ಸಾರಾಂಶ
ತೀರ್ಥಹಳ್ಳಿ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಬಡತನದ ರೇಖೆಯಿಂದ ಕೆಳಗಿರುವವರನ್ನು ಆರ್ಥಿಕ ಭದ್ರತೆ ಮತ್ತು ಸಬಲತೆಯೊಂದಿಗೆ ಮೇಲಕ್ಕೆ ತರುವಲ್ಲಿ ನಡೆದಿರುವ ಯೋಜನೆಗಳು ಸಾಕಾರಗೊಳ್ಳುತ್ತಿದ್ದು, ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರು ಸಂತೃಪ್ತ ಜೀವನ ನಡೆಸುತ್ತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ತಾಲೂಕಿನ ತನಿಕಲ್ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗುಡ್ಡೆಕೊಪ್ಪ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪಧಾದಿಕಾರಿಗಳ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಸಂದಿದ್ದರೂ ಇಂದಿಗೂ ತಳಸಮುದಾಯದ ಬದುಕು ಹಸನಾಗಿಲ್ಲಾ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನಪರ ಯೋಜನೆಗಳು ಜನರನ್ನು ತಲುಪುತ್ತಿರುವುದು ಗಮನಾರ್ಹವಾಗಿದೆ ಎಂದರು.ಗ್ರಾಮಾಭಿವೃದ್ದಿ ಯೋಜನೆಯ ಸದುದ್ದೇಶವನ್ನು ಮೆಚ್ಚಿರುವ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಕರ್ನಾಟಕಕ್ಕೆ ಸಿಮಿತವಾಗಿರದೇ ರಾಷ್ಟ್ರ ಮಟ್ಟಕ್ಕೂ ವಿಸ್ತರಿಸುವಂತೆ ಮನವಿ ಮಾಡಿರುವುದಲ್ಲದೇ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರ ಸಲಹೆಯನ್ನು ಪಡೆಯಲು ರಾಜ್ಯಸಭೆ ಸದಸ್ಯರನ್ನಾಗಿಯೂ ನಾಮಕರಣಗೊಳಿಸಿದ್ದಾರೆ ಎಂದು ತಿಳಿಸಿದರು.ಸ್ವಾತಂತ್ರ್ಯ ದೊರೆತ ನಂತರದಲ್ಲಿ ಲಕ್ಷಾಂತರ ಕೋಟಿ ಜನರ ತೆರಿಗೆ ಹಣವನ್ನು ವಿನಿಯೋಗಿಸಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನಾಗರಿಕ ಸರ್ಕಾರಗಳಿಂದ ಈ ಕಾರ್ಯ ನಡೆದಿದ್ದರೆ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅಗತ್ಯವೇ ಇರುತ್ತಿರಲಿಲ್ಲ ಎಂದರು.ಮಂಜಪ್ಪ ಗರಗೇಶ್ವರ, ಬಾಂಡ್ಯ-ಕುಕ್ಕೆ ಗ್ರಾಪಂ ಅಧ್ಯಕ್ಷೆ ಅಶ್ವಿನಿ ಪ್ರಭಾಕರ್, ಸದಸ್ಯ ಬಿ.ಕೆ. ವೆಂಕಟೇಶ್, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೆಶಕ ಮುರುಳೀಧರ ಶೆಟ್ಟಿ, ಉಪನ್ಯಾಸಕ ಡಾ. ಶ್ರೀಪತಿ ಹಳಗುಂದ ಇತರರಿದ್ದರು.