ದಸರಾ ಹೊಟೇಲ್ ಗಳಲ್ಲಿ ಅತಿಥಿಗಳಿಗೆ ಸಮರ್ಪಕವಾದ ಸೇವೆ ಒದಗಿಸಿ

| Published : Aug 23 2024, 01:17 AM IST

ಸಾರಾಂಶ

ದಸರಾ ನಮ್ಮ ನಾಡಿನ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕ ಈ ನಾಡ ಹಬ್ಬಕ್ಕೆ ದೇಶ ವಿದೇಶಗಳಿಂದ ಪ್ರತಿಷ್ಠಿತ ಜನರೆಲ್ಲರೂ ಅತಿಥಿಗಳಾಗಿ ಆಗಮಿಸುತ್ತಾರೆ

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಸಂದರ್ಭದಲ್ಲಿ ಮೈಸೂರಿನ ಹೊಟೇಲ್ ಗಳಲ್ಲಿ ಅತಿಥಿಗಳಿಗೆ ಸಮರ್ಪಕವಾದ ಸೇವೆಯನ್ನು ಒದಗಿಸಬೇಕು ಎಂದು ದಸರಾ ಸ್ವಾಗತ ಮತ್ತು ಸ್ಥಳಾವಕಾಶ ಸಮಿತಿಯ ಉಪ ವಿಶೇಷಾಧಿಕಾರಿಯಾದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ದಸರಾ ಸಂಬಂಧ ಹೊಟೇಲ್ ಪ್ರತಿನಿಧಿಗಳೊಂದಿಗೆ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದಸರಾ ನಮ್ಮ ನಾಡಿನ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕ ಈ ನಾಡ ಹಬ್ಬಕ್ಕೆ ದೇಶ ವಿದೇಶಗಳಿಂದ ಪ್ರತಿಷ್ಠಿತ ಜನರೆಲ್ಲರೂ ಅತಿಥಿಗಳಾಗಿ ಆಗಮಿಸುತ್ತಾರೆ. ಅಲ್ಲದೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ಆದ್ದರಿಂದ ಯಾವುದೇ ಲೋಪ ದೋಷವಾಗದಂತೆ ಉತ್ತಮ ರೀತಿಯಲ್ಲಿ ಅತಿಥಿ ಸತ್ಕಾರ, ಕೊಠಡಿಗಳ ನಿರ್ವಹಣೆ ನಡೆಸಿ ದಸರಾವನ್ನು ಯಶಸ್ವಿಗೊಳಿಸಲು ಹೋಟೆಲ್ ನವರು ಸಹಕರಿಸಬೇಕು ಎಂದರು.ಮೈಸೂರು ಉಪ ವಿಭಾಗಾಧಿಕಾರಿ ರಕ್ಷಿತ್, ತಹಸೀಲ್ದಾರ್ ಮಹೇಶ್, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಹಾಗೂ ವಿವಿಧ ಹೊಟೇಲ್ ವ್ಯವಸ್ಥಾಪಕರು ಇದ್ದರು.