ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯವಾಗಿರಿ: ಡಾ.ಮಿನಾಜ

| Published : Mar 02 2024, 01:46 AM IST

ಸಾರಾಂಶ

ವಿಜಯಪುರ: ಎಲ್ಲರೂ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಿನಾಜ ಕಾಗದಕೋಟಿ ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ನಗರದ ಕಾಲೇಜು ಆವರಣದಲ್ಲಿ ನಡೆದ ಐಕ್ಯೂಎಸಿ ಹಾಗೂ ರೆಡ್ ಕ್ರಾಸ್ ಘಟಕ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ ಆರೋಗ್ಯದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ವಿಜಯಪುರ: ಎಲ್ಲರೂ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಿನಾಜ ಕಾಗದಕೋಟಿ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ನಗರದ ಕಾಲೇಜು ಆವರಣದಲ್ಲಿ ನಡೆದ ಐಕ್ಯೂಎಸಿ ಹಾಗೂ ರೆಡ್ ಕ್ರಾಸ್ ಘಟಕ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ ಆರೋಗ್ಯದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಪ್ರಾಂಶುಪಾಲರಾದ ಡಾ.ಆರ್.ಎಸ್.ಕಲ್ಲೂರಮಠ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಎಲ್ಲರೂ ನಿಯತಕಾಲಿಕವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸದೃಢ ಆರೋಗ್ಯ ಹೊಂದುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಚಿದಾನಂದ ಆನೂರ, ಪ್ರೊ.ರಮೇಶ ಬಳ್ಳೊಳ್ಳಿ, ಪ್ರೊ.ಆಸೀಫ್ ರೋಜಿನದಾರ, ಪ್ರೊ.ಅಸಾದುಲ್ಲಾ, ಡಾ.ಎಮ್.ಆರ್.ಕೆಂಭಾವಿ, ಡಾ.ದಾವಲಸಾ ಪಿಂಜಾರ, ಪ್ರೊ.ಪಿ.ಬಿ.ಬಿರಾದಾರ, ಪ್ರೊ.ಸವಿತಾ ಪಾಟೀಲ, ಪ್ರೊ.ನಿಲೋಫರ್ ಕಲಾದಗಿ, ಪ್ರೊ. ಲಕ್ಷ್ಮೀ ಮೋರೆ, ಡಾ.ಭಾರತಿ ಹೊಸಟ್ಟಿ, ಪ್ರೊ.ಎಮ್.ಆರ್. ಜೋಶಿ, ಪ್ರೊ.ರಶ್ಮಿ ರೊಟ್ಟಿ, ಪ್ರೊ.ಮಂಜುನಾಥ ಗಾಣಿಗೇರ, ಪ್ರೊ.ರಶ್ಮಿ ಹೊನಕೇರಿ, ಪ್ರೊ.ತನ್ವೀರ್ ಅಬ್ಬಾಸ, ಪ್ರೊ.ಶೃತಿ ಕದಮ್, ಶಿವಾನಂದ ಸಾಂಗೋಲಿ, ನವೀನಗೌಡ ಬಿರಾದಾರ, ವೀರನಗೌಡ ಪಾಟೀಲ, ಸುಜಾತಾ ಬಿರಾದಾರ, ಪ್ರೊ.ನಾಥುರಾಮ ಜಾಧವ, ಡಾ.ಆನಂದ ಕುಲಕರ್ಣಿ, ಬೋರಮ್ಮ ಗಂಜಿಹಾಳ, ಶೋಭಾ ರುದ್ರಗೌಡರ, ಪ್ರೊ.ನೀಲಕಂಠ ಹಳ್ಳಿ, ಡಾ.ರಾಘವೇಂದ್ರ ಗುರ್ಜಾಲ, ಡಾ.ರಾಜೇಶ್ವರ ಪುರಾಣಿಕ, ಪ್ರೊ.ರಾಮಣ್ಣ ಕಳ್ಳಿ, ಪ್ರೊ.ರಾಮಪ್ಪ ಕುಮಟಗಿ, ಡಾ.ಶಕೀರಾಬಾನು ಕಿತ್ತೂರ, ಡಾ.ಖುದ್ದುಸ ಪಾಟೀಲ, ಆರೋಗ್ಯ ನೀರಿಕ್ಷಣಾಧಿಕಾರಿ ನಿಂಗನಗೌಡ ಬಿರಾದಾರ ಸೇರಿದಮತೆ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.ಪ್ರೊ. ಪಿ.ಬಿ. ಬಿರಾದಾರ ಸ್ವಾಗತಿಸಿದರು. ಪ್ರೊ. ಎಮ್.ಆರ್. ಜೋಶಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಚಿದಾನಂದ ಎಸ್. ಆನೂರ ನಿರೂಪಿಸಿದರು ಹಾಗೂ ಪ್ರೊ. ರಮೇಶ ಬಳ್ಳೊಳ್ಳಿ ವಂದಿಸಿದರು.