ಜೆಡಿಎಸ್‌ ಮುಖಂಡರಿಂದ ಬರ ಅಧ್ಯಯನ

| Published : Nov 09 2023, 01:02 AM IST

ಸಾರಾಂಶ

ಜೆಡಿಎಸ್‌ ಪಕ್ಷದ ಮುಖಂಡರ ಆದೇಶದಂತೆ ದೇವನಹಳ್ಳಿ ತಾಲೂಕಿನ ಸೋಮತ್ತನಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ಜೆಡಿಎಸ್‌ ಮುಖಂಡರು ಹಾಗೂ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭೇಟಿ ನೀಡಿ ರೈತರ ಕಷ್ಟಸುಖ ವಿಚಾರಿಸಿದರು.

ದೇವನಹಳ್ಳಿ: ಜೆಡಿಎಸ್‌ ಪಕ್ಷದ ಮುಖಂಡರ ಆದೇಶದಂತೆ ತಾಲೂಕಿನ ಸೋಮತ್ತನಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ಜೆಡಿಎಸ್‌ ಮುಖಂಡರು ಹಾಗೂ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭೇಟಿ ನೀಡಿ ರೈತರ ಕಷ್ಟಸುಖ ವಿಚಾರಿಸಿದರು.

ಜೆಡಿಎಸ್‌ ಪಕ್ಷದ ಜಿಲ್ಲಾಧ್ಯಕ್ಷ ಬಿ. ಮುನೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಧಾನಪರಿಷತ್‌ ಮಾಜಿ ಸದಸ್ಯ ಇ.ಕೃಷ್ಣಪ್ಪ, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ನೆಲಮಂಗಲ ಮಾಜಿ ಶಾಸಕ ಶ್ರೀನಿವಾಸಮೂರ್ತಿ, ಪಿಎಲ್ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಮುನಿರಾಜು ಹಾಗು ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ದೇವರಾಜು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರೈತರು ಮಾತನಾಡಿ, ನಮಗೆ ಅಕಾಲಿಕ ಮಳೆ ಬಂದು ಬರುವ ಬೆಳೆ ಸಹ ನೆಲಕಚ್ಚಿದೆ, ಸರ್ಕಾರ ಹೊಸ ವಿದ್ಯುತ್‌ ಬಳಕೆಗೆ ಸುಮಾರು ಎರಡು ಲಕ್ಷ ರು. ವೆಚ್ಚಮಾಡಬೇಕೆಂದು ಮಾಡಿರುವುದನ್ನು ವಾಪಸ್‌ ಪಡೆಯಬೇಕು ಹಿಂದಿನಂತೆ ವಿದ್ಯತ್‌ ಕಂಪನಿಗಳು ರೈತರಿಗೆ ನೆರವಾಗಬೇಕು. ಅಲ್ಲದೆ ರೈತ ಬೆಳೆದ ಎಲ್ಲ ತರಕಾರಿ ಹಾಗೂ ಹೂವಿಗೆ ಸಹ ಬೆಲೆ ಕಡಿಮೆಯಾಗಿದ್ದು ರೈತರ ಗೋಳು ಕೇಳುವವರಿಲ್ಲ ಎಂದು ಆರೋಪಿಸಿದರು

ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಗ್ಯಾರಂಟಿಗಳ ಆಶ್ವಾಸನೆಯಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ತನ್ನ ಗ್ಯಾರಂಟಿಗಳನ್ನು ಸರಿಯಾಗಿ ಈಡೇರಿಸಲಾಗದೆ. ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ನಡೆಯುತ್ತಿಲ್ಲ ಕೇವಲ ಹಣ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು. ರೈತರ ಬೇಡಿಕೆಗಳನ್ನು ಕುಮಾರಣ್ಣನವರಿಗೆ ತಿಳಿಸಿ ನಂತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದಲ್ಲಿ ಒತ್ತಾಯ ತರುತ್ತೇವೆ ಎಂದರು .

ಸಮಾರಂಭದಲ್ಲಿ ದೇವರಾಜು ಹಾಗೂ ಚನ್ನರಾಯಪಟ್ಟಣ ಗ್ರಾ.ಪಂ ಅಧ್ಯಕ್ಷ ಮಾರೇಗೌಡ ಉಪಸ್ಥಿತರಿದ್ದರು