ಸಾರಾಂಶ
ಕಮಲನಗರ ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ದಕ್ಷಿಣ ಮಧ್ಯ ರೈಲ್ವೇ ವಿಭಾಗದ ಅಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕನ್ನಡಪ್ರಭ ವಾರ್ತೆ ಕಮಲನಗರಕಮಲನಗರ ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ದಕ್ಷಿಣ ಮಧ್ಯ ರೈಲ್ವೇ ವಿಭಾಗದ ಅಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.ವಿಭಾಗೀಯ ರೈಲ್ವೆ ಅಧಿಕಾರಿ ಭರ್ತೆಶ ಕುಮಾರ ಜೈನ್, ಹೊಸದಾಗಿ ನಿರ್ಮಾಣವಾಗುತ್ತಿರುವ 2 ಪ್ಲಾಟ್ ಫಾರಂಗಳ ಸ್ಥಳದ ಸೌಲಭ್ಯ, ಸೇವೆಗಳನ್ನು ಪರಿಶೀಲಿಸಿದರು.ತಪಾಸಣೆ ವೇಳೆ ಅಧಿಕಾರಿಗಳು ನಿಲ್ದಾಣಗಳಲ್ಲಿ ಸ್ವಚ್ಛತೆ, ಪ್ರಯಾಣಿಕರ ಸೌಕರ್ಯ, ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅವರು ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿ, ಪ್ರಯಾಣಿಕರ ದೂರುಗಳಿಗೆ ತ್ವರಿತ ಸ್ಪಂದಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ನಾಗರಿಕ ಸೇವಾ ಸಮಿತಿ ತಾಲೂಕಾಧ್ಯಕ್ಷ ದಿಲೀಪ ಮುದಾಳೆ ನೇತೃತ್ವದಲ್ಲಿ, ತಡೆ ರಹಿತ ರೈಲುಗಳೂ ಸಹ ಈ ನಿಲ್ದಾಣದಲ್ಲಿ ನಿಲ್ಲಬೇಕು ಎಂದು ಮನವಿ ಪತ್ರ ನೀಡಲಾಯಿತು. ಮನವಿ ಸ್ವೀಕರಿಸಿದ ಅಧಿಕಾರಿಗಳು ರೈಲುಗಳು ನಿಲ್ಲುವ ಭರವಸೆ ನೀಡಿದರು.
ಮಹೇಶ ಬಿರಾದಾರ, ಜ್ಞಾನೋಬಾ ಕಾಂಬಳೆ, ಶಾಲಿವಾನ ಡೊಂಗ್ರೆ , ಛಗನ, ಶಬ್ಬಿರ ಖುರೇಶಿ, ರಾಮ, ರೈತ ಸಂಘದ ತಾಲುಕಾಧ್ಯಕ್ಷ ಪ್ರವೀಣ ಕುಲಕರ್ಣಿ ಇದ್ದರು.