ಚುನಾವಣೆ ವೇಳೆ ಯಡಿಯೂರಪ್ಪ- ಶಾಮನೂರು ಮಧ್ಯೆ ಹೊಂದಾಣಿಕೆ ಎಂಬುದು ಸುಳ್ಳು: ಡಾ.ಪ್ರಭಾ

| Published : Jun 15 2024, 01:02 AM IST

ಚುನಾವಣೆ ವೇಳೆ ಯಡಿಯೂರಪ್ಪ- ಶಾಮನೂರು ಮಧ್ಯೆ ಹೊಂದಾಣಿಕೆ ಎಂಬುದು ಸುಳ್ಳು: ಡಾ.ಪ್ರಭಾ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭೆ ಚುನಾವಣೆ ಸೋತ ನಂತರ ಬಿಜೆಪಿಯವರು ನಾನಾ ಕಾರಣ ಹೇಳುತ್ತಿದ್ದಾರೆ. ಹಾಗೇನಾದರೂ ಅದೇ ಪಕ್ಷದ ರಾಜ್ಯ ನಾಯಕರೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದರೆ ಕನಿಷ್ಠ 1 ಲಕ್ಷ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲ್ಲಬೇಕಿತ್ತು ಎಂದು ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಬಿಜೆಪಿ ಜಿಲ್ಲಾ ಮುಖಂಡರ ಟೀಕೆಗೆ ತಿರುಗೇಟು ನೀಡಿದ್ದಾರೆ.

- ಕ್ಷೇತ್ರ ಅಭಿವೃದ್ಧಿಗಾಗಿ ಈ ಸಲ ಮತದಾರರು ಗೆಲ್ಲಿಸಿದ್ದಾರೆ- - - ದಾವಣಗೆರೆ: ದಾವಣಗೆರೆ ಲೋಕಸಭೆ ಚುನಾವಣೆ ಸೋತ ನಂತರ ಬಿಜೆಪಿಯವರು ನಾನಾ ಕಾರಣ ಹೇಳುತ್ತಿದ್ದಾರೆ. ಹಾಗೇನಾದರೂ ಅದೇ ಪಕ್ಷದ ರಾಜ್ಯ ನಾಯಕರೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದರೆ ಕನಿಷ್ಠ 1 ಲಕ್ಷ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲ್ಲಬೇಕಿತ್ತು ಎಂದು ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಬಿಜೆಪಿ ಜಿಲ್ಲಾ ಮುಖಂಡರ ಟೀಕೆಗೆ ತಿರುಗೇಟು ನೀಡಿದರು.

ನಗರದ ಎಸ್‌.ಎಸ್‌. ಜನರಲ್ ಆಸ್ಪತ್ರೆಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕೆ ಬಿಜೆಪಿಯ ಯಾವುದೇ ನಾಯಕರ ಜೊತೆಗೂ ಹೊಂದಾಣಿಕೆಯಾಗಲೀ, ಹೊಂದಾಣಿಕೆ ರಾಜಕಾರಣವಾಗಲಿ ಮಾಡಿಲ್ಲ. ಶಾಮನೂರು ಶಿವಶಂಕರಪ್ಪ- ಬಿ.ಎಸ್. ಯಡಿಯೂರಪ್ಪನವರ ಹೊಂದಾಣಿಕೆ ಎನ್ನುವುದೆಲ್ಲಾ ಸುಳ್ಳು ಆರೋಪವಷ್ಟೇ ಎಂದರು.

25 ವರ್ಷಗಳಿಂದಲೂ ಕ್ಷೇತ್ರದಲ್ಲಿ ಗೆಲ್ಲುತ್ತಲೇ ಬಂದಿದ್ದಾರೆ. ಈ ಸಲದ ಚುನಾವಣೆಯು ನೇರವಾಗಿ ಮೋದಿ ಮತ್ತು ಕಾಂಗ್ರೆಸ್ ಮಧ್ಯೆ ಇತ್ತು. ಈಗ ಪಕ್ಷದ ಪ್ರತಿಸ್ಪರ್ಧಿಯೆಂದರೆ ನರೇಂದ್ರ ಮೋದಿ. ಇಲ್ಲಿ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಜನರು ನರೇಂದ್ರ ಮೋದಿ ನೋಡಿ, ಓಟು ಹಾಕುತ್ತಿದ್ದರು. ಈ ಸಲ ಅಭಿವೃದ್ಧಿಗಾಗಿ ನಮಗೆ ಮತ ನೀಡಿ, ಗೆಲ್ಲಿಸಿದ್ದಾರೆ ಎಂದು ಹೇಳಿದರು.

ಐಟಿ, ಬಿಟಿ ಬರಬೇಕು:

ದಾವಣಗೆರೆಯಲ್ಲಿ ಈಗಷ್ಟೇ ನಾವು ಗೆದ್ದಿದ್ದೇವೆ. ಪ್ರಮಾಣ ವಚನ ಸಹ ಸ್ವೀಕರಿಸಿಲ್ಲ. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಚುನಾವಣೆ ಮುಂಚಿನಿಂದಲೂ ಹೇಳುತ್ತಿದ್ದಂತೆ ಐಟಿ, ಬಿಟಿ ಇಲ್ಲಿಗೆ ಬರಬೇಕು. ಶಾಸಕರು, ಸಚಿವರು ನಮ್ಮವರೇ ಇದ್ದು, ಸರ್ಕಾರ ನಮ್ಮದೇ ಇದೆ. ಜನರ ಆಶೀರ್ವಾದವೂ ಇದೆ. ಐಟಿ ಬಿಟಿ ಕಂಪನಿಗಳನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಡಾ.ಪ್ರಭಾ ಭರವಸೆ ನೀಡಿದರು.

- - - -14ಕೆಡಿವಿಜಿ5:

ದಾವಣಗೆರೆಯ ಎಸ್‌.ಎಸ್‌. ಜನರಲ್ ಆಸ್ಪತ್ರೆಯಲ್ಲಿ ನೂತನ ವೆಂಟಿಲೇಟರ್‌ ಸೇವೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡಿದರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಕಿರುವಾಡಿ ಗಿರಿಜಮ್ಮ ಇತರರು ಇದ್ದರು.