ಸಾರಾಂಶ
ಗ್ಲುಕೋಮಾದಿಂದ ಉಂಟಾಗುವ ದೃಷ್ಟಿಹೀನತೆ ಸಮಸ್ಯೆ ತಡೆಯಲು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ತುಂಬಾ ಅನಿವಾರ್ಯ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಅಗತ್ಯ ಚಿಕಿತ್ಸೆ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ಲುಕೋಮಾದಿಂದ ಉಂಟಾಗುವ ದೃಷ್ಟಿಹೀನತೆ ಸಮಸ್ಯೆ ತಡೆಯಲು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ತುಂಬಾ ಅನಿವಾರ್ಯ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಅಗತ್ಯ ಚಿಕಿತ್ಸೆ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಸೈಟ್ ಸೇವರ್ಸ್ ಇಂಡಿಯಾ ಮತ್ತು ಆ್ಯಬ್‌ವೀ ಇಂಡಿಯಾ ಸಂಸ್ಥೆಗಳು ಜಂಟಿಯಾಗಿ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಗ್ಲುಕೋಮಾದಿಂದ ಉಂಟಾಗುವ ದೃಷ್ಟಿಹೀನತೆ ತಡೆಗಟ್ಟುವಿಕೆ’ ಕುರಿತ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದರು.
ರಾಜ್ಯದ ಜನರ ಆರೋಗ್ಯ ಮತ್ತು ಯೋಗಕ್ಷೇಮ ನಮ್ಮ ಪ್ರಮುಖ ಆದ್ಯತೆ. ಗ್ಲುಕೋಮಾದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವಿದೆ. ಇದು ದೃಷ್ಟಿಯನ್ನೇ ಕಳೆಯಬಹುದು. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸಿ ಚಿಕಿತ್ಸೆ ನೀಡಲಾಗುವುದು. ಇದೇ ವಿಚಾರವಾಗಿ ಶ್ರಮಿಸುತ್ತಿರುವ ಸೈಟ್ ಸೇವರ್ಸ್ ಇಂಡಿಯಾ ಮತ್ತು ಆ್ಯಬ್‌ವೀ ಇಂಡಿಯಾದ ಬದ್ಧತೆ ಶ್ಲಾಘನೀಯ ಎಂದರು.ಬಿಬಿಎಂಪಿಯ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಸುರಲ್ಕರ್, ಆ್ಯಬ್‌ವೀ ಇಂಡಿಯಾದ ವೈದ್ಯಕೀಯ ನಿರ್ದೇಶಕ ಡಾ। ರಾಹುಲ್ ರಾಥೋಡ್, ಸೈಟ್‌ಸೇವರ್ಸ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆರ್.ಎನ್.ಮೊಹಾಂತಿ ಹಾಜರಿದ್ದರು.