ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕನ್ನಡಿಗರಲ್ಲಿ ಸ್ವಾಭಿಮಾನ, ಶೌರ್ಯ, ಪರಾಕ್ರಮ, ಭಾವನಾತ್ಮಕತೆ ಇದ್ದರೂ ಆಧುನಿಕ, ಯಾಂತ್ರಿಕ, ಸ್ಮರ್ಧಾತ್ಮಕ ಯುಗದಲ್ಲಿ ಯುವ ಪೀಳಿಗೆಗೆ ಹಣ ಸಂಪಾದನೆಯೇ ಪ್ರಮುಖ ಗುರಿಯಾಗಿದೆ ಎಂದು ಪೊನ್ನಂಪೇಟೆ ಸಾಯಿ ಶಂಕರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಯೋಗಾನಂದಸ್ವಾಮಿ ಹೇಳಿದರು.ಕನ್ನಡದ ಕುಲ ಪುರೋಹಿತ ಆಲೂರು ವೆಂಕಟರಾಯ ಅವರ ಜೀವನ ಮತ್ತು ಸಾಧನೆ ಹಾಗೂ ಕರ್ನಾಟಕ ಏಕೀಕರಣದಲ್ಲಿ ಅವರ ಪಾತ್ರ ಎಂಬ ವಿಷಯದ ಬಗ್ಗೆ ಧಾರವಾಡದ ಆಲೂರು ವೆಂಕಟರಾವ್ ಸ್ಮಾರಕ ಟ್ರಸ್ಟ್,ಕೆ.ಎಸ್.ನಾಗರತ್ನಮ್ಮ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ನಾಡು, ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದಿದ್ದರೆ ಮಾತ್ರ ನಾಡಿನ ಬಗ್ಗೆ ನಮಗೆ ಹೆಮ್ಮೆ, ಅಭಿಮಾನ ಬರಲು ಸಾಧ್ಯ. ಮುಂದಿನ ಪೀಳಿಗೆಗೆ ನಾಡು ನುಡಿಯ ರಕ್ಷಣೆ ಸಾಧ್ಯ ಎಂದರು. ನಿವೃತ್ತ ಪ್ರಾಂಶುಪಾಲ (ಆಲೂರು ವೆಂಕಟರಾವ್ ಮೊಮ್ಮಗ) ದೀಪಕ್ ಆಲೂರು, ನಿವೃತ್ತ ಉಪನ್ಯಾಸಕ ಹರ್ಷ ಡಂಬಳ ಮಾತನಾಡಿದರು. ಜವಾಹರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್‌ಆರ್‌ಎಸ್ ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜವಾಹರ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಚ್.ಎನ್.ಮಾದಪ್ಪ ಹಾಗೂ ಎಸ್.ಎಂ.ದೇಶಪಾಂಡೆ, ರಮೇಶ್ ನಾಡಿಗೇರ, ವೆಂಕಟೇಶ್ ದೇಸಾಯಿ, ಪ್ರಾಂಶುಪಾಲ ವಿ.ಆರ್.ಬಾಲ ಸುಬ್ರಹ್ಮಣ್ಯ, ಇತಿಹಾಸ ಉಪನ್ಯಾಸಕ ಮಹೇಶ್, ಕನ್ನಡ ಉಪನ್ಯಾಸಕ ಎ.ಬಿ.ಮಹದೇವಮೂರ್ತಿ, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))