ಸಾರಾಂಶ
ಶನಿವಾರ ಬೆಳಗ್ಗೆ ಉಷಾಃ ಪೂಜೆಯಾಗಿ ಬೆಳಗ್ಗಿನ ಪೂಜೆ, ನಾಗತಂಬಿಲ, ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಸೇವೆ ನಡೆದು, ರಾತ್ರಿ ಪೂಜೆಯಾಗಿ ಪ್ರಸಾದ ವಿತರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಕೇಶವರಾಜ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆದವು.
ಉಪ್ಪಿನಂಗಡಿ: ಇಲ್ಲಿನ ಗ್ರಾಮ ದೇವಾಲಯವಾದ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.೭ರ ಶನಿವಾರದಂದು ಷಷ್ಠಿ ಉತ್ಸವ ಮತ್ತು ಬಲಿವಾಡು ಕೂಟ ವಿಜೃಂಭಣೆಯಿಂದ ನಡೆಯಿತು.ಷಷ್ಠಿಯ ಮೊದಲು ಪಂಚಮಿಯ ಶುಕ್ರವಾರದಂದು ರಾತ್ರಿ ಶ್ರೀ ದೇವಾಲಯದಲ್ಲಿ ಹೂವಿನ ಪೂಜೆ ನಡೆದು, ಅನ್ನಸಂತರ್ಪಣೆ ನಡೆಯಿತು. ಶನಿವಾರ ಬೆಳಗ್ಗೆ ಉಷಾಃ ಪೂಜೆಯಾಗಿ ಬೆಳಗ್ಗಿನ ಪೂಜೆ, ನಾಗತಂಬಿಲ, ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಸೇವೆ ನಡೆದು, ರಾತ್ರಿ ಪೂಜೆಯಾಗಿ ಪ್ರಸಾದ ವಿತರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಕೇಶವರಾಜ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆದವು.
ಈ ಸಂದರ್ಭ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಉದಯಶಂಕರ ಭಟ್ಟ, ಉಪಾಧ್ಯಕ್ಷ ಸುರೇಶ್ ಅತ್ರೆಮಜಲು, ಕಾರ್ಯದರ್ಶಿ ಕೇಶವ ಗೌಡ ರಂಗಾಜೆ, ಜೊತೆ ಕಾರ್ಯದರ್ಶಿ ರಾಮಣ್ಣ ಶೆಟ್ಟಿ ಬೊಳ್ಳಾವು, ಖಜಾಂಚಿ ರಾಮಚಂದ್ರ ಮಣಿಯಾಣಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಜಗದೀಶ ರಾವ್ ಮಣಿಕ್ಕಳ, ಉಪಾಧ್ಯಕ್ಷ ಡಿ. ಚಂದಪ್ಪ ಮೂಲ್ಯ, ಡಾ. ರಾಜಾರಾಮ್ ಕೆ.ಬಿ., ಪ್ರತಾಪ್ ಯು. ಪೆರಿಯಡ್ಕ, ಪ್ರಧಾನ ಕಾರ್ಯದರ್ಶಿ ಎನ್. ಜಯಗೋವಿಂದ ಶರ್ಮ, ಜೊತೆ ಕಾರ್ಯದರ್ಶಿ ಸುರೇಶ್ ಗೌಂಡತ್ತಿಗೆ, ವಿವಿಧ ಸಮಿತಿಯ ಪದಾಧಿಕಾರಿಗಳಾದ ಸುನೀಲ್ ಕುಮಾರ್ ದಡ್ಡು, ಚಿದಾನಂದ ಪಂಚೇರು ಶಾಂಭವಿ ರೈ ಪುಳಿತ್ತಡಿ, ಹರೀಶ್ವರ ಮೊಗ್ರಾಲ್, ಶಂಕರನಾರಾಯಣ ಭಟ್ ಬೊಳ್ಳಾವು ಮೊದಲಾದವರು ಉಪಸ್ಥಿತರಿದ್ದರು.