ಮೂಲ ಸೌಲಭ್ಯ ಕಲ್ಪಿಸುವುದು ಸಂಘ ಸಂಸ್ಥೆಗಳ ಕರ್ತವ್ಯ: ಪೂರ್ಣಿಮಾ ರವಿ

| Published : Mar 30 2024, 12:49 AM IST

ಮೂಲ ಸೌಲಭ್ಯ ಕಲ್ಪಿಸುವುದು ಸಂಘ ಸಂಸ್ಥೆಗಳ ಕರ್ತವ್ಯ: ಪೂರ್ಣಿಮಾ ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಇನ್ನರ್ ವೀಲ್ ಸಂಸ್ಥೆಯ ಶತಮಾನೋತ್ಸವ ಅಂಗವಾಗಿ 318 ಜಿಲ್ಲೆಯಲ್ಲಿ ನಮ್ಮ ಸಂಸ್ಥೆಯ ಮೂಲಕ 1 ಕೋಟಿ ರೂಪಾಯಿಗೂ ಅಧಿಕ ವೆಚ್ಚ ಮಾಡಿ ಸೇವಾ ಕಾರ್ಯಗಳನ್ನು ನಡೆಸಿದ್ದೇವೆ. ಆ ಮೂಲಕ ಸಾವಿರಾರು ಜನರು ನಮ್ಮ ಸಂಸ್ಥೆಯ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ ಎಂದು ಇನ್ನರ್ ವೀಲ್ ಡಿಸ್ಟ್ರಿಕ್ 318 ರ ಅಧ್ಯಕ್ಷೆ ಪೂರ್ಣಿಮಾ ರವಿ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಮೂಲಭೂತ ಸೌಲಭ್ಯಗಳ ಅಗತ್ಯವುಳ್ಳ ಜನರಿಗೆ ಸಹಕಾರ ನೀಡುವುದು ಸಂಘ ಸಂಸ್ಥೆಗಳ ಆದ್ಯ ಕರ್ತವ್ಯವಾಗಬೇಕು ಎಂದು ಇನ್ನರ್ ವೀಲ್ ಡಿಸ್ಟ್ರಿಕ್ 318 ರ ಅಧ್ಯಕ್ಷೆ ಪೂರ್ಣಿಮಾ ರವಿ ಹೇಳಿದರು.

ಕುಶಾಲನಗರ ಇನ್ನರ್‌ ವೀಲ್‌ ಕ್ಲಬ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಇನ್ನರ್ ವೀಲ್ ಸಂಸ್ಥೆಯ ಶತಮಾನೋತ್ಸವ ಅಂಗವಾಗಿ 318 ಜಿಲ್ಲೆಯಲ್ಲಿ ನಮ್ಮ ಸಂಸ್ಥೆಯ ಮೂಲಕ 1 ಕೋಟಿ ರೂಪಾಯಿಗೂ ಅಧಿಕ ವೆಚ್ಚ ಮಾಡಿ ಸೇವಾ ಕಾರ್ಯಗಳನ್ನು ನಡೆಸಿದ್ದೇವೆ. ಆ ಮೂಲಕ ಸಾವಿರಾರು ಜನರು ನಮ್ಮ ಸಂಸ್ಥೆಯ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು.

ಸಂಸ್ಥೆಯ ಶತಮಾನೋತ್ಸವ ಅಂಗವಾಗಿ ನೂರು ಹೆಣ್ಣು ಮಕ್ಕಳಿಗೆ ಬೈಸಿಕಲ್ ವಿತರಣೆ ಮಾಡುವ ಮಹತ್ತರ ಯೋಜನೆ ಹಮ್ಮಿಕೊಳ್ಳಲ್ಲಿದ್ದೇವೆ ಎಂದರು. ಶ್ರೀಮತಿ ಕುಶಾಲನಗರ ಎನ್ನುವ ಕಾರ್ಯಕ್ರಮಗಳ ಮೂಲಕ ಮಹಿಳೆಯರ ಪ್ರತಿಭೆಗಳನ್ನು ಗುರುತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕುಶಾಲನಗರ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನೇಹಾ ಜಗದೀಶ್, ಉಪಾಧ್ಯಕ್ಷೆ ಚಿತ್ರ ರಮೇಶ್, ಕಾರ್ಯದರ್ಶಿ ಜಾಸ್ಮಿನ್ ಪ್ರಕಾಶ್, ಖಜಾಂಚಿ ಸುಪ್ರೀತಾ ರವಿ, ಮಾಜಿ ಅಧ್ಯಕ್ಷರಾದ ಆರತಿ ಶೆಟ್ಟಿ, ರೂಪ ಉಮಾಶಂಕರ್, ಅಶ್ವಿನಿ ರೈ, ದೀಪ ಪೂಜಾರಿ, ಸಂಧ್ಯಾ ಪ್ರಮೋದ್, ದಿವ್ಯ ಸುಜಯ್ ಮತ್ತಿತರರು ಇದ್ದರು.