ಮಾಣೆಕ್ ಷಾ ಸ್ವಾತಂತ್ರ್ಯೋತ್ಸವ ವೀಕ್ಷಣೆಗೆ ಇ-ಪಾಸ್ ವ್ಯವಸ್ಥೆ

| N/A | Published : Aug 09 2025, 02:05 AM IST / Updated: Aug 09 2025, 08:16 AM IST

ಮಾಣೆಕ್ ಷಾ ಸ್ವಾತಂತ್ರ್ಯೋತ್ಸವ ವೀಕ್ಷಣೆಗೆ ಇ-ಪಾಸ್ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ಆ.15ರಂದು ನಡೆಯಲಿರುವ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಲು ಮೂರು ಸಾವಿರ ಇ-ಪಾಸ್‌ಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇಲೆ ವಿತರಿಸಲಾಗುತ್ತದೆ. ಇ- ಪಾಸ್‌ನವರಿಗೆ ಮೈದಾನದೊಳಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗುವುದಿಲ್ಲ.

 ಬೆಂಗಳೂರು : ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಆ.15ರಂದು ನಡೆಯಲಿರುವ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಪ್ರಥಮ ಬಾರಿಗೆ ‘ಇ-ಪಾಸ್’ ವ್ಯವಸ್ಥೆ ಕಲ್ಪಿಸಲಾಗಿದೆ.

ಆಸಕ್ತರು ಸೇವಾಸಿಂಧು ವೆಬ್‌ಸೈಟ್‌ www.sevasindhu.karnataka.gov.in ಮೂಲಕ ಆಧಾರ್ ಹಾಗೂ ಮೊಬೈಲ್ ಫೋನ್‌ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮೂಲಕ ಇ-ಪಾಸ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದ್ದಾರೆ.

ಇ-ಪಾಸ್‌ನೊಂದಿಗೆ ಮೂಲ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ಬೆಳಗ್ಗೆ 8.15ರ ಒಳಗೆ ಗೇಟ್ ಸಂಖ್ಯೆ 4ರಿಂದ ಮಾತ್ರ ಮೈದಾನವನ್ನು ಪ್ರವೇಶಿಸಬೇಕು. ನಿಗದಿತ ಸಮಯದ ನಂತರ ಇ-ಪಾಸ್ ಅಮಾನ್ಯವಾಗುತ್ತದೆ. ಇ-ಪಾಸ್ ವರ್ಗಾಯಿಸುವಂತಿಲ್ಲ. ಒಂದು ಇ-ಪಾಸ್‌ಗೆ ಒಬ್ಬರಿಗೆ ಮಾತ್ರ ಪ್ರವೇಶ. ಕಾರ್ಯಕ್ರಮದ ಸಂದರ್ಭದಲ್ಲಿ ಇ-ಪಾಸ್‌ನ ಮುದ್ರಿತ ಪ್ರತಿ ಅಥವಾ ಡಿಜಿಟಲ್ (ಮೊಬೈಲ್) ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇ-ಪಾಸ್ ಬೇಕಾಗುವುದಿಲ್ಲ.

ಮೂರು ಸಾವಿರ ಇ-ಪಾಸ್‌ಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇಲೆ ವಿತರಿಸಲಾಗುತ್ತದೆ. ಇ- ಪಾಸ್‌ನವರಿಗೆ ಮೈದಾನದೊಳಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗುವುದಿಲ್ಲ. ಪೊಲೀಸ್ ಇಲಾಖೆಯ ನಿರ್ದೇಶನದಂತೆ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read more Articles on