ಸಾರಾಂಶ
ಬ್ರಹ್ಮಕಲಶೋತ್ಸವ, ಬ್ರಹ್ಮಮಂಡಲ ಹಾಗೂ ವರ್ಷಾವಧಿ ಉತ್ಸವದ ಸಂಭ್ರಮದಲ್ಲಿರುವ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಲಕ್ಷ್ಮೀ ವೆಂಕಟರಮಣ ಮಠಕ್ಕೆ ಭೇಟಿ ನೀಡಿ, ಆಶೀರ್ವಚನ ನೀಡಿ ಮಾತನಾಡಿದರು.
ಮೂಲ್ಕಿ: ಗಳಿಸಿದ ಸಂಪತ್ತಿನಲ್ಲಿ ಸ್ವಂತಕ್ಕೆ ಬಳಸುವುದರ ಜೊತೆಗೆ ಒಂದಂಶವನ್ನು ಸಮಾಜಕ್ಕೆ, ದೇಗುಲಗಳಿಗೆ, ಧಾರ್ಮಿಕ ಕಾರ್ಯಗಳಿಗೆ ದಾನವಾಗಿ ನೀಡಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸಬೇಕು, ಕಿರಿಯರಿಗೆ ಸಂಸ್ಕಾರ ನೀಡುವ ಕೆಲಸ ಆಗಬೇಕು ಎಂದು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಬ್ರಹ್ಮಕಲಶೋತ್ಸವ, ಬ್ರಹ್ಮಮಂಡಲ ಹಾಗೂ ವರ್ಷಾವಧಿ ಉತ್ಸವದ ಸಂಭ್ರಮದಲ್ಲಿರುವ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಲಕ್ಷ್ಮೀ ವೆಂಕಟರಮಣ ಮಠಕ್ಕೆ ಭೇಟಿ ನೀಡಿ, ಆಶೀರ್ವಚನ ನೀಡಿ ಮಾತನಾಡಿದರು. ಶೃಂಗೇರಿ ಮಠ ಮುದ್ರಾಧಿಕಾರಿ ಕೆ. ಪ್ರಭಾಕರ ಭಟ್ ಅಶ್ವತ್ಥಪುರ, ಸೀತಾರಾಮಚಂದ್ರ ದೇವಸ್ಥಾನದ ರಘುನಾಥ ಎಲ್.ವಿ, ಕ್ಷೇತ್ರದ ತಂತ್ರಿ ಜಗದೀಶ ಉಪಾಧ್ಯಾಯ ಪಾವಂಜೆ, ವೇದಮೂರ್ತಿ ಪ್ರವೀಣ್ ಭಟ್, ಕಾರ್ತೀಕೇಯ ಉಪಾಧ್ಯಾಯ, ಆನಂದ ರಾವ್, ಕ್ಷೇತ್ರದ ದಯಾನಂದ ಭಟ್, ಕುಶಲ ಪೂಜಾರಿ, ಸತ್ಯಾನಂದ ಅಮೀನ್, ಕಿರಣ್ ಮಂಜನಬೈಲು, ನಾಗರಾಜ ಭಟ್, ದರ್ಶನ್, ಅರುಣ್ ಸಾಲ್ಯಾನ್, ಪ್ರಶಾಂತ ಶೆಟ್ಟಿ, ಅಶ್ವತ್ಥ್, ಚೈತನ್ಯ ಮತ್ತಿತರರು ಇದ್ದರು.