ಕೊಳ್ಳೇಗಾಲದ ಹಲವೆಡೆ ದಸರಾ ಗೊಂಬೆಗಳ ಸಂಭ್ರಮ ಜನರಿಂದ ವೀಕ್ಷಣೆ

| Published : Oct 13 2024, 01:01 AM IST

ಕೊಳ್ಳೇಗಾಲದ ಹಲವೆಡೆ ದಸರಾ ಗೊಂಬೆಗಳ ಸಂಭ್ರಮ ಜನರಿಂದ ವೀಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ದೇವಾಂಗ ಪೇಟೆಯ ಹೊಸಬೇದಿಯ ಲತಾ ವಾಸುದೇವ್ ಅವರು ಕಳೆದ 30 ವರುಷಗಳಿಂದಲೂ ಗೊಂಬೆಗಳನ್ನು ಕೂರಿಸುವ ಪದ್ಧತಿ ರೂಡಿಸಿಕೊಂಡಿದ್ದು ಈ ಬಾರಿ ಅವರು ಅಮಾವಾಸ್ಯೆಯಂದು ಗೊಂಬೆ ಕೂರಿಸಿ ಪೂಜೆ ಸಲ್ಲಿಸುತ್ತಾರೆ, ಪ್ರತಿ ದಿನವೂ ವಿಜಯದಶಮಿ ತನಕ 9 ದಿನಗಳ ಕಾಲ ವಿಶೇಷ ರೀತಿಯಲ್ಲಿ ನೈವೇದ್ಯ ತಯಾರಿಸಿ ಪೂಜಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ಕೊಳ್ಳೇಗಾಲ ಪಟ್ಟಣದ ಹಲವು ಕಡೆಗಳಲ್ಲಿ ನವರಾತ್ರಿಯ ಉತ್ಸವದ ಹಿನ್ನೆಲೆ ಪ್ರದರ್ಶಿಸಲಾಗಿರುವ ವಿಭಿನ್ನ ರೀತಿಯ ಗೊಂಬೆಗಳು ನೋಡುಗರ ಕಣ್ಮನ ಸೂರೆಗೊಳ್ಳುತ್ತಿವೆ. ಕೊಳ್ಳೇಗಾಲ ದೇವಾಂಗ ಪೇಟೆಯ ಶಾರದ ಚಂದ್ರಶೇಖರ್, ಕಾವ್ಯಂಜಲಿ ಮತ್ತು ಲತಾ ವಾಸುದೇವ್ ಅವರು ತಮ್ಮ ಮನೆಗಳಲ್ಲಿ ವಿಭಿನ್ನ ರೀತಿಯ ಗೊಂಬೆಗಳನ್ನು ಹಲವು ವರುಷಗಳಿಂದಲೂ ನವರಾತ್ರಿ ಹಿನ್ನೆಲೆ ಕೂರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ನೋಡುಗರಿಗೆ ಅವಕಾಶ ಕಲ್ಪಿಸಿದ್ದಾರೆ, ಅದೇ ರೀತಿಯಲ್ಲಿ ಮೂರು ಕಡೆಗಳಲ್ಲೂ ಈ ಬಾರಿ ಕೂರಿಸಲಾಗಿರುವ ಗೊಂಬೆಗಳನ್ನು ವೀಕ್ಷಕರು ತಮ್ಮ ಕುಟುಂಬ ಸಮೇತರಾಗಿ ತೆರಳಿ ವೀಕ್ಷಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ತರಹೇವಾರಿ ಗೊಂಬೆಗಳಿವೆ?ದೇವಾಂಗ ಪೇಟೆಯ ಹೊಸಬೇದಿಯ ಲತಾ ವಾಸುದೇವ್ ಅವರು ಕಳೆದ 30 ವರುಷಗಳಿಂದಲೂ ಗೊಂಬೆಗಳನ್ನು ಕೂರಿಸುವ ಪದ್ಧತಿ ರೂಡಿಸಿಕೊಂಡಿದ್ದು ಈ ಬಾರಿ ಅವರು ಅಮಾವಾಸ್ಯೆಯಂದು ಗೊಂಬೆ ಕೂರಿಸಿ ಪೂಜೆ ಸಲ್ಲಿಸುತ್ತಾರೆ, ಪ್ರತಿ ದಿನವೂ ವಿಜಯದಶಮಿ ತನಕ 9 ದಿನಗಳ ಕಾಲ ವಿಶೇಷ ರೀತಿಯಲ್ಲಿ ನೈವೇದ್ಯ ತಯಾರಿಸಿ ಪೂಜಿಸಲಾಗುತ್ತದೆ. ಅವರು ಈಬಾರಿ ದಶಾವತಾರ, ನವದುರ್ಗೆಯರು, ಕೖಷ್ಣಲೀಲೆಗಳು, ವೈಕುಂಠ, ಲಕ್ಷ್ಮಿನಾರಾಯಣ, ಶ್ರೀನಿವಾಸ ಕಲ್ಯಾಣ ವಿವಾಹ ಮಹೋತ್ಸವ, ರಾಮಲಲ್ಲಾ, ಲಲಿತಾಂಬ ದೇವಿ, ರಾಮ ಲಕ್ಷ್ಣಣ, ಸೀತಾ, ಆಂಜನೇಯ, ಭಕ್ತ ಮಾರ್ಕಂಡೇಯ ಸೇರಿಂತೆ 30 ಬಗೆಯ ವಿವಿಧ ರೂಪಗಳನ್ನು ವಿವರಿಸುವ ಗೊಂಬೆಗಳನ್ನು ಕೂರಿಸಿದ್ದಾರೆ

20 ಬಗೆಯ ಗೊಂಬೆಗಳ ಪ್ರದರ್ಶನ

ದೇವಾಂಗ ಪೇಟೆಯ ಶಾರದ ಚಂದ್ರಶೇಖರ್ ಅವರು 17ಕ್ಕೂ ಅಧಿಕ ವರುಷಗಳಿಂದ ಗೊಂಬೆಗಳನ್ನು ಕೂರಿಸುವ ಪದ್ಧತಿ ನಡೆಸುತ್ತಾ ಬಂದಿದ್ದು ಈಬಾರಿ 20ಕ್ಕೂ ಅಧಿಕ ಮಾದರಿಯ ರೂಪಗಳನ್ನು ವಿವರಿಸುವ ಗೊಂಬೆಗಳ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಗೋಕುಲದದಲ್ಲಿನ ಚಿತ್ರಣ ವಿವರಿಸುವ ಪ್ರದಶ೯ನ, ಗೋಕುಲದಲ್ಲಿನ ನ ಕೖಷ್ಣಲೀಲೆಗಳು, ಯಶೋಧರೆ ಕೖಷ್ಣನಿಗೆ ಬೆಣ್ಣೆ ತಿನ್ನಿಸುವ ದೖಶ್ಯ,

ರಾಮಾಯಣದ ತುಣಕುಗಳ ಗೊಂಬೆಗಳ ಪ್ರದರ್ಶನ ,ಶ್ರೀನಿವಾಸ ಕಲ್ಯಾಣೋತ್ಸವ, ಮಾಯಬಜಾರ್, ಶಾಲೆಯು ಯಾವ ರೀತಿ ನಡೆಯುತ್ತೆ ಎಂಬ ಮಾಹಿತಿಯ ಪ್ರದರ್ಶನ, ಮಕ್ಕಳಿಗಾಗಿ ಮೋಟು ಪತ್ಲು ಗಣಪತಿಗಳಲ್ಲಿ ದಶಾವತರಾತ, ಗಣಪತಿ ವಾದ್ಯವೖಂದ ಹೀಗೆ 20ಕ್ಕೂ ಹೆಚ್ಚು ಬಗೆಯ ಗೊಂಬೆಗಳನ್ನು ಪ್ರದರ್ಶಿಸಿದ್ದು ಅವುಗಳೆಲ್ಲವೂ ನೋಡುಗರ ಕಣ್ಮನ ಸೂರೆಗೊಳ್ಳುವಂತಿದೆ.

ವೈವಿದ್ಯಮಯ ಗೊಂಬೆ ಪ್ರದರ್ಶನ ಅದೇ ರೀತಿಯಲ್ಲಿ ಪಟ್ಟಣದಲ್ಲಿ ಕಾವ್ಯಾಂಜಲಿ ಅವರು ಸಹ 10 ವರುಷಗಳಿಂದ ಗೊಂಬೆ ಕುರಿಸುವ ಪದ್ಧತಿ ಬೆಳೆಸಿಕೊಂಡಿದ್ದು ವೈವಿದ್ಯಮಯ ಗೊಂಬೆಗಳನ್ನು ಪ್ರದರ್ಶನಕ್ಕಿರಿಸಿದ್ದಾರೆ. ಇಲ್ಲಿ ದಸರಾ ಉತ್ಸವ, ಪಟ್ಟಾಭಿಷೇಕ, ನವದುರ್ಗೆಯರು,

ಜಾನಪದ ಕಲಾವಿದರು ಅಷ್ಟಲಕ್ಷ್ಮಿಯರು, ದಶಾವತಾರ, ಗಣಪತಿ, ದೇಸಿನೃತ್ಯ, ಶ್ರೀನಿವಾಸಕಲ್ಯಾಣ, ಮಹಾವಿಷ್ಣು, ಶ್ರೀರಂಗ ನಾಥ, ಶ್ರೀಕೃಷ್ಣ ರುಕ್ಕಿಣಿ, ಗೋಪಿಕೆಯರು, ಸಪ್ತ ಋಷಿಗಳ ಯಾಗ, ಶ್ರೀರಾಘ ವೇಂದ್ರರ ಬೃಂದಾವನ, ಗಜಗರಿ, ವಿನಾಯಕ, ಯತಿಗಳು, ಸಿಪಾಯಿಗಳು ಸೇರಿದಂತೆ ನೂತನವಾಗಿ ಅಯೋಧ್ಯೆ ಬೊಂಬೆಗಳು ಸಹ ಇಲ್ಲಿ ಕಣ್ಮನ ಸೆಳೆಯುತ್ತಿವೆ.

------‘ನಾವು ಮೂವತ್ತು ವರುಷಗಳಿಂದಲೂ ಗೊಂಬೆಗಳನ್ನು ಕೂರಿಸುತ್ತಾ ಬಂದಿದ್ದು ದೇವಾಂಗ ಪೇಟೆಯಲ್ಲಿರುವ ನಮ್ಮ ಮನೆಯಲ್ಲಿ ಇಂದಿನಿಂದ ಇನ್ನು 1 ವಾರ ತನಕ ಪ್ರದರ್ಶನಕ್ಕೆ ಗೊಂಬೆಗಳನ್ನು ಇಡಲಾಗಿದೆ. ನಮ್ಮ ಪೂರ್ವಿಕರ ಪರಂಪರೆಯನ್ನು ಗೌರವಿಸುವ ನಮ್ಮ ಆದ್ಯತೆ, ಹಾಗಾಗಿಯೇ ಈ ಪ್ರದರ್ಶನ ಆಯೋಜಿಸಲಾಗಿದೆ.’ಲತಾ ವಾಸುದೇವ್, ದೇವಾಂಗ ಪೇಟೆಯ ವಾಸಿ--------

‘ನಾವು 17ಕ್ಕೂ ಅಧಿಕ ವರುಷಗಳಿಂದ ಗೊಂಬೆ ಪ್ರದಶ೯ನ ನಡೆಸುತ್ತಿದ್ದೆವೆ, ಮಕ್ಕಳಿಗೆ ಇಷ್ಟವಾಗುವ

ಗೊಂಬೆಗಳನ್ನು ವಿಭಿನ್ನ ರೀತಿಯಲ್ಲಿ ಕೂರಿಸಿದ್ದು ರಾಮಾಯಣ, ಗೋಕುಲ, ಗಣತಿ ದಶಾವತಾರ, ಶ್ರೀನಿವಾಸ ಕಲ್ಯಾಣೋತ್ಸವ ಸೇರಿ 17 ಬಗೆಯಲ್ಲಿ

ಕೆಲ ಸನ್ನಿವೇಶ ರೂಪಗಳ ಗೊಂಬೆಗಳನ್ನು ಕೂರಿಸಲಾಗಿದ್ದು ನೋಡುಗರು ಬಂದು ವೀಕ್ಷಿಸಲಿ. ’- ಶಾರದಾ ಚಂದ್ರಶೇಖರ್, ಕೊಳ್ಳೇಗಾಲ