ಸಾರಾಂಶ
ಶಿವಮೊಗ್ಗ: ಇಲ್ಲಿನ ನವುಲೆಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಮತ್ತು ಜೆಎನ್‌ಎನ್‌ಸಿಇ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಲಕರ 16 ವರ್ಷದೊಳಗಿನ ಬಿಸಿಸಿಐ ವಿಜಯ ಮರ್ಚೆಂಟ್ ಟ್ರೋಫಿಯ ಗ್ರೂಪ್ ಸಿ ವಿಭಾಗದ ಕ್ರಿಕೆಟ್ ಪಂದ್ಯಾವಳಿಗಳಿಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹಾಗೂ ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಅವರು ಚಾಲನೆ ನೀಡಿದರು.

ಡಿ.30ವವರೆಗೆ ಪಂದ್ಯಾವಳಿಗಳು ನಡೆಯಲಿದ್ದು, ಮೊದಲ ದಿನವಾದ ಶುಕ್ರವಾರ ಕೆಎಸ್‌ಸಿಎ ಮೈದಾನದಲ್ಲಿ ಚತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶದ ನಡುವೆ ಹಾಗೂ ಕೆಎಸ್‌ಸಿಎ ಮೈದಾನ-2ರಲ್ಲಿ ಪಂಜಾಬ್ ಮತ್ತು ದೆಹಲಿ ತಂಡಗಳು ಸೆಣಸಾಡಿದರೆ, ಜೆಎನ್‌ಎನ್‌ಸಿಎ ಮೈದಾನದಲ್ಲಿ ಚಂಡೀಗಢ ಮತ್ತು ಸೌರಾಷ್ಟ್ರದ ನಡುವೆ ಪಂದ್ಯಾವಳಿ ನಡೆಯಿತು.ಡಿ.11 ರಂದು ಜೆಎಸ್‌ಸಿಎ ಮೈದಾನಗಳಲ್ಲಿ ಚಂಡೀಗಢ ಮತ್ತು ದೆಹಲಿ ನಡುವೆ, ಡಿ.12 ರಂದು ಚತ್ತೀಸ್‌ಗಢ ಮತ್ತು ಪಂಜಾಬ್ ಮತ್ತು ಹಿಮಾಚಲ ಪ್ರದೇಶ್ ಮತ್ತು ಸೌರಾಷ್ಟ್ರಗಳ ನಡುವೆ ನಡೆಯಲಿದೆ. ಡಿ.17 ರಂದು ಹಿಮಾಚಲ ಪ್ರದೇಶ ಮತ್ತು ದೆಹಲಿ, ಡಿ.18 ರಂದು ಚತ್ತೀಸ್‌ಗಢ ಮತ್ತು ಪಂಜಾಜ್, 19 ರಂದು ಚಂಡೀಗಢ ಮತ್ತು ಪಂಜಾಬ್ ನಡುವೆ ಪಂದ್ಯಾವಳಿಗಳು ನಡೆಯಲಿವೆ. ಡಿ.22 ರಂದು ಚತ್ತೀಸ್‌ಗಢ ಮತ್ತು ಚಂಡೀಗಢ, ಡಿ.23 ರಂದು ದೆಹಲಿ ಮತ್ತು ಸೌರಾಷ್ಟ್ರ, ಡಿ.24 ರಂದು ಹಿಮಾಚಲ ಪ್ರದೇಶ ಮತ್ತು ಪಂಜಾಬ್ ನಡುವೆ ಪಂದ್ಯಾವಳಿಗಳು ನಡೆಯಲಿದೆ.
ಡಿ.28 ರಂದು ಪಂಜಾಬ್ ಮತ್ತು ಸೌರಾಷ್ಟ್ರ, ಡಿ.29 ರಂದು ಚಂಡೀಗಡ ಮತ್ತು ಹಿಮಾಚಲ ಪ್ರದೇಶ, ಡಿ.30 ರಂದು ಚತ್ತೀಸ್ ಗಢ ಮತ್ತು ದೆಹಲಿ ನಡುವೆ ಪಂದ್ಯಾವಳಿಗಳು ನಡೆಯಲಿದೆ.