ಸುಂಟಿಕೊಪ್ಪದ ಮಿಡ್‌ಸಿಟಿ ವತಿಯಿಂದ 3ನೇ ವರ್ಷದ ರಾಷ್ಟ್ರ ಮಟ್ಟದ 5 ಮಂದಿ ಆಟಗಾರರ ಫುಟ್ಬಾಲ್ ಪಂದ್ಯಾವಳಿಯನ್ನು ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್‌ಕುಮಾರ್ ಶುಕ್ರವಾರ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪದ ಮಿಡ್‌ಸಿಟಿ ವತಿಯಿಂದ 3ನೇ ವರ್ಷದ ರಾಷ್ಟ್ರ ಮಟ್ಟದ 5 ಮಂದಿ ಆಟಗಾರರ ಫುಟ್ಬಾಲ್ ಪಂದ್ಯಾವಳಿಯನ್ನು ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್‌ಕುಮಾರ್ ಶುಕ್ರವಾರ ಚಾಲನೆ ನೀಡಿದರು.ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿತಗೊಂಡಿರುವ 3 ದಿನಗಳ ಕಾಲ ಹೊನಲು ಬೆಳಕಿನ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿದರು. ಇದೇ ವೇಳೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ಆರ್.ಸುನಿಲ್‌ಕುಮಾರ್, ಕಡಗಾದಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಯಣ್ಣ, ಬ್ಲೂಬಾಯ್ಸ್ ಯುವಕ ಸಂಘದ ವ್ಯವಸ್ಥಾಪಕ ಟಿ.ಯು.ಪ್ರಸನ್ನ, ಮಿಡ್‌ಸಿಟಿ ಸಂಘದ ಹಮೀದ್ ಸೇರಿದಂತೆ ಹಾಜರಿದ್ದರು. ಈ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ 32 ತಂಡಗಳು ನೊಂದಾವಣೆಗೊಂಡಿದೆ. ಉದ್ಘಾಟನಾ ಪಂದ್ಯಾವಳಿಯು ಗೋವಾ ಮತ್ತು ಮಿಡ್‌ಸಿಟಿ ಜೂನಿಯರ್ ತಂಡಗಳ ನಡುವೆ ನಡೆಯಿತು.