ಸಾರಾಂಶ
ಚನ್ನಪಟ್ಟಣ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವ್ಯಕ್ತಿಯೊಬ್ಬರು ಬಿಟ್ಟು ಹೋಗಿದ್ದ ಚಿನ್ನದಸರವನ್ನು ಬಸ್ ಚಾಲಕ ಹಾಗೂ ನಿರ್ವಾಹಕ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದು, ವಾರಸುದಾರರಿಗೆ ಚಿನ್ನದ ಸರವನ್ನು ಪೊಲೀಸರು ನೀಡಿದ್ದಾರೆ. ಚನ್ನಪಟ್ಟಣದಿಂದ ಕಬ್ಬಾಳು ಮಾರ್ಗದ ಮಧ್ಯೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿನ ಯಲಹಂಕದ ನಿವಾಸಿ ಗಣೇಶ್ ಎಂಬವರು 20 ಗ್ರಾಂ ತೂಕದ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಇದನ್ನು ಕೆಎಸ್‌ಆರ್‌ಟಿಸಿ ಬಸ್ ಚಾಲಕ ಶೇಖರ್ ಹಾಗೂ ನಿರ್ವಾಹಕ ಶಿವಪ್ಪ ವಾಲೀಕಾರ್ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದರು. ಚಿನ್ನದ ಸರವನ್ನು ಪೊಲೀಸರು ವಾರಸುದಾರರಿಗೆ ಒಪ್ಪಿಸಿದ್ದು, ಚಿನ್ನದ ಸರವನ್ನು ತಂದು ಕೊಟ್ಟು ಪ್ರಾಮಾಣಿಕತೆ ಮರೆದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಶೇಖರ್ ಹಾಗೂ ನಿರ್ವಾಹಕ ಶಿವಪ್ಪ ವಾಲೀಕಾರ್ ಅವರನ್ನು ನಗರ ವೃತ್ತ ನಿರೀಕ್ಷಕ ರವಿಕಿರಣ್ ಹಾಗೂ ಪಿಎಸ್‌ಐ ಉಷಾನಂದಿನಿ ಅಭಿನಂದಿಸಿದರು. ಪೊಟೋ೧೮ಸಿಪಿಟಿ೩: ಚಿನ್ನದ ಸರವನ್ನು ತಂದು ಕೊಟ್ಟು ಕೆಎಸ್‌ಆರ್‌ಟಿಸಿ ಬಸ್ ಚಾಲಕ ಶೇಖರ್ ಹಾಗೂ ನಿರ್ವಾಹಕ ಶಿವಪ್ಪ ವಾಲೀಕಾರ್ ಅವರನ್ನು ನಗರ ವೃತ್ತ ನಿರೀಕ್ಷಕ ರವಿಕಿರಣ್ ಹಾಗೂ ಪಿಎಸ್‌ಐ ಉಷಾನಂದಿನಿ ಅಭಿನಂದಿಸಿದರು.