ಗೃತಿ, ಸಂವಾದ ಮತ್ತು ಸಮಾಲೋಚನೆ ಎಂಬ ಶೀರ್ಷಿಕೆಯಡಿ ಮಾದಕ ವ್ಯಸನ ವಿರೋಧಿ ಅಭಿಯಾನವು ಮಂಗಳವಾರ ಮಂಗಳೂರಿನ ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನ ಲೆಕ್ಚರ್ ಹಾಲ್–04 ರಲ್ಲಿ ಎನ್.ಎಸ್.ಎಸ್ ಮತ್ತು ವೈ.ಆರ್.ಸಿ. ವಿದ್ಯಾರ್ಥಿಗಳಿಗಾಗಿ ನಡೆಸಲಾಯಿತು. ಈ ಮಹತ್ವದ ಉಪಕ್ರಮವನ್ನು ಸೇವಾಭಾರತಿ ಕರ್ನಾಟಕ, ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಕೇಶವ ಸ್ಮೃತಿ ಸಂವರ್ಧನ ಸಮಿತಿ (ರಿ.), ಮಂಗಳೂರು ಮತ್ತು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ.) ಇವುಗಳ ಸಹಯೋಗದಲ್ಲಿ ಕಾಲೇಜಿನೊಂದಿಗೆ ಜಂಟಿಯಾಗಿ ಆಯೋಜಿಸಲಾಗಿತ್ತು.
ಮಂಗಳೂರು: ಜಾಗೃತಿ, ಸಂವಾದ ಮತ್ತು ಸಮಾಲೋಚನೆ ಎಂಬ ಶೀರ್ಷಿಕೆಯಡಿ ಮಾದಕ ವ್ಯಸನ ವಿರೋಧಿ ಅಭಿಯಾನವು ಮಂಗಳವಾರ ಮಂಗಳೂರಿನ ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನ ಲೆಕ್ಚರ್ ಹಾಲ್–04 ರಲ್ಲಿ ಎನ್.ಎಸ್.ಎಸ್ ಮತ್ತು ವೈ.ಆರ್.ಸಿ. ವಿದ್ಯಾರ್ಥಿಗಳಿಗಾಗಿ ನಡೆಸಲಾಯಿತು. ಈ ಮಹತ್ವದ ಉಪಕ್ರಮವನ್ನು ಸೇವಾಭಾರತಿ ಕರ್ನಾಟಕ, ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಕೇಶವ ಸ್ಮೃತಿ ಸಂವರ್ಧನ ಸಮಿತಿ (ರಿ.), ಮಂಗಳೂರು ಮತ್ತು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ.) ಇವುಗಳ ಸಹಯೋಗದಲ್ಲಿ ಕಾಲೇಜಿನೊಂದಿಗೆ ಜಂಟಿಯಾಗಿ ಆಯೋಜಿಸಲಾಗಿತ್ತು.
ಉರ್ವ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಪ್ರಮೋದ್ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಪ್ರಮುಖರಾದ ಹಾರ್ದಿಕ್ ಪಿ. ಚೌಹಾಣ್ (ಪ್ರಾಂಶುಪಾಲರು), ಕೆ. ಚನ್ನಯ್ಯ ಸ್ವಾಮಿ (ಕಾರ್ಯದರ್ಶಿ, ಸೇವಾಭಾರತಿ ಕರ್ನಾಟಕ), ಪ್ರಕಾಶ್ ಕೋಟ್ಯಾನ್ (ಸಂಸ್ಥಾಪಕರು, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್) ಮತ್ತು ಗಜಾನನ ಪೈ ಥೋನ್ಸೆ (ಕಾರ್ಯದರ್ಶಿ, ಕೇಶವ ಸ್ಮೃತಿ ಸಂವರ್ಧನ ಸಮಿತಿ) ಇದ್ದರು.
ಜಾಗೃತಿ ಅಧಿವೇಶನವನ್ನು ಪ್ರಕಾಶ್ ಕೋಟ್ಯಾನ್ ಅವರು ಮುನ್ನಡೆಸಿ, ಮಾದಕ ದ್ರವ್ಯ ದುರ್ಬಳಕೆ, ಮಾದಕ ದ್ರವ್ಯ ಸಂಬಂಧಿತ ಸಮಸ್ಯೆಗಳು ಮತ್ತು ಯುವಜನರಲ್ಲಿ ಸಾಮಾಜಿಕ ಜವಾಬ್ದಾರಿಯ ಮಹತ್ವದ ಕುರಿತು ಅರ್ಥಪೂರ್ಣ ಭಾಷಣ ನೀಡಿದರು. ಈ ಹಿಂದೆ ಮಾದಕ ದ್ರವ್ಯ ದುರ್ಬಳಕೆಗೆ ಒಳಗಾಗಿದ್ದ ಇಬ್ಬರು ವ್ಯಕ್ತಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಶ್ವಿನಿ ಪ್ರಭು ಸ್ವಾಗತಿಸಿದರು.ಎನ್.ಎಸ್.ಎಸ್ ಜಂಟಿ ಕಾರ್ಯದರ್ಶಿ ಶ್ರಾವ್ಯ ನಿರೂಪಿಸಿದರು. ಕಾರ್ಯಕ್ರಮ ಅಧಿಕಾರಿ ವಿಶ್ವಾತ್ಮಿಕಾ ಅವರು ವಂದಿಸಿದರು.