ಮಾದಕ ವಸ್ತುಗಳ ವ್ಯಸನದಿಂದ ಸಾಮಾಜಿಕ ವ್ಯವಸ್ಥೆಗೆ ಅಪಾಯ

| Published : Jul 01 2025, 01:48 AM IST

ಸಾರಾಂಶ

ಮಾದಕ ವಸ್ತುಗಳ ವ್ಯಸನಿಯಿಂದಾಗಿ ಕೇವಲ ಕುಟುಂಬವಷ್ಟೇ ಅಲ್ಲ, ಇಡೀ ಸಾಮಾಜಿಕ ವ್ಯವಸ್ಥೆಯೇ ಹಾಳಾಗುವ ಅಪಾಯ ಇರುತ್ತದೆ ಎಂದು ಹೊನ್ನಾಳಿ ಪೊಲೀಸ್ ಇನ್‌ಸ್ಪೆಕ್ಟರ್‌ ಎಚ್.ಸುನೀಲ್ ಕುಮಾರ್ ಹೇಳಿದ್ದಾರೆ.

- ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಪಿಐ ಸುನೀಲ್‌ಕುಮಾರ್‌

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಾದಕ ವಸ್ತುಗಳ ವ್ಯಸನಿಯಿಂದಾಗಿ ಕೇವಲ ಕುಟುಂಬವಷ್ಟೇ ಅಲ್ಲ, ಇಡೀ ಸಾಮಾಜಿಕ ವ್ಯವಸ್ಥೆಯೇ ಹಾಳಾಗುವ ಅಪಾಯ ಇರುತ್ತದೆ ಎಂದು ಹೊನ್ನಾಳಿ ಪೊಲೀಸ್ ಇನ್‌ಸ್ಪೆಕ್ಟರ್‌ ಎಚ್.ಸುನೀಲ್ ಕುಮಾರ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದಾವಣಗೆರೆ ಪೊಲೀಸ್, ಚನ್ನಗಿರಿ ಉಪವಿಭಾಗ ಹಾಗೂ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುರುಪಯೋಗ ಮತ್ತು ಯುವಪೀಳಿಗೆಯ ಮೇಲೆ ಅದರ ದುಷ್ಪರಿಣಾಗಳು ವಿಷಯ ಕುರಿತು ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಾಲು, ನೀರು, ಮೊಸರು ಕಬ್ಬಿನ ಹಾಲು ಮುಂತಾದವುಗಳನ್ನು ಮಾರಾಟಗಾರರು ಜನರ ಬಳಿಗೇ ಬಂದು ಮಾರಾಟ ಮಾಡುತ್ತಾರೆ. ಆದರೆ, ಮದ್ಯ, ಗುಟ್ಕಾ, ಸೇರಿದಂತೆ ನಶೆ, ಅಮಲು ಬರಿಸುವ ವಸ್ತುಗಳನ್ನು ಜನರೇ ಹುಡುಕಿಕೊಂಡು ಹೋಗಿ ಖರೀದಿಸುತ್ತಾರೆ. ಇದು ಸರಿಯಲ್ಲ. ಮಾದಕ ವಸ್ತುಗಳ ಸೇವನೆ ದುಷ್ಪರಿಣಾಗಳ ಬಗ್ಗೆ ತಾಲೂಕಿನ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ವಿಶೇಷವಾಗಿ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೆಚ್ಚು ಅರಿವು ಮೂಡಿಸಲಾಗುತ್ತಿದೆ ಎಂದರು.

ಅತಿಯಾದ ಮೊಬೈಲ್ ಬಳಕೆ ಕೂಡ ಅಪಾಯಕಾರಿ. ಯುವಜನರು ಆನ್‌ಲೈನ್‌ನಲ್ಲಿ ಮೋಸ ಹೋಗಿ ತಮ್ಮ ಜೀವನ ಹಾಳು ಮಾಡಿಕೊಂಡಿರುವ ಘಟನೆಗಳನ್ನು ದಿನನಿತ್ಯ ಕಾಣುತ್ತಿದ್ದೇವೆ. ಮಾದಕ ವಸ್ತುಗಳು ಹಾಗೂ ಹಾಗೂ ಮೊಬೈಲ್‌ಗಳಿಂದ ಆದದ್ಟೂ ದೂರವಿರಬೇಕು. ವಿದ್ಯಾಭ್ಯಾಸ ಅವಧಿಯವಲ್ಲಿ ಪೋಷಕರ ಆಶಯದಂತೆ ಹೆಚ್ಚಿನ ಸಾಧನೆ ಮಾಡಿ ಸಮಾಜಕ್ಕೆ ಉತ್ತಮ ನಾಗರಿಕರಾಗಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕ ನಿರಂಜನ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಭಾರ ಪ್ರಾಚಾರ್ಯ ಬಸವರಾಜಪ್ಪ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಪಿ.ಎಸ್.ಐ. ಕುಮಾರ್, ಉಪನ್ಯಾಸಕರು, ಪೊಲೀಸ್ ಜಗದೀಶ್, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಅನಂತರ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ, ಉಪನ್ಯಾಸಕರು ಪಟ್ಟಣದ ಟಿ.ಬಿ. ವೃತ್ತದವರಿಗೆ ಜನಜಾಗೃತಿ ಜಾಥಾ ನಡೆಸಿ ಮಾನವ ಸರಪಳಿ ನಿರ್ಮಿಸಿ ಮಾದಕ ವಸ್ತುಗಳ ಸೇವೆಯ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

- - -

(ಬಾಕ್ಸ್‌) * 112 ಮಾದರಿ ಮಾದಕ ವಸ್ತುಗಳು ಆರೋಗ್ಯ ಇಲಾಖೆ ಕ್ಷೇತ್ರದ ಹಿರಿಯ ಆರೋಗ್ಯ ಶಿಕ್ಷಕಿ ಗೀತಾ ಮಾತನಾಡಿ, ಸಮಾಜದಲ್ಲಿ ಸುಮಾರು 112 ಮಾದರಿಯ ಮಾದಕ ವಸ್ತುಗಳು ಇವೆ. 1989ರಿಂದ ಮಾದಕ ದ್ರವ್ಯ ಸೇವನೆ ವಿರೋಧಿ ದಿನ ಆಚರಿಸಲಾಗುತ್ತಿದೆ. ಈ ಆಚರಣೆಗೆ 36 ವರ್ಷಗಳಾಗಿದ್ದರೂ ಇಂದಿಗೂ ಪಿಡುಗು ತಡೆಯಲಾಗುತ್ತಿಲ್ಲ. ಮಾದಕ ವಸ್ತುಗಳ ಸೇವನೆ ವಿರೋಧಿ ದಿನಾಚರಣೆ ಕೇವಲ ಒಂದು ದಿನದ ಕಾರ್ಯಕ್ರಮವಾಗಬಾರದು. ನಿತ್ಯವೂ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕು. ಯುವಪೀಳಿಗೆ ಇಂತಹ ವಸನಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ಮೈಗೊಡಿಸಿಕೊಳ್ಳಬೇಕು ಎಂದು ತಿಳಿಸಿದರು.

- - -

-26ಎಚ್.ಎಲ್.ಐ1.ಜೆಪಿಜಿ:

ಜನಜಾಗೃತಿ ಕಾರ್ಯಕ್ರಮದಲ್ಲಿ ಪಿಐ ಸುನೀಲ್ ಕುಮಾರ್ ಮಾತನಾಡಿದರು.