ಮಹಾನಗರ ಪಾಲಿಕೆಯ ಕಂದಾಯ ಶಾಖೆ ವತಿಯಿಂದ ರಾಜ್ಯದಲ್ಲೇ ಪ್ರಥಮ ಎಂಬಂತೆ ನಗರದ ಆಸ್ತಿ ಮಾಲೀಕರು ಹಾಗೂ ಆಸ್ತಿ ತೆರಿಗೆದಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಾಲ್ಕು ಚಕ್ರದ ವಾಹನದಲ್ಲಿ ಇ-ಆಸ್ತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ತುಮಕೂರುಮಹಾನಗರ ಪಾಲಿಕೆಯ ಕಂದಾಯ ಶಾಖೆ ವತಿಯಿಂದ ರಾಜ್ಯದಲ್ಲೇ ಪ್ರಥಮ ಎಂಬಂತೆ ನಗರದ ಆಸ್ತಿ ಮಾಲೀಕರು ಹಾಗೂ ಆಸ್ತಿ ತೆರಿಗೆದಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಾಲ್ಕು ಚಕ್ರದ ವಾಹನದಲ್ಲಿ ಇ-ಆಸ್ತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ನಗರದ ಮಹಾನಗರ ಪಾಲಿಕೆ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಮುಂಭಾಗ ನಾಲ್ಕು ಚಕ್ರದ ವಾಹನದಲ್ಲಿ ಇ-ಆಸ್ತಿ ಆಂದೋಲನಕ್ಕೆ ಪಾಲಿಕೆ ಆಯುಕ್ತೆ ಶುಭ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಪಾಲಿಕೆ ಅವರು, ಇದು ಮಹಾನಗರ ಪಾಲಿಕೆಯ ಮಹತ್ತರವಾದ ಯೋಜನೆ. ಸಾರ್ವಜನಿಕರ ಮನೆ ಬಾಗಿಲಿಗೆ ಈ ಯೋಜನೆ ಪ್ರಯೋಜನ ತಲುಪಿಸುವ ಕೆಲಸ ಮಾಡಲು ಇದೊಂದು ಪ್ರಮುಖ ಕಾರ್ಯವಾಗಿದೆ ಎಂದರು.
ಹಿರಿಯ ನಾಗರಿಕರು, ಮಹಿಳೆಯರು ಪಾಲಿಕೆ ಕಚೇರಿಗೆ ಅಲೆದಾಡಬಾರದು ಎಂಬ ಉದ್ದೇಶದಿಂದ ನಾಲ್ಕು ಚಕ್ರದ ವಾಹನದ ಮೇಲೆ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಅವರಿಂದ ಅರ್ಜಿ ಪಡೆದು ನಂತರ ಪಾಲಿಕೆ ಕಚೇರಿಯಲ್ಲಿ ಇ-ಆಸ್ತಿ ನೋಂದಣಿ ಮಾಡಿ ಮತ್ತೆ ಅರ್ಜಿದಾರರ ಮನೆಗೆ ತೆರಳಿ ಇ-ಖಾತೆ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು. ಇದೊಂದು ವಿನೂತನ ಕರ್ಯ ಕ್ರಮವಾಗಿದ್ದು, ನಗರದ ನಾಗರಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.ಸಾರ್ವಜನಿಕರು ಕಚೇರಿಗೆ ಬಂದಾಗ ಅಧಿಕಾರಿಗಳು ಸಿಗುವುದಿಲ್ಲ. ಹಾಗಾಗಿ ಪಾಲಿಕೆಯೇ ನಾಗರಿಕರ ಮನೆ ಬಾಗಿಲಿಗೆ ತೆರಳಿ ಇ-ಆಸ್ತಿ ಆಂದೋಲನ ನಡೆಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಪ್ರತಿ ನಾಗರಿಕರ ಮನೆ ಬಾಗಿಲಿಗೆ ಹೋಗಿ ಇ-ಖಾತೆ ನೋಂದಣಿ ಮಾಡಿಕೊಡುವಂತೆ ಸೂಚನೆ ನೀಡಿದ್ದಾರೆ. ಹಾಗಾಗಿ ಈ ವಿನೂತನ ಕಾರ್ಯಿಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಇಂದು ವಾರ್ಡ್ ನಂ. 31 ರಿಂದ ೩೫ರ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳ ನಾಗರಿಕರಿಗಾಗಿ ಸಿದ್ದರಾಮೇಶ್ವರ ಬಡಾವಣೆಯ ಬಸವ ಭವನದಲ್ಲಿ ಇ-ಆಸ್ತಿ ಆಂದೋಲನ ನಡೆಸಿದ್ದು, ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು. ಇ-ಆಸ್ತಿ ನೋಂದಣಿಗಾಗಿ ಕ್ರಯಪತ್ರ, ದಾನಪತ್ರ, ವಿಭಾಗಪತ್ರ, ವಿಲ್ ಪತ್ರ, ಭೂಪರಿರ್ತಾನಾ ಆದೇಶ ಪ್ರತಿ, ಲೇಔಟ್ ಪ್ರತಿ ಅಥವಾ ಎಂ.ಎ.ಆರ್.19ರ ನಕಲು ಪ್ರತಿ,01-04-2004 ರಿಂದ ಪ್ರಸ್ತುತ ಸಾಲಿನವರೆಗೆ ಇ.ಸಿ.-15, ಸ್ವತ್ತಿನ ಮಾಲೀಕರ ಭಾವಚಿತ್ರ, ಆಧಾರ್ ಕರ್ಡ್ವ ಮತ್ತು ಪ್ರಸ್ತುತ ಸಾಲಿನ ಕಂದಾಯ ಪಾವತಿಸಿರುವ ರಸೀದಿ ಸೇರಿದಂತೆ ಸ್ವತ್ತಿಗೆ ಅವಶ್ಯವಿರುವ ದಾಖಲೆಗಳನ್ನು ತರುವಂತೆಯೂ ಇದೇ ವೇಳೆ ಸಾರ್ವತಜನಿಕರಿಗೆ ಪಾಲಿಕೆ ಆಯುಕ್ತೆ ಶುಭ ಅವರು ತಿಳಿಸಿ, ಅರ್ಜಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಉಪಆಯುಕ್ತ ಮನುಕುಮಾರ್, ವಲಯ ಆಯುಕ್ತ ನಾಗರಾಜು, ಕಂದಾಯ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಪಾಲ್ಗೊಂಡಿದ್ದರು.