ಮತದಾನ ಜಾಗೃತಿ ವಾಹನಕ್ಕೆ ಚಾಲನೆ

| Published : Apr 01 2024, 12:52 AM IST

ಸಾರಾಂಶ

ಕಮತಗಿ: ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ವಾಹನಗಳಿಗೆ ಜಿಂಗಲ್ಸ್ ಹಾಕಿ ಮತದಾನದ ಮಹತ್ವ ಹಾಗೂ ಅರಿವು ಕುರಿತು ಜಾಗೃತಿ ಮೂಡಿಸುವ ವಾಹನಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಇ ಚಾಲನೆ ನೀಡಿದರು. ಮೇ.07 ರಂದು ನಡೆಯಲಿರುವ ಲೋಕಸಭೆಯ ಮತದಾನಲ್ಲಿ ಎಲ್ಲರೂ ತಪ್ಪದೆ ಮತನಾದ ಮಾಡುವಂತೆ ಹೇಳಿದರು.

ಕಮತಗಿ: ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ವಾಹನಗಳಿಗೆ ಜಿಂಗಲ್ಸ್ ಹಾಕಿ ಮತದಾನದ ಮಹತ್ವ ಹಾಗೂ ಅರಿವು ಕುರಿತು ಜಾಗೃತಿ ಮೂಡಿಸುವ ವಾಹನಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಇ ಚಾಲನೆ ನೀಡಿದರು. ಮೇ.07 ರಂದು ನಡೆಯಲಿರುವ ಲೋಕಸಭೆಯ ಮತದಾನಲ್ಲಿ ಎಲ್ಲರೂ ತಪ್ಪದೆ ಮತನಾದ ಮಾಡುವಂತೆ ಹೇಳಿದರು. ಜೊತೆಗ ಮತದಾನದ ಕುರಿತು ಎಲ್ಲರಲ್ಲೂ ಜಾಗೃತಿ ಮೂಡಿಸುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಮತದಾನದ ಮಹತ್ವ ಬಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಕಿರಿಯ ಆರೋಗ್ಯ ನಿರಿಕ್ಷಕ ಎಸ್ ಎಂ ಸರಗಣಾಚಾರಿ, ಕನಕಪ್ಪ ಮರ್ಜಿ, ಆರ್‌.ಎಸ್ ಪದಕಿ, ಶೈಲಾ ಚಲವಾದಿ, ಶಿವು ಲಮಾಣಿ, ಸುನೀಲ ವಂದಗನೂರ, ಮಹೇಶ ಪೂಜಾರಿ, ಮಂಜುನಾಥ ಚಲವಾದಿ, ಸಿದ್ದಪ್ಪ ಮಾದರ, ಸಂತೋಷ ಎಲಿಗಾರ, ಸವಿತಾ ಹೆಗ್ಗನಾಯ್ಕ ಸೇರಿದಂತೆ ಹಲವರು ಇದ್ದರು.