ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಕಾರ್ಮಿಕ ಇಲಾಖೆಯ ಸೌಲಭ್ಯ ಪಡೆಯಲು ಕಾರ್ಮಿಕರು ಇ- ಶ್ರಮಿಕ್ ಕಾರ್ಡನ್ನು ಕಡ್ಡಾಯವಾಗಿ ಮಾಡಿಸಬೇಕೆಂದು ಪುರಸಭೆ ಸದಸ್ಯ ಬಿ. ಗಿರೀಶ್ ಹೇಳಿದರು.ಪಟ್ಟಣದ ನೆಹರೂ ನಗರದ ಗಣಪತಿ ಪ್ರತಿಷ್ಠಾಪನೆ ಆವರಣದಲ್ಲಿ ಹೊಯ್ಸಳ ಪೈಂಟರ್ ಕಾರ್ಮಿಕರ ಸಂಘದ 2ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿರ್ಮಾಣ ಕಾರ್ಯದಲ್ಲಿ ಕಟ್ಟಡ ಕಾರ್ಮಿಕರ ಪಾತ್ರ ಮಹತ್ತರವಾಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಸಂಘದ ಅಧ್ಯಕ್ಷರು ಇವುಗಳ ಬಗ್ಗೆ ಕಾರ್ಮಿಕರಿಗೆ ಪ್ರಚಾರ, ಮಾಹಿತಿ ನೀಡುವ ಮೂಲಕ ಸವಲತ್ತು ಪಡೆಯಲು ಸಹಕರಿಸಬೇಕು ಎಂದರು.
ಪರ್ತಕರ್ತರ ಸಂಘದ ಕಾರ್ಯದರ್ಶಿ ಬಿ.ಬಿ. ಶಿವರಾಜ್ ಮಾತನಾಡಿ, ಕಾರ್ಮಿಕರೆಲ್ಲರಿಗೂ ಸರ್ಕಾರದ ಸೌಲಭ್ಯಗಳು ತಲುಪಿದಾಗ ಮಾತ್ರ ಯೋಜನೆಗೆ ಯಶಸ್ಸು ದೊರೆಯುತ್ತದೆ. ಸೂಕ್ತ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ದೊರೆಯುವಂತೆ ಸಂಘಟನೆಯ ಪ್ರಮುಖರು ಮುಂದಾಗಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ಇಲಾಖೆಯ ಸೌಲಭ್ಯದ ಬಗ್ಗೆ ಮಾಹಿತಿ ನೀಡಿ ಪ್ರಾಮಾಣಿಕವಾಗಿ ಸವಲತ್ತುಗಳನ್ನು ಕಾರ್ಮಿಕರಿಗಷ್ಟೇ ನೀಡುವಂತಾಗಬೇಕು. ಶಾಸಕರ ಸಹಾಯ ಪಡೆದು ಪೈಂಟರ್ ಕಾರ್ಮಿಕರ ಸಂಘಕ್ಕೆ ನಿವೇಶನ ಪಡೆಯುವಂತಾಗಬೇಕೆಂದು ಹೇಳಿದರು.ಡಾ. ರಾಜ್ ಕುಮಾರ್ ಸಂಘದ ಅಧ್ಯಕ್ಷ ತೀರ್ಥಂಕರ್ ಮಾತನಾಡಿ, ಕಾರ್ಮಿಕರು ಒಗ್ಗಟ್ಟಿನಿಂದ ಸಂಘಟನೆ ಮತ್ತು ಸರ್ಕಾರದ ಸವಲತ್ತು ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಘ ಶ್ರಮಿಸಬೇಕು ಎಂದರು.
ಕಾರ್ಮಿಕ ಇಲಾಖೆಯ ವಿಜಿಕುಮಾರ್ ಮಾತನಾಡಿ, ಕಾರ್ಮಿಕ ಇಲಾಖೆಯು ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೂ ಹಲವು ಸೌಲಭ್ಯಗಳನ್ನು ಹೊಂದಿದೆ. ಕಾರ್ಮಿಕರು ತಪ್ಪದೇ ತಾವು ಮಾಡುವ ಕೆಲಸಕ್ಕೆ ಸಂಬಂಧಿಸಿದ ಕಾರ್ಮಿಕರ ಕಾರ್ಡ್ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಸರ್ಕಾರದಲ್ಲಿ ಕಾರ್ಮಿಕರಿಗೆ ಅನೇಕ ಸವಲತ್ತುಗಳಿವೆ. ಕಾರ್ಮಿಕರಿಗೆ ಆರೋಗ್ಯ ಸಮಸ್ಯೆ ಆದ ಸಂದರ್ಭದಲ್ಲಿ ಸರ್ಕಾರದಿಂದ ೨ ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಜೊತೆಗೆ ವಿವಾಹ ಆಗುವ ಸಂದರ್ಭದಲ್ಲಿ ೬೦ ಸಾವಿರ ಧನಸಹಾಯ ಹಾಗೂ ಅನೇಕ ಸವಲತ್ತುಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.ಪೈಂಟರ್ ಕಾರ್ಮಿಕರ ಸಂಘದ ಅಧ್ಯಕ್ಷ ಭರತ್ ಮಾತನಾಡಿ, ನಮ್ಮ ಸಂಘಟನೆಗೆ ಶಾಸಕರು ಪುರಸಭೆ ವತಿಯಿಂದ ಒಂದು ನಿವೇಶನ ನೀಡುವಂತೆ ಸಭೆಯಲ್ಲಿ ಮನವಿ ಮಾಡಿ ಕಾರ್ಮಿಕ ಇಲಾಖೆಯಿಂದ ದಯಮಾಡಿ ಕಾರ್ಮಿಕರಿಗಷ್ಟೇ ಸವಲತ್ತುಗಳನ್ನು ವಿತರಿಸುವಂತಾಗಬೇಕು. ಈಗಾಗಲೇ ೨ ವರ್ಷಗಳಿಂದ ಸಂಘದ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸಲಾಗುತ್ತಿದೆ. ನಮ್ಮ ಸಂಘಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಬಿದಿರು ಸಹಕಾರ ಸಂಘದ ತಾಲೂಕು ಅಧ್ಯಕ್ಷ ಕೇಬಲ್ ವಿಜಯಕುಮಾರ್, ಉದ್ಯಮಿ ಅಬ್ರಾರ್, ಸಂಘದ ಚಲುವರಾಜ್, ಭೋಜೇಗೌಡ, ಸೋಮಶೇಖರ್, ಶ್ರೀನಿವಾಸ್, ಜಬ್ಬರ್, ಅಕ್ಬರ್, ಸತೀಶ್, ಮುಜ್ಜು, ಮನೋಜ್ ಸೇರಿ ಸಂಘದ ಸದಸ್ಯರು, ಕಾರ್ಮಿಕರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))