ಎಂಸಿಇ ಕಾಲೇಜಿನ ಆವರಣದಲ್ಲಿ ಗಮನಸೆಳೆದ ಡ್ರೋನ್ ಶೋ

| Published : Jul 26 2025, 12:30 AM IST

ಸಾರಾಂಶ

ಮಲೆನಾಡು ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮೀ ರೆಸ್ ಫೌಂಡೇಶನ್ ಮತ್ತು ಜಟ್ಕಿಂಗ್ ಕಂಪನಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡ್ರೋನ್ ಹಾರಿಸುವ ಶೋ ಕಾರ್ಯಕ್ರಮವು ನೂರಾರು ಮಕ್ಕಳ ಎದುರು ಯಶಸ್ವಿಯಾಗಿ ಜರುಗಿತು. ಈ ಡ್ರೋನ್ ರೈತ ಸಂಕುಲಕ್ಕೆ ಉಪಯುಕ್ತವಾಗಿದೆ. ಡ್ರೋನ್ ಎಂದರೇ ಕ್ಯಾಮರಾ ಒಂದೇ ಮಾತ್ರವಲ್ಲ. ರೈತ ಬೆಳೆಯುವ ಕೃಷಿ ಬೆಳೆಗಳಿಗೆ ಔಷಧಿ ಸಿಂಪಡಣೆ ಇರಬಹುದು, ಕಳೆ ನಾಶಕ ಸಿಂಪಡಣೆ ಇರಬಹುದು ಎಲ್ಲಾ ರೀತಿಯಲ್ಲೂ ರೈತ ಸಂಕುಲಕ್ಕೆ ಉಪಯುಕ್ತವಾದಂತಹ ಈ ಡ್ರೋನ್ ಸಂಸ್ಥೆ ನಮ್ಮ ಮಲೆನಾಡು ಶಿಕ್ಷಣ ಸಂಸ್ಥೆಯಲ್ಲಿ ದೊಡ್ಡ ಕಂಪನಿಯಾಗಿ ಇರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮೀ ರೆಸ್ ಫೌಂಡೇಶನ್ ಮತ್ತು ಜಟ್ಕಿಂಗ್ ಕಂಪನಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡ್ರೋನ್ ಹಾರಿಸುವ ಶೋ ಕಾರ್ಯಕ್ರಮವು ನೂರಾರು ಮಕ್ಕಳ ಎದುರು ಯಶಸ್ವಿಯಾಗಿ ಜರುಗಿತು.

ಇದೇ ವೇಳೆ ಮಲೆನಾಡು ತಾಂತ್ರಿಕ ಕಾಲೇಜು ಅಧ್ಯಕ್ಷ ಆರ್.ಟಿ. ದ್ಯಾವೇಗೌಡ ಮಾತನಾಡಿ, ಓದುವುದರ ಜೊತೆಗೆ ಇಂತಹ ಒಂದು ಸಾಧನೆ ಮಾಡುವ ಮನೋಭಾವ ಮಕ್ಕಳಲ್ಲಿ ಬರಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅದರ ವಿಶಿಷ್ಟಗಳನ್ನು ತಿಳಿದುಕೊಂಡು ಮುಂದೆ ಜೀವನದಲ್ಲಿ ಉತ್ತಮ ಪ್ರಜೆಗಳಾಗಿ ಈ ದೇಶದ ಮತ್ತು ರಾಜ್ಯದ ಹೆಸರನ್ನು ಬೆಳೆಸಿ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು.

ಎಂಸಿಇ ಕಾಲೇಜು ಪ್ರಧಾನ ಕಾರ್ಯದರ್ಶಿ ಜಗದೀಶ್ ಚೌಡಹಳ್ಳಿ ಮಾತನಾಡಿ, ಪ್ರಸ್ತುತದಲ್ಲಿ ಹೊಸ ಯುಗಕ್ಕೆ ಕಾಲಿಡುವ ಸನ್ನಿವೇಶ. ಡ್ರೋನ್ ಹಾರಿಸುತ್ತಿರುವವರು ಡಿಗ್ರಿ ಮಾಡಿರುವ ವಿದ್ಯಾರ್ಥಿಗಳಲ್ಲ. ಪಿಯುಸಿ ಮುಗಿಸಿ ಮುಂದಿನ ಶಿಕ್ಷಣಕ್ಕೆ ಸಜ್ಜಾಗಿರುವ ವಿದ್ಯಾರ್ಥಿಗಳಿಗೆ ಮೀ ರೆಸ್ ಫೌಂಡೇಶನ್ ಮತ್ತು ಜಟ್ಕಿಂಗ್ ಕಂಪನಿ ಬೆಂಗಳೂರು ಇವರ ಸಹಯೋಗದಲ್ಲಿ ಈ ಒಂದು ಕಾರ್ಯವನ್ನು ಮೂರು ದಿನಗಳ ಕಾಲ ಯಶಸ್ವಿಯಾಗಿ ತರಬೇತಿ ಪಡೆದು ಅದರ ಉಪಯೋಗವನ್ನು ವಿದ್ಯಾರ್ಥಿಗಳಿಗೆ ಪ್ರಸ್ತುತ ಪಡಿಸುತ್ತಿದ್ದಾರೆ ಎಂದರು. ಈ ಡ್ರೋನ್ ರೈತ ಸಂಕುಲಕ್ಕೆ ಉಪಯುಕ್ತವಾಗಿದೆ. ಡ್ರೋನ್ ಎಂದರೇ ಕ್ಯಾಮರಾ ಒಂದೇ ಮಾತ್ರವಲ್ಲ. ರೈತ ಬೆಳೆಯುವ ಕೃಷಿ ಬೆಳೆಗಳಿಗೆ ಔಷಧಿ ಸಿಂಪಡಣೆ ಇರಬಹುದು, ಕಳೆ ನಾಶಕ ಸಿಂಪಡಣೆ ಇರಬಹುದು ಎಲ್ಲಾ ರೀತಿಯಲ್ಲೂ ರೈತ ಸಂಕುಲಕ್ಕೆ ಉಪಯುಕ್ತವಾದಂತಹ ಈ ಡ್ರೋನ್ ಸಂಸ್ಥೆ ನಮ್ಮ ಮಲೆನಾಡು ಶಿಕ್ಷಣ ಸಂಸ್ಥೆಯಲ್ಲಿ ದೊಡ್ಡ ಕಂಪನಿಯಾಗಿ ಇರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಎ.ಜೆ. ಕೃಷ್ಣಯ್ಯ ಮಾತನಾಡಿ, ಡ್ರೋನ್ ಅನ್ನು ತಯಾರು ಮಾಡುವಂತದ್ದು, ಅದನ್ನ ಡಿಸೈನ್ ಮಾಡುವುದು ಹಾಗೂ ಅದನ್ನ ಅಸಂಬಲ್ ಮಾಡಿ ಈಗ ಹಾರಿಸಿದ್ದಾರೆ. ಪ್ರಸ್ತುತದಲ್ಲಿ ಟೆಕ್ನಾಲಜಿ ಮುಂದುವರೆದಿದ್ದು, ಇದರಿಂದಲೇ ದೇಶದ ಅಭಿವೃದ್ಧಿ ಮತ್ತಿತರ ವಿನ್ಯಾಸಗಳನ್ನು ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಾಗಿದೆ ಎಂದರು. ಇವತ್ತು ಡ್ರೋನ್ ಹಬ್ಬದ ರೀತಿ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಹೋಲಿ ಚಿಲ್ಡ್ರನ್ ಶಾಲೆಯ ಗಿರೀಶ್, ಡೀನ್ ಗೀತಾ ಕಿರಣ್, ವಿವಿಧ ಶಾಲಾ ಕಾಲೇಜಿನ ಮಕ್ಕಳು ಭಾಗವಹಿಸಿದ್ದರು.