ಸಾರಾಂಶ
ಬೆಳಗಾವಿ: ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ದಲಿತ ಸಂಘರ್ಷ ಸಮಿತಿಯು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಲು ನಿರ್ಧಾರ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಆನಂದ ತಾಯವ್ವಗೋಳ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ: ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ದಲಿತ ಸಂಘರ್ಷ ಸಮಿತಿಯು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಲು ನಿರ್ಧಾರ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಆನಂದ ತಾಯವ್ವಗೋಳ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಜನಜಾಗೃತಿಗಾಗಿ ಶೋಷಿತ ಸಮಾಜದ ಪರವಾಗಿರುವ ಪಕ್ಷಕ್ಕೆ ನಾವು ಬೆಂಬಲಿಸಲಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಸಿ ಬೆಳೆಸಿಕೊಂಡು ಹೋಗುತ್ತದೆ ಎಂದರು.ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಿರುವುದು ಸಂವಿಧಾನದ ಬದಲಾವಣೆ ಮಾಡಲು ಎಂದು ಹೇಳಿಕೆ ಕೊಡುವ ಬಿಜೆಪಿ ದಲಿತರ ವಿರೋಧಿ ಪಕ್ಷವಾಗಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ದಾಂತವುನ್ನು ಎತ್ತಿ ಹಿಡಿಯ ಬೇಕಿದ್ದ ಬಿಜೆಪಿಯವರ ಹೇಳಿಕೆಗಳು ನಮ್ಮ ಸಮಾಜದವರಿಗೆ ಮಾಡಿದ ಅಪಮಾನ ಎಂದರು.
ಗೋಷ್ಠಿಯಲ್ಲಿ ಮಲ್ಲೇಶ ಚೌಗುಲೆ, ಸುರೇಶ ಸಣ್ಣಕ್ಕಿ, ಗೀತಾ ಸಣ್ಣಕ್ಕಿ, ಬಾಳೇಶ ಬನಹಟ್ಟಿ, ಮಂಜುನಾಥ ಅಣ್ಣಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.