ಸಾರಥಿ ಗ್ರಾಮ ಠಾಣಾ ವ್ಯಾಪ್ತಿ 180 ನಿವೇಶನಗಳಿಗೆ ಇ-ಸ್ವತ್ತು: ದಸಂಸ ಸ್ವಾಗತ

| Published : Dec 19 2024, 12:34 AM IST

ಸಾರಥಿ ಗ್ರಾಮ ಠಾಣಾ ವ್ಯಾಪ್ತಿ 180 ನಿವೇಶನಗಳಿಗೆ ಇ-ಸ್ವತ್ತು: ದಸಂಸ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ತಾಲೂಕಿನ ಸಾರಥಿ ಗ್ರಾಮದ ಗ್ರಾಮಠಾಣಾ ವ್ಯಾಪ್ತಿಯ ನಿವೇಶನಗಳಲ್ಲಿರುವ ಅಂದಾಜು 180 ಮನೆಗಳಿಗೆ, ಇ-ಸ್ವತ್ತು ನೀಡಲು ಸಂಘಟನೆ ಮಾಡಿತ್ತು. ಮನವಿಗೆ ಪೂರಕವಾಗಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಪರತ್ತುಗಳನ್ನು ವಿಧಿಸಿ, ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಆರ್. ಶ್ರೀನಿವಾಸ್ ಹೇಳಿದ್ದಾರೆ.

- ಇನ್ನೂ 250ಕ್ಕೂ ಹೆಚ್ಚು ಮನೆಗಳ ಇ-ಸ್ವತ್ತಿಗಾದಿ ಪ್ರಯತ್ನ - - - ಹರಿಹರ: ತಾಲೂಕಿನ ಸಾರಥಿ ಗ್ರಾಮದ ಗ್ರಾಮಠಾಣಾ ವ್ಯಾಪ್ತಿಯ ನಿವೇಶನಗಳಲ್ಲಿರುವ ಅಂದಾಜು 180 ಮನೆಗಳಿಗೆ, ಇ-ಸ್ವತ್ತು ನೀಡಲು ಸಂಘಟನೆ ಮಾಡಿತ್ತು. ಮನವಿಗೆ ಪೂರಕವಾಗಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಪರತ್ತುಗಳನ್ನು ವಿಧಿಸಿ, ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಆರ್. ಶ್ರೀನಿವಾಸ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀನುಗಳ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದ ಆ ಪ್ರದೇಶದಲ್ಲಿ ಹಲವು ದಶಕಗಳಿಂದ ವಾಸಿಸುತ್ತಿದ್ದ ಜನರಿಗೆ ತಮ್ಮ ಮನೆಗಳ ಇ-ಸ್ವತ್ತು ಸೌಲಭ್ಯ ಸಿಗದೇ ತೀವ್ರ ಅಡಚಣೆಯಾಗಿತ್ತು ಎಂದರು.

ಇ-ಸ್ವತ್ತು ಇಲ್ಲದೇ ಶೌಚಾಲಯ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ನಿವಾಸಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. ನಿವಾಸಿಗಳು ನಮ್ಮ ಗಮನಕ್ಕೆ ವಿಷಯ ತಂದಾಗ ಸಂಘಟನೆಯಿಂದ ಜಮೀನಿನ ಮಾಲೀಕರು, ಉಪ ವಿಭಾಗಾಧಿಕಾರಿ, ತಾಲೂಕು ಪಂಚಾಯಿತಿ ಇಒ ಅವರನ್ನು ಸಂಪರ್ಕಿಸಿ, ಈ ಕುರಿತು ಸೂಕ್ತ ಕ್ರಮಕ್ಕಾಗಿ ಮನವಿ ಸಲ್ಲಿಸಲಾಗಿತ್ತು ಎಂದರು.

ನ್ಯಾಯಾಲಯದ ಆದೇಶದಂತೆ, ಅಂತಿಮ ತೀರ್ಪಿಗೆ ಬದ್ಧರಾಗಿರುವಂತೆ, ಷರತ್ತು ವಿಧಿಸಿ ಇ-ಸ್ವತ್ತುಗಳನ್ನು ವಿತರಿಸಲು ತಾಪಂ ಇಒ ಸೂಚಿಸಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು ನಿವಾಸಿಗಳ ಪರವಾಗಿ ಶ್ರಮಿಸಿದ್ದಾರೆ. ಇದರಿಂದಾಗಿ 180 ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ ಗ್ರಾಮದಲ್ಲಿ ಇಂಥದೇ ಸಮಸ್ಯೆಗಳ ಇನ್ನೂ 250ಕ್ಕೂ ಹೆಚ್ಚು ಮನೆಗಳಿವೆ. ಆ ಜಮೀನುಗಳ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದು, ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಆ ಜಮೀನಿನ ಮಾಲೀಕರು ಬಡನಿವಾಸಿಗಳಿಗೆ ಸಹಾಯ ಮಾಡುವ ಭರಸವೆ ನೀಡಿದ್ದಾರೆ. ಅವರಿಗೂ ಇ-ಸ್ವತ್ತು ದೊರಕಿಸಲು ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಾರಥಿ ಗ್ರಾಪಂ ಅಧ್ಯಕ್ಷ ಗೋಣಿ ಬಸಪ್ಪ, ಸದಸ್ಯ ರವೀಂದ್ರ ಪಟೇಲ್, ಗ್ರಾಮಸ್ಥರಾದ ಸುರೇಶ್, ಪರಶುರಾಮ, ಜಿ.ರವಿಕುಮಾರ್, ಮರಿ ಕೆಂಚಪ್ಪ, ಕರಡಿ ಸಿದ್ದೇಶ್, ಮಡ್ಡೇರ ಯಲ್ಲಪ್ಪ, ನಾಗರಾಜ್ ಕೆ., ನಾಗರಾಜ್ ಚಿಕ್ಕಬಿದರಿ, ಎಸ್.ಜಿ.ಶಿವಕುಮರ್, ಕದಸಂಸ ಮುಖಂಡ ಎಲ್.ತಿಪ್ಪೇಶ್ ಇದ್ದರು.

- - - -17ಎಚ್‍ಆರ್ ಆರ್05:

ಹರಿಹರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಆರ್. ಶ್ರೀನಿವಾಸ್ ಮಾತನಾಡಿದರು.