ಸಾರಾಂಶ
ಪಿಎಸ್ಐ ಮಾರುತಿ ಹೇಳಿಕೆ । ಆಟೋ ಚಾಲಕರಿಗೆ ಸಂಚಾರಿ ನಿಯಮಗಳ ಕಡ್ಡಾಯ ಪಾಲನೆ
ಕನ್ನಡಪ್ರಭ ವಾರ್ತೆ ಪರಶುರಾಂಪುರ
ಆಟೋ ಚಾಲಕರು ತಮ್ಮ ಕುಟುಂಬದ ಜವಾಬ್ದಾರಿಯನ್ನು ಮನಗಂಡು ರಸ್ತೆ ಮೇಲೆ ಎಚ್ಚರಿಕೆಯಿಂದ ಚಾಲನೆ ಮಾಡಬೇಕು. ಸ್ವಲ್ಪ ಯಾಮಾರಿದರೆ ನಿಮ್ಮ ಕುಟುಂಬವು ಬೀದಿಗೆ ಬರುವುದರ ಜತೆಗೆ ಪ್ರಯಾಣಿಕರ ಮತ್ತು ರಸ್ತೆಯಲ್ಲಿ ಸಂಚರಿಸುತ್ತಿರುವ ಪಾದಾಚಾರಿಗಳಿಗೂ ತೊಂದರೆಯಾಗುತ್ತದೆ ಎಂಬುವುದರಲ್ಲಿ ಅರುತಿರಬೇಕು ಎಂದು ಪಿಎಸ್ಐ ಮಾರುತಿ ತಿಳಿಸಿದರು.ಗ್ರಾಮದಲ್ಲಿ ಗುರುವಾರ ಪೊಲೀಸ್ ಇಲಾಖೆ ವತಿಯಿಂದ ನಡೆದ ಆಟೋ ಚಾಲಕರಿಗೆ ಸಂಚಾರಿ ನಿಯಮಗಳ ಕಡ್ಡಾಯ ಪಾಲನೆ ಮಾಡುವ ಕುರಿತು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಆಟೋ ಚಾಲಕರ ಕಡ್ಡಾಯವಾಗಿ ಖಾಕಿ ಸಮವಸ್ತ್ರ ಧರಿಸಿ ರಸ್ತೆ ಸಂಚಾರ ನೀವು ಪಾಲನೆ ಮಾಡಿ ಸಮ ಚಿತ್ತದಿಂದ ವಾಹನ ಓಡಿಸಬೇಕು ತನ್ನ ಮತ್ತು ಇತರರ ಜೀವಗಳ ರಕ್ಷಣೆ ಮಾಡುವುದಲ್ಲದೆ ವಾಹನದಲ್ಲಿ ನಿಗದಿತ ಮತ್ತು ಅಗತ್ಯ ಇದ್ದಷ್ಟು ಮಾತ್ರ ಪ್ರಯಾಣಿಕರನ್ನು ಒಯ್ಯಬೇಕು ಈ ಮೂಲಕ ತಾನು ಬದುಕಬೇಕು ಇತರರನ್ನು ಬದುಕಿಸಬೇಕು ಎಂದು ಕಿವಿಮಾತು ಹೇಳಿದರು.ರಸ್ತೆಯಲ್ಲಿ ಮನುಷ್ಯರು ಚಲಿಸುತ್ತಿರುತ್ತಾರೆ ಜನರಕ್ಷಣೆ, ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಇಲ್ಲವಾದರೆ ಜೀವಕ್ಕೆ ಹಾನಿ ಖಚಿತ ಎಂದರು. ಎಡಭಾಗ ಮಾತ್ರ ನಮ್ಮದು, ತಿರುವು, ಅಪಘಾತ ಸಂಭವಿಸುವ ಅಪಾಯದ ತಿರುಗುಗಳು, ಸೇತುವೆ, ಅಂಕುಡೊಂಕಾದ ರಸ್ತೆ, ಯುಟರ್ನ್, ಇಳಿಜಾರು, ಎತ್ತರದ ರಸ್ತೆ ಹೀಗೆ ಹಲವು ರೀತಿಯ ರಸ್ತೆ ಸಂಚಾರದ ನಿಯಮ ಪಾಲಿಸಿದಿದ್ದರೆ ಅಪಘಾತವಾಗುತ್ತದೆ. ಶಾಲೆ, ಸರ್ಕಾರಿ ಆಸ್ಪತ್ರೆ ಬಳಿ ಶಬ್ದ ಮಾಡಬಾರದು ಇಲ್ಲವಾದಲ್ಲಿ ದಂಡ ಕಟ್ಟಬೇಕಾಗುತ್ತದೆ ಎಂದು ವಿವರಿಸಿದ್ದರು.
ಈ ವೇಳೆ ಪಿಎಸ್ಐ ಮಾರುತಿ ಎಎಸ್‌ಐ ತಿರುಕಪ್ಪ, ರವಿ, ಏಕಾಂತ, ಶಿವಣ್ಣ ನಾಯ್ಕ ಹಾಗೂ ಪರಶುರಾಂಪುರದ ಎಲ್ಲಾ ಆಟೋ ಚಾಲಕರು ಇದ್ದರು.