ಏ. 4ರಂದು ಸಂಜೆ 9 ಗಂಟೆಗೆ ವಾಜ ಬಯಾನ್ ಕಾರ್ಯಕ್ರಮವಿದ್ದು, ಉತ್ತರ ಪ್ರದೇಶದ ಹಾಶ್ಮಿಮಿಯ್ಯಾ ಅವರು ಧರ್ಮೋಪದೇಶ ಕಾರ್ಯಕ್ರಮವಿದೆ. ಏ. 5ರಂದು ರಾತ್ರಿ 9 ಗಂಟೆಗೆ ಭಾರತದ ಸುಪ್ರಸಿದ್ಧ ಖವ್ವಾಲರಿಂದ ಖವ್ವಾಲಿ ಕಾರ್ಯಕ್ರಮ ನಡೆಯುವುದು.

ಲಕ್ಷ್ಮೇಶ್ವರ: ಪಟ್ಟಣದ ಭಾವೈಕ್ಯತೆಯ ಕೇಂದ್ರವಾಗಿರುವ ದೂದಪೀರಾ ಉರೂಸ್ ಕಾರ್ಯಕ್ರಮ ಮಾ. 31ರಿಂದ ಏ. 5ರ ವರೆಗೆ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ದೂದ್‍ಪೀರಾ ದರ್ಗಾ ಕಮಿಟಿಯ ಕಾರ್ಯದರ್ಶಿ ಸಾಹಿಬ್ ಜಾನ್ ಹವಾಲ್ದಾರ್ ತಿಳಿಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತಿಹಾಸ ಪ್ರಸಿದ್ಧ ದೂದಪೀರಾ ಅಥವಾ ಸೈಯದ್ ಸುಲೇಮಾನ್ ಬಾದಷಹಾ ಅವರ 137ನೇ ವರ್ಷದ ಉರೂಸ್ ಕಾರ್ಯಕ್ರಮವು ಮಾ. 31ರಂದು ಗಂಧದ ಕಾರ್ಯಕ್ರಮದೊಂದಿಗೆ ಆರಂಭವಾಗಲಿದೆ. ಏ. 1ರಂದು ಗಲೀಫ್ ಕಾರ್ಯಕ್ರಮ ನಡೆಯಲಿದೆ. ಅಂದು ರಾತ್ರಿ ತಾಜಮಹಲ್‌ನ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ದೂದಪೀರಾ ದರ್ಗಾ ಪ್ರವೇಶಿಸಲಿದೆ.

ಏ. 4ರಂದು ಸಂಜೆ 9 ಗಂಟೆಗೆ ವಾಜ ಬಯಾನ್ ಕಾರ್ಯಕ್ರಮವಿದ್ದು, ಉತ್ತರ ಪ್ರದೇಶದ ಹಾಶ್ಮಿಮಿಯ್ಯಾ ಅವರು ಧರ್ಮೋಪದೇಶ ಕಾರ್ಯಕ್ರಮವಿದೆ. ಏ. 5ರಂದು ರಾತ್ರಿ 9 ಗಂಟೆಗೆ ಭಾರತದ ಸುಪ್ರಸಿದ್ಧ ಖವ್ವಾಲರಿಂದ ಖವ್ವಾಲಿ ಕಾರ್ಯಕ್ರಮ ನಡೆಯುವುದು ಎಂದರು.

ದೂದಪೀರಾ ಅಜ್ಜನ ಉರೂಸ್ ಕಾರ್ಯಕ್ರಮದಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದ್ದು. ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು, ಮಾಜಿ ಶಾಸಕರು, ಮುಖಂಡರು ಆಗಮಿಸುವರು. ದೂದಪೀರಾ ಉರೂಸ್ ಕಾರ್ಯಕ್ರಮವನ್ನು ಪಟ್ಟಣದ ಅಂಜುಮನ್ ಎ ಇಸ್ಲಾಂ, ಕಮಿಟಿ, ಪಟ್ಟಣದ ಎಲ್ಲ ಮಸೀದಿಗಳ ಕಮಿಟಿಯ ಸದಸ್ಯರು ಹಾಗೂ ಎಲ್ಲ ಸಾರ್ವಜನಿಕರ ಸಹಕಾರ ಮತ್ತು ಸಹಯೋಗದೊಂದಿಗೆ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ದರ್ಗಾ ಕಮಿಟಿಯ ಅಧ್ಯಕ್ಷ ಸುಲೇಮಾನ್‌ಸಾಬ ಕಣಕೆ ಹಾಗೂ ದಾದಾಪೀರ್ ಮುಚ್ಚಾಲೆ ತಿಳಿಸಿದರು.

ಇರ್ಫಾನ್ ಬೇಗ್ ಮಿರ್ಜಾ, ದಾದಾಪೀರ್ ಕಾರಡಗಿ, ಸಾದಿಕ್ಅಹ್ಮದ್ ಶಮಲೇವಾಲೆ, ಅಕ್ಬರ್‌ಸಾಬ ಸೂರಣಗಿ, ನೂರ್‌ಅಹ್ಮದ್ ಸಿದ್ದಿ, ಶಫೀಕ್‌ಸಾಬ್ ಸಿದ್ದಾಪೂರ, ಖಲಂಧರಸಾಬ್ ಸೂರಣಗಿ, ಭಾಷಾಸಾಬ್ ಮುಳಗುಂದ ಹಾಗೂ ಮನಿಯಾರ್ ಸೇರಿದಂತೆ ಅನೇಕರು ಇದ್ದರು. ಇಂದು ಕಾರ್ಯಕಾರಿಣಿ ಸಭೆ

ಗದಗ: ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕಾರಿಣಿ ಸಭೆ ಮಾ. 31ರಂದು ಬೆಳಗ್ಗೆ 11ಕ್ಕೆ ನಗರದ ಕಾಟನ್ ಸೆಲ್ ಸೊಸೈಟಿಯಲ್ಲಿ ಕರೆಯಲಾಗಿದೆ.ಎಲ್ಲ ಯುವ ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲಾ ಉಪಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ತಪ್ಪದೆ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಕಟಣೆ ತಿಳಿಸಿದೆ.