ನಶೆ ಏರಿಸುವಂತಹ ಉತ್ಪನ್ನಗಳು ಜನರ ಕೈಗೆ ಸುಲಭವಾಗಿ ದೊರಕುತ್ತಿವೆ. ಯುವಜನತೆ ನಶೆ ಏರಿಸುವಂತಹ ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ. ಸರ್ಕಾರ ರೂಪಿಸುವಂತಹ ಕಾನೂನುಗಳಿಂದ ಇದನ್ನು ತಡೆಗಟ್ಟುವುದು ಸಾಧ್ಯ. ಇವುಗಳಿಂದಾಗುವ ಅಪಾಯಗಳನ್ನು ನಾವೇ ಅರ್ಥಮಾಡಿಕೊಂಡು ನಶಾ ಮುಕ್ತರಾಗುವ ಮನಸ್ಸು ಮಾಡಬೇಕು ಎಂದು ಮಾಗನೂರು ಬಸಪ್ಪ ಕಾಲೇಜಿನ ಉಪ ಪ್ರಾಚಾರ್ಯೆ ಸುರೇಖಾ ಜಗದೀಶ್ ತಿಳಿಸಿದರು.

ದಾವಣಗೆರೆ: ನಶೆ ಏರಿಸುವಂತಹ ಉತ್ಪನ್ನಗಳು ಜನರ ಕೈಗೆ ಸುಲಭವಾಗಿ ದೊರಕುತ್ತಿವೆ. ಯುವಜನತೆ ನಶೆ ಏರಿಸುವಂತಹ ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ. ಸರ್ಕಾರ ರೂಪಿಸುವಂತಹ ಕಾನೂನುಗಳಿಂದ ಇದನ್ನು ತಡೆಗಟ್ಟುವುದು ಸಾಧ್ಯ. ಇವುಗಳಿಂದಾಗುವ ಅಪಾಯಗಳನ್ನು ನಾವೇ ಅರ್ಥಮಾಡಿಕೊಂಡು ನಶಾ ಮುಕ್ತರಾಗುವ ಮನಸ್ಸು ಮಾಡಬೇಕು ಎಂದು ಮಾಗನೂರು ಬಸಪ್ಪ ಕಾಲೇಜಿನ ಉಪ ಪ್ರಾಚಾರ್ಯೆ ಸುರೇಖಾ ಜಗದೀಶ್ ತಿಳಿಸಿದರು.

ಅವರು ನಗರದ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಕಾಲೇಜಿನ ಎಕೋ ಕ್ಲಬ್, ಸೈನ್ಸ್ ಕ್ಲಬ್ ಮತ್ತು ರೆಡ್ ಕ್ರಾಸ್ ವತಿಯಿಂದ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಪ್ರಸಾದ್ ಬಂಗೇರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಸಾಯನ ಶಾಸ್ತ್ರ ಉಪನ್ಯಾಸಕ ಡಿ.ಆರ್.ರವಿ ಪ್ರತಿಜ್ಞಾ ವಿಧಿ ಬೋಧಿಸಿದರು. ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ಆರ್. ಸಿದ್ದೇಶ್ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ವಾಕಥಾನ್ ನಡೆಸಿ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ನಶಾ ಮುಕ್ತ ಭಾರತ ಅಭಿಯಾನದ ಮಹತ್ವವನ್ನು ತಿಳಿಸಿದರು.