ಪ್ರಯಾಣಿಕರ ಸುರಕ್ಷತೆಯೇ ಚಾಲಕರ ಮೂಲ ಕರ್ತವ್ಯ: ಪರಮೇಶ್ವರ ಕವಟಗಿ

| Published : Jan 26 2024, 01:50 AM IST

ಪ್ರಯಾಣಿಕರ ಸುರಕ್ಷತೆಯೇ ಚಾಲಕರ ಮೂಲ ಕರ್ತವ್ಯ: ಪರಮೇಶ್ವರ ಕವಟಗಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ಸಮಯ ಪ್ರಜ್ಞೆ, ಸಂಚಾರಿ ನಿಯಮ ಪಾಲನೆ, ಪ್ರಯಾಣಿಕರ ಸುರಕ್ಷತೆಗಳನ್ನು ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸುವವನೇ ಉತ್ತಮ ಚಾಲಕ ಎಂದು ಗಾಂಧಿಚೌಕ ಸಂಚಾರಿ ಠಾಣೆಯ ವೃತ್ತ ಪೊಲೀಸ್ ನಿರೀಕ್ಷಕ ಪರಮೇಶ್ವರ ಕವಟಗಿ ಹೇಳಿದರು. ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಹಾಗೂ ವಿಜಯಪುರ ಸಂಚಾರಿ ಪೊಲೀಸ್ ಠಾಣೆ ಆಶ್ರಯದಲ್ಲಿ ವಾಹನ ಚಾಲಕರಿಗಾಗಿ ನಡೆದ ಸಂಚಾರಿ ನಿಯಮಗಳ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಯ ಪ್ರಜ್ಞೆ, ಸಂಚಾರಿ ನಿಯಮ ಪಾಲನೆ, ಪ್ರಯಾಣಿಕರ ಸುರಕ್ಷತೆಗಳನ್ನು ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸುವವನೇ ಉತ್ತಮ ಚಾಲಕ ಎಂದು ಗಾಂಧಿಚೌಕ ಸಂಚಾರಿ ಠಾಣೆಯ ವೃತ್ತ ಪೊಲೀಸ್ ನಿರೀಕ್ಷಕ ಪರಮೇಶ್ವರ ಕವಟಗಿ ಹೇಳಿದರು.

ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಹಾಗೂ ವಿಜಯಪುರ ಸಂಚಾರಿ ಪೊಲೀಸ್ ಠಾಣೆ ಆಶ್ರಯದಲ್ಲಿ ವಾಹನ ಚಾಲಕರಿಗಾಗಿ ನಡೆದ ಸಂಚಾರಿ ನಿಯಮಗಳ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಯಾಣಿಕರ ಪ್ರಾಣವೇ ಚಾಲಕರ ಕೈಯಲ್ಲಿರುತ್ತದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಚಾಲಕರ ಪಾತ್ರ ಪ್ರಮುಖವಾಗಿದೆ. ಚಾಲಕರ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಚಾಲಕರು ಯಾವುದೇ ರೀತಿಯ ವ್ಯಸನಕ್ಕೆ ಒಳಗಾಗಬಾರದು. ಪ್ರಯಾಣಿಕರ ಸುರಕ್ಷತೆಯೇ ತಮ್ಮ ಕರ್ತವ್ಯ ಎಂದು ತಿಳಿದು ವಾಹನ ಚಲಾಯಿಸಬೇಕು. ಉತ್ತಮ ವಾಹನ ಚಲಾವಣೆಯೂ ಒಂದು ಕಲೆ. ಆ ಕಲೆಯನ್ನು ಗೌರವಿಸುತ್ತಾ ವೃತ್ತಿ ನೈಪುಣ್ಯತೆ ಮೈಗೂಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಎಂಬಿಎ ವಿಭಾಗದ ಡಾ.ಮುರಗೇಶ ಪಟ್ಟಣಶೆಟ್ಟಿ ಮಾತನಾಡಿ, ಸುದೀರ್ಘ ಇತಿಹಾಸ ಇರುವ ಬಿಎಲ್‌ಡಿಇ ಸಂಸ್ಥೆಯೂ ಉತ್ತಮ ಚಾಲಕರನ್ನು ಹೊಂದಿದೆ. ಯಾವುದೇ ಅಪಘಾತ ನಡೆಯದಂತೆ ಚಾಲನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಬಿಎಲ್‌ಡಿಇ ಸಂಸ್ಥೆಯ ವಾಹನ ಚಾಲಕರ ಮೇಲ್ವಿಚಾರಕ ಎಸ್.ಎಂ.ರೋಣದ, ಉಪಮೇಲ್ವಿಚಾರಕ ಸೋಮನಾಥ ಹ್ಯಾಟಿ, ದೈಹಿಕ ಶಿಕ್ಷಕ ಅಮರ ಬಿಸನಾಳ ಸೇರಿದಂತೆ ೬೦ ಕ್ಕೂ ಹೆಚ್ಚು ಜನ ಚಾಲಕರು ಸಂಚಾರಿ ನಿಮಯಗಳ ಕುರಿತು ಮಾಹಿತಿ ಪಡೆದುಕೊಂಡರು.