ಸಾರಾಂಶ
ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ರೂಪಾಯಿ ಮೌಲ್ಯ ಡಾಲರ್‌ಗೆ ₹90ಕ್ಕೆ ಬಂದು ನಿಂತಿದೆ. ಕೇಂದ್ರ ಬಿಜೆಪಿ ಸರ್ಕಾರದ ಆರ್ಥಿಕ ನೀತಿಯಿಂದಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ರೂಪಾಯಿ ಮೌಲ್ಯ ಹೆಚ್ಚಿಸಲು 600 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ಇಲ್ಲದಿದ್ದರೆ ಡಾಲರ್ ಬೆಲೆ ₹90ರ ಗಡಿ ದಾಟುತ್ತಿತ್ತು ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಕೇಂದ್ರ ಸರ್ಕಾರವನ್ನು ದೂರಿದರು.
ಕನ್ನಡಪ್ರಭವಾರ್ತೆ ಜಮಖಂಡಿ
ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ರೂಪಾಯಿ ಮೌಲ್ಯ ಡಾಲರ್‌ಗೆ ₹90ಕ್ಕೆ ಬಂದು ನಿಂತಿದೆ. ಕೇಂದ್ರ ಬಿಜೆಪಿ ಸರ್ಕಾರದ ಆರ್ಥಿಕ ನೀತಿಯಿಂದಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ರೂಪಾಯಿ ಮೌಲ್ಯ ಹೆಚ್ಚಿಸಲು 600 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ಇಲ್ಲದಿದ್ದರೆ ಡಾಲರ್ ಬೆಲೆ ₹90ರ ಗಡಿ ದಾಟುತ್ತಿತ್ತು ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಕೇಂದ್ರ ಸರ್ಕಾರವನ್ನು ದೂರಿದರು.ಶುಕ್ರವಾರ ತಾಲೂಕಿನ ಸಾವಳಗಿ ಗ್ರಾಮದ ಅಂಬಾಭವಾನಿ ಜಾತ್ರೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶದ ಸಮಸ್ಯೆ ಹಾಗೂ ಆರ್ಥಿಕ ದಿವಾಳಿತನ ಜನರಿಗೆ ತಿಳಿಯಬಾರದೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರ ವಿರುದ್ಧ ಆರೋಪ ಮಾಡುತ್ತಿರುತ್ತಾರೆ. ಅವರಿಗೆ ಬೇರೆ ಕೆಲಸವಿಲ್ಲ. ಪ್ರಧಾನಿ ಮೋದಿಯವರು ನೆಹರು ಅವರ ಆರ್ಥಿಕ ನೀತಿಯ ಕುರಿತು ಮಾತನಾಡಿದ್ದಾರೆ. ಬಹಿರಂಗವಾಗಿ ಬಂದು ಸುದ್ದಿಗೋಷ್ಠಿ ನಡೆಸಲಿ ಎಂದು ಸವಾಲು ಹಾಕಿದ ಸಚಿವಪು, ಟೆಲಿ ಪ್ರಾಮ್ಟರ್ ಇಲ್ಲದಿದ್ದರೆ ಅವರಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.ಅಮೆರಿಕ ಭಾರತೀಯರನ್ನು ಅಮಾನವೀಯವಾಗಿ ಹೊರದಬ್ಬಿದೆ ಈ ಬಗ್ಗೆ ಮಾತನಾಡಲಿ. ರಾಜ್ಯಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಏನು ಎಂಬುದನ್ನು ಸ್ಪಷ್ಟಪಡಿಸಲಿ, ಮಾಧ್ಯಮವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಮಾಧ್ಯಮಕ್ಕೆ ಸ್ವತಂತ್ರಕೊಟ್ಟು ನೋಡಲಿ ಅಥವಾ ಮಾಧ್ಯಮದ ಮುಂದೆ ಬಂದು ಮಾತನಾಡಲಿ. ಅಂಕಿ-ಸಂಖ್ಯೆಗಳನ್ನು ಹೇಳಲಿ, ಮಹಾರಾಷ್ಟ್ರ ಚುನಾವಣೆಗಳಲ್ಲಿ ಮತ ಹೆಚ್ಚು ಮಾಡಿಕೊಂಡು ಮೋಸದಿಂದ ಗೆದ್ದಿದ್ದಾರೆ ಎಂದು ದೂರಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ, ಬಿ.ಎಸ್. ಸಿಂಧೂರ, ಮುಖಂಡರಾದ ಅರ್ಜುನ ದಳವಾಯಿ, ಶ್ರೀಶೈಲ ದಳವಾಯಿ, ಸಿದ್ದು ಮೀಸಿ, ಈಶ್ವರ ವಾಳೆಣ್ಣವರ, ಮಹೇಶ ಕೋಳಿ, ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ರವಿಯಡಳ್ಳಿ, ಮಹಾದೇವ ಪಾಟೀಲ, ಬಸವರಾಜ ಹರಕಂಗಿ, ರೋಹಿತ ಸೂರ್ಯವಂಶಿ ಸೇರಿದಂತೆ ಹಲವರು ಇದ್ದರು.;Resize=(128,128))
;Resize=(128,128))