ಹಿಂದೆ ಮಂತ್ರ, ತಂತ್ರ, ಈಗ ಕುತಂತ್ರ ಕೆಲಸ ಮಾಡ್ತಿದೆ!

| Published : Mar 29 2024, 12:46 AM IST

ಸಾರಾಂಶ

ಚನ್ನಪಟ್ಟಣ: ಹಿಂದೆ ಮಂತ್ರ ಕೆಲಸ ಮಾಡ್ತಿತ್ತು. ನಂತರ ಯಂತ್ರ ಕೆಲಸ ಮಾಡ್ತಿತ್ತು. ಆದರೆ, ಈಗ ಕುತಂತ್ರ ಕೆಲಸ ಮಾಡ್ತಿದೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನನ್ನ ಹೆಸರಿನ ಅಭ್ಯರ್ಥಿಯನ್ನು ಸ್ವತಂತ್ರವಾಗಿ ನಿಲ್ಲಿಸಲು ತಯಾರಿ ನಡೆಸಿದ್ದು, ಅವರು ಸೋಲನ್ನು ಈಗಾಗಲೇ ಒಪ್ಪಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಡಿ.ಕೆ. ಸಹೋದರರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ತಾಲೂಕಿನ ಹರೂರು ಮೊಗೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬೇವೂರು ಜಿಪಂ ವ್ಯಾಪ್ತಿಯ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಮಾವೇಶದಲ್ಲಿ ಮಾತನಾಡಿದ ಅವರು, ದುಡ್ಡಿರುವವರು ನಿಜವಾದ ಶ್ರೀಮಂತರಲ್ಲ. ಬಡವರ ಕಣ್ಣೀರು ಒರೆಸುವವರೇ ಶ್ರೀಮಂತರು. ಮಾತಿನ ದಾಟಿ, ನಮ್ಮ ನಡೆತೆಯೇ ಒಂದು ವ್ಯಕ್ತಿತ್ವ ಎಂದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಇಬ್ಬರು ಈ ಕ್ಷೇತ್ರದ ಎರಡು ಕಣ್ಣುಗಳಿದ್ದಂತೆ. ಕ್ಷೇತ್ರ ನೀರಾವರಿ ಯೋಜನೆಗಳಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ಮೂವರು ಕಾರಣಕರ್ತರಾಗಿದ್ದಾರೆ. ಈಗ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಹೃದಯಗಳು ಒಂದಾಗಿರುವುದರಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಆನೆ ಬಲ ಬಂದಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಹೃದಯಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಲಕ್ಷ ರು. ಇದ್ದ ಸ್ಟಂಟ್ ಅನ್ನು ಕೇಂದ್ರ ಸರ್ಕಾರ ೨೫ ಸಾವಿರಕ್ಕೆ ಇಳಿಸಿದೆ. ಆಯುಷ್ಮಾನ್ ಕಾರ್ಡ್ ಮೂಲಕ ಬಡವರಿಗೆ ಚಿಕಿತ್ಸೆ ದೊರೆಯುತ್ತಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ೪೦೦ ಕ್ಷೇತ್ರ ಗೆಲ್ಲಬೇಕು ಎಂಬುದು ಪ್ರಧಾನಿ ಮೋದಿಯವರ ಕನಸಾಗಿದ್ದು, ಇಲ್ಲಿನ ವಾತಾವರಣ ನೋಡಿದರೆ ನಾನು ಗೆಲ್ಲುವ ಭರವಸೆ ಮೂಡಿಸಿದೆ ಎಂದರು.

ವೈದ್ಯನಾಗಿ ನಾನು ಚಿಕಿತ್ಸೆ ಮೊದಲು, ಹಣ ನಂತರ ಎಂಬ ಘೋಷವಾಕ್ಯವಿಟ್ಟುಕೊಂಡು ಕೆಲಸ ಮಾಡಿದೆ. ಈಗ ಮತ ಮೊದಲು ಸೇವೆ ನಿರಂತರ ಎನ್ನುತ್ತಿದ್ದೇನೆ. ದೇಶಕ್ಕೆ ದೃಢ ನಿರ್ಧಾರ ಮಾಡುವ ಸ್ಥಿರ ಸರ್ಕಾರದ ಅಗತ್ಯವಿದೆ. ನೀವು ಸ್ವತಂತ್ರವಾಗಿ ಯೋಚಿಸಿ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ. ನಿಮ್ಮ ಸೇವೆ ಮಾಡಲು ನನಗೂ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.

ರಾಜಾರಾಜೇಶ್ವರಿ ನಗರದ ಶಾಸಕ ಮುನಿರತ್ನ ಮಾತನಾಡಿ, ಡಾ. ಮಂಜುನಾಥ್ ಸಂಜೀವಿನಿಯಂತೆ, ಅವರಿಂದ ಎಷ್ಟೋ ಮಹಿಳೆಯರ ಮಾಂಗಲ್ಯ ಉಳಿದಿದೆ. ಅವರು ನೀಡುತ್ತಿರುವ ಆಮಿಷಗಳನ್ನು ಪಕ್ಕಿಕ್ಕಿಟ್ಟು ಡಾ. ಮಂಜುನಾಥ್‌ಗೆ ಮತನೀಡಿ. ಕಳೆದ ಹತ್ತು ವರ್ಷದ ಸಂಸದರ ಅವಧಿಯಲ್ಲಿ ಬರೀ ಶುದ್ಧ ನೀರಿನ ಘಟಕಗಳ ನಿರ್ಮಾಣ ಬಿಟ್ಟು ಬೇರೆ ಏನೂ ಮಾಡಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.ಪೊಟೋ೨೮ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಹರೂರು ಮೊಗೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬೇವೂರು ಜಿಪಂ ವ್ಯಾಪ್ತಿಯ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಮಾವೇಶವನ್ನು ಡಾ.ಮಂಜುನಾಥ್‌ ಇತರರು ಉದ್ಘಾಟಿಸಿದರು.