ವಿಜಯದಾಸರ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ

| Published : Apr 22 2024, 02:23 AM IST

ಸಾರಾಂಶ

ವಿಜಯಪುರ: ವಿಜಯದಾಸರ ಮಹಿಮೆ ಹಾಗೂ ದಾಸ ಸಾಹಿತ್ಯದ ಮಹತ್ವ ಸಮಾಜಕ್ಕೆ ಸಂದೇಶ ಹಾಗೂ ಭಗವಂತನ ಅನುಗ್ರಹ ಪಡೆಯಲು ದಾಸ ಸಾಹಿತ್ಯ ನೀಡಿದ ಕೊಡುಗೆ ಸನ್ಮಾರ್ಗ ತುಂಬಾ ಅದ್ಭುತವಾಗಿದೆ. ಕಾರಣ ಇಂದು ಸಮಾಜಕ್ಕೆ ಮಾನವ ಕುಲಕ್ಕೆ ತುಂಬಾ ಮಾದರಿಯಾಗಿದೆ ಎಂದು ಹಿರಿಯ ಕಲಾವಿದರಾದ ಅಂಬಾದಾಸ ಜೋಶಿ ಅಭಿಪ್ರಾಯ ಪಟ್ಟರು.

ನಗರದ ಜಯಶ್ರೀ ಚಿತ್ರಮಂದಿರದಲ್ಲಿ ದಾಸವರಣ್ಯ ವಿಜಯದಾಸರ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ಸಮಾರಂಭದಲ್ಲಿ ಮಾತನಾಡಿದರು.

ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆನಂದ ಜೋಶಿ ಮಾತನಾಡಿ, ಬಹುಮುಖ್ಯವಾಗಿ ದಾಸ ಸಾಹಿತ್ಯದ ಮಹತ್ವ ಸಿದ್ಧಾಂತ ಸಂದೇಶ ಎಲ್ಲವೂ ಇಂದಿಗೆ ಅತೀ ಅವಶ್ಯ ಎಂದರು.

ನಿರ್ಮಾಪಕ ತ್ರಿವಿಕ್ರಮ ಜೋಶಿ, ನಿರ್ದೇಶಕ ಡಾ.ಮಧುಸೂದನ ಹವಾಲ್ದಾರ್‌ ಹಾಗೂ ಚಲನಚಿತ್ರ ತಂಡದವರಿಗೆ ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ಸಂಪತ ಕುಲಕರ್ಣಿ, ಕೃಷ್ಣಾಜಿ ಕುಲಕರ್ಣಿ, ಗೋವಿಂದ ದೇಶಪಾಂಡೆ, ಬಾಬಾನಗರ ಶಿಕ್ಷಕರು, ಚಿತ್ರಮಂದಿರ ಮಾಲಿಕ ಜೋಶಿಯವರು, ಸುಧೀಂದ್ರ ಕುಲಕರ್ಣಿ, ಆನಂದ ಕುಲಕರ್ಣಿ, ಅಮೋಘಸಿದ್ದರು ಇದ್ದರು.