ಸಾರಾಂಶ
ಲೋಕಾಪುರ: ಪರಿಸರ ಜೀವ ಸಂಕುಲದ ಜೀವಾಳವಾಗಿದ್ದು,ಇಂದಿನ ವೈಜ್ಞಾನಿಕ ಯುಗದಲ್ಲಿ ಶುದ್ಧವಾದ ಪರಿಸರದ ಅವಶ್ಯಕತೆ ಇದೆ. ಆದ್ದರಿಂದ ಯುವಕರು ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಗುತ್ತಿಗೆದಾರ ಕಾಶಲಿಂಗ ನಿರ್ವಾಣಿ ಹೇಳಿದರು.
ಲೋಕಾಪುರ: ಪರಿಸರ ಜೀವ ಸಂಕುಲದ ಜೀವಾಳವಾಗಿದ್ದು,ಇಂದಿನ ವೈಜ್ಞಾನಿಕ ಯುಗದಲ್ಲಿ ಶುದ್ಧವಾದ ಪರಿಸರದ ಅವಶ್ಯಕತೆ ಇದೆ. ಆದ್ದರಿಂದ ಯುವಕರು ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಗುತ್ತಿಗೆದಾರ ಕಾಶಲಿಂಗ ನಿರ್ವಾಣಿ ಹೇಳಿದರು.
ಪಟ್ಟಣದ ಲೋಕೇಶ್ವರ ಶಿಕ್ಷಣ ಸಮಿತಿಯ ಆರ್.ಬಿ.ಜಿ. ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಸಸಿ ನೆಟ್ಟು ಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮ ಹಕ್ಕು ಪರಿಸರ ಕಾಳಜಿ ನಮ್ಮ ಕರ್ತವ್ಯ ಪರಿಸರ ಉಳಿದರೆ ನಾವು ಉಳಿಯುತ್ತೇವೆ ಎಂದರು.ಮುಖ್ಯ ಗುರು ಎಂ.ವೈ. ಮಬ್ರುಕರ್ ಮಾತನಾಡಿ, ಸಸಿ ನೆಟ್ಟರೆ ಸಾಲದು. ಅದನ್ನು ನೀರೆರೆದು ಪೋಷಿಸುವುದು ಅಷ್ಟೇ ಅಗತ್ಯವಿದೆ. ಕೇಂದ್ರದ ಸಿಬ್ಬಂದಿ ಅದರ ಲಾಲನೆ ಪಾಲನೆ ಮಾಡಬೇಕು. ಗಿಡಿಮರಗಳ ನಾಶದಿಂದ ಬರಗಾಲ ಸೇರಿದಂತೆ ನಾನಾ ರೋಗ ರುಜಿನಗಳಿಗೆ ಮನುಷ್ಯ ತುತ್ತಾಗುತ್ತಿದ್ದಾನೆ ಎಂದರು.
ಶಿಕ್ಷಕ ಎಚ್.ಎಫ್.ನಾಯ್ಕ, ಎಲ್.ಕೆ.ತಿರಕಣ್ಣವರ, ಮಂಜುನಾಥ ಪಾಟೀಲ, ಗುತ್ತಿಗೆದಾರರ ಕಾಶಲಿಂಗ ನಿರ್ವಾಣಿ, ಶಾಲಾ ಶಿಕ್ಷಕವೃಂದ ವಿದ್ಯಾರ್ಥಿಗಳು ಇದ್ದರು.