಿ, ಜೆಡಿಎಸ್ ಶಾಸಕರು ಈ ನಿರ್ಧಾರ ಒಪ್ಪಿದ್ದಾರೆ: ತುಂಗಭದ್ರಾ ಕಾಲುವೆಗೆ ನೀರು ಹರಿಸುವ ಸಂಬಂಧ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ, ಜನಪ್ರತಿನಿಧಿಗಳನ್ನು ವಯಕ್ತಿಕವಾಗಿ ಅಭಿಪ್ರಾಯ ಕೇಳಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅವರು ಸಹ ಒಪ್ಪಿದ್ದಾರೆ. ಅಧಿಕಾರಿಗಳು ಕುಡಿಯುವ ನೀರಿಗೆ ಕಾಯ್ದರಿಸಿ ಎಂದಿದ್ದಾರೆ. ಹಾಗಾಗಿ ಕುಡಿಯಲು ನೀರಿಗೆ ಕಾಯ್ದರಿಸಿದೆ. ಮೂರು ಹಂತದಲ್ಲಿ ಕುಡಿಯಲು ನೀರು ಹರಿಸಲು ನಿರ್ಧರಿಸಲಾಗಿದೆ ಎಂದರು.
ಬೆಳೆಗೆ ನೀರು ಹರಿಸುವಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಸುದೀರ್ಘ ಚರ್ಚೆ ಮಾಡಿ, ಇರುವ ನೀರಿನಲ್ಲಿ ನೀರಿನ ಹಂಚಿಕೆ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ. ರೈತರು ಸಹಕಾರ ನೀಡಬೇಕು. ಬೆಳೆ ಹಾಗೂ ಕುಡಿಯಲು ನಾವು ನೀರು ಕಾಯ್ದರಿಸಿಕೊಳ್ಳಬೇಕು. ಈ ವೇಳೆ ಎಲ್ಲರೂ ಸಹಕಾರ ಮಾಡಬೇಕು ಎಂದರು.ಆಂಧ್ರದ ಪಾಲಿನಲ್ಲಿ ನೀರು ಕೊಡಲಿಲ್ಲ: ಕುಡಿಯುವ ನೀರಿನಲ್ಲಿ ಬೆಳೆಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಡ್ಯಾಂನಲ್ಲಿ ನಮಗೆ ನೀರು ಮೈನಸ್ ಇದೆ. ನೀರಿನ ಕೊರತೆ ನಮಗೆ ಇದೆ. ಆಂಧ್ರ ಪಾಲು ೧೨.೫೦ ಟಿಎಂಸಿ ನೀರು ಇದೆ. ಆಂಧ್ರಕ್ಕೆ ಮನವಿ ಮಾಡಿದ್ದೆವು. ಆದರೆ ಅದಕ್ಕೆ ಫಲ ಸಿಗಲಿಲ್ಲ. ಸಿಎಂಗೂ ನಾವು ಮನವಿ ಮಾಡಿದ್ದೆವು. ಕರ್ನಾಟಕಕ್ಕೆ ೮.೫ ಟಿಎಂಸಿಯ ನೀರಿನ ಪಾಲಿನಲ್ಲಿ ೫.೫ ಟಿಎಂಸಿ ನೀರು ಕುಡಿಯಲು ಕಾಯ್ದರಿಸಿದೆ. ಉಳಿದ ನೀರನ್ನು ಬೆಳೆಗೆ ಹರಿಸಲಾಗುವುದು. ಕೈಗಾರಿಕೆಗಳಿಗೆ ನೀರು ಕೊಡಲು ಆಗುವುದಿಲ್ಲ ಎಂದು ಈಗಾಗಲೇ ಹೇಳಿದೆ. ಈ ಸಭೆಯಲ್ಲಿಯೂ ನಿರ್ಧರಿಸಲಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆ ಭಾಗದಲ್ಲಿ ೬ ಲಕ್ಷ ಹಾಗೂ ಬಲದಂಡೆ ಕಾಲುವೆ ಭಾಗದಲ್ಲಿ ೧.೫ ಲಕ್ಷ ಸೇರಿ ಒಟ್ಟು ೭.೫ ಲಕ್ಷ ರೈತರ ಬೆಳೆಗೆ ನೀರು ಕೊಡಬೇಕಿದೆ. ಸಾಧ್ಯವಾದಷ್ಟು ನೀರು ಹರಿಸಲಾಗುವುದು. ಭದ್ರಾ ನೀರು ಕೇಳಿ ಎಂದು ಕೆಲವರು ಸಲಹೆ ಕೊಟ್ಟಿದ್ದರು. ಅಲ್ಲಿಯೂ ಪರಿಸ್ಥಿತಿ ಸರಿಯಿಲ್ಲ ಎಂದರು.