ಕ್ಷೇತ್ರದ ಮಾಜಿ ಶಾಸಕರಾದ ಎಚ್.ಪಿ. ರಾಜೇಶ್ ತಮ್ಮ 61ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಜಗಳೂರಿನ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸುವ ಮೂಲಕ ಭಾನುವಾರ ಕಾರ್ಯಕರ್ತರೊಂದಿಗೆ ಸರಳವಾಗಿ ಆಚರಿಸಿಕೊಂಡರು.
- ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಬ್ರೆಡ್ ವಿತರಣೆ । ಕುಶಲೋಪರಿ ವಿಚಾರಣೆ
- - -ಕನ್ನಡಪ್ರಭ ವಾರ್ತೆ ಜಗಳೂರು
ಕ್ಷೇತ್ರದ ಮಾಜಿ ಶಾಸಕರಾದ ಎಚ್.ಪಿ. ರಾಜೇಶ್ ತಮ್ಮ 61ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಜಗಳೂರಿನ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸುವ ಮೂಲಕ ಭಾನುವಾರ ಕಾರ್ಯಕರ್ತರೊಂದಿಗೆ ಸರಳವಾಗಿ ಆಚರಿಸಿಕೊಂಡರು.ಹುಟ್ಟುಹಬ್ಬದ ಅಂಗವಾಗಿ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕರು, ರೋಗಿಗಳಿಗೆ ಕೇವಲ ಹಣ್ಣು ಹಂಚುವುದಷ್ಟಕ್ಕೇ ಸೀಮಿತವಾಗದೇ, ಪ್ರತಿಯೊಬ್ಬರ ಬಳಿಗೂ ಹೋಗಿ ಆರೋಗ್ಯ ವಿಚಾರಿಸಿದ್ದು ವಿಶೇಷವಾಗಿತ್ತು. ಯಾವ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದೀರಿ? ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳು ಸಮರ್ಪಕವಾಗಿವೆಯೇ? ವೈದ್ಯರು ಸರಿಯಾಗಿ ಸ್ಪಂದಿಸಿ ಔಷಧಿ ಉಪಚಾರಗಳನ್ನು ಸಕಾಲಕ್ಕೆ ನೀಡುತ್ತಿದ್ದಾರೆಯೇ ಎಂದು ರೋಗಿಗಳಿಂದಲೇ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಕರ್ತವ್ಯದಲ್ಲಿದ್ದ ವೈದ್ಯರನ್ನು ಕರೆಸಿ, ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಯಾವುದೇ ಲೋಪವಿಲ್ಲದೇ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು.ಜನ್ಮದಿನ ಸರಳ ಆಚರಣೆ:
ಅನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಪಿ. ರಾಜೇಶ್, ಜಗಳೂರು ಕ್ಷೇತ್ರದ ಜನರ ಅಭಿಮಾನಕ್ಕೆ ನಾನು ಸದಾ ಚಿರಋಣಿ. ಈ ಬಾರಿ ನಮ್ಮ ಕ್ಷೇತ್ರದಲ್ಲಿ ತೀವ್ರ ಬರಗಾಲ ಆವರಿಸಿದೆ. ರೈತರು ಬಿತ್ತನೆ ಮಾಡಿ, ಇನ್ನು ಕೆಲವರು ಬಿತ್ತನೆಗೆ ಸಜ್ಜಾಗಿ ಮಳೆಗಾಗಿ ಕಾಯುತ್ತಿದ್ದಾರೆ. ಸಕಾಲಕ್ಕೆ ಮಳೆಯಾಗದೇ ಅನ್ನದಾತರು ಕಂಗಾಲಾಗಿರುವಾಗ ಅದ್ದೂರಿ ಆಚರಣೆ ಸೂಕ್ತವಲ್ಲ. ಹಾಗಾಗಿ, ಈ ಬಾರಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇನೆ. ಕ್ಷೇತ್ರದ 57 ಕೆರೆಗಳಿಗೆ ನೀರು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಅಂತರ್ಜಲ ವೃದ್ಧಿಸಿ ಬೋರ್‌ವೆಲ್‌ಗಳಲ್ಲಿ ಉತ್ತಮ ನೀರು ಸಿಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.ವಿವಿಧ ಗ್ರಾಮಗಳಿಂದ ಬಂದು ತಮಗೆ ಶುಭ ಹಾರೈಸಿದ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಅವರು ಧನ್ಯವಾದ ಸಮರ್ಪಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿಳಿಚೋಡು ಭೈರೇಶ್, ಬಿ.ಲೋಕೇಶ್, ಮುಖಂಡರಾದ ಬಸವಾಪುರ ರವಿಚಂದ್ರ, ಕಾನನಕಟ್ಟೆ ಪ್ರಭು, ಸೂರಲಿಂಗಪ್ಪ, ಶಿವಕುಮಾರ ಸ್ವಾಮಿ, ಗಿರೀಶ್ ಒಡೆಯರ್, ವೆಂಕಟೇಶ್, ಎಸ್.ಎನ್. ತಿಪ್ಪೇಸ್ವಾಮಿ, ತಮಲೇಹಳ್ಳಿ ಮಾರುತಿ, ನಾಗರಾಜ್, ರೇವಣ್ಣ, ತಿಮ್ಮರಾಯಪ್ಪ, ಸಿದ್ದಪ್ಪ, ಅಂಜಿನಪ್ಪ, ರಮೇಶ್, ರಾಜಣ್ಣ, ಶ್ರೀನಿವಾಸ್, ಮಂಜು, ಪರಶುರಾಮ್, ಅನಿಲ್, ಮದಕರಿ, ಸ್ವಾಮಿ ಸೇರಿದಂತೆ ಬಿಜೆಪಿ ಪ್ರಮುಖ ಮುಖಂಡರು, ನೂರಾರು ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದು ನೆಚ್ಚಿನ ನಾಯಕನಿಗೆ ಶುಭ ಹಾರೈಸಿದರು.
- - --13ಜೆ.ಜಿ.ಎಲ್1:
ಜಗಳೂರು ಪಟ್ಟಣದಲ್ಲಿ ಭಾನುವಾರ ಹುಟ್ಟುಹಬ್ಬ ಅಂಗವಾಗಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ರೋಗಿಗಳ ಕ್ಷೇಮ ಸಮಾಚಾರ ವಿಚಾರಿಸಿದರು.