ಅನಂತಮುಖಿ- ಡಾ.ಟಿ.ಆರ್. ಅನಂತರಾಮು ಅಭಿನಂದನಾ ಗ್ರಂಥ

| Published : Mar 11 2025, 12:48 AM IST

ಸಾರಾಂಶ

ಇಲ್ಲಿ ಕೂಡ ನಿರ್ಜೀವ ಶಿಲೆಗಳಲ್ಲಿ ಅರಳಿದ ಅದ್ಭುತ ಸೆಲೆ, ಕನ್ನಡ ವಿಜ್ಞಾನ ಸಾಹಿತ್ಯದ ಮೇರು ಲೇಖಕ,

ಕನ್ನಡಪ್ರಭ ವಾರ್ತೆ ಮೈಸೂರುಅನಂತಮುಖಿ- ಡಾ.ಟಿ.ಆರ್‌. ಅನಂತರಾಮು ಅಭಿನಂದನಾ ಗ್ರಂಥವನ್ನು ಡಾ.ಸುಕನ್ಯಾ ಸೂನಗಹಳ್ಳಿ ಸಂಪಾದಿಸಿದ್ದಾರೆ.ವಿಜ್ಞಾನದ ವಿಷಯಗಳನ್ನು ಕನ್ನಡದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಡಾ.ಟಿ.ಆರ್. ಅನಂತರಾಮು ಅವರು ಕಳೆದೈದು ದಶಗಳಿಂದಲೂ ಮಾಡುತ್ತಾ ಬಂದಿದ್ದಾರೆ. 75 ವಸಂತಗಳನ್ನು ದಾಟಿರುವ ಅವರ ಬದುಕು- ಬರಹ- ಸಾಧನೆ, ವಿಜ್ಞಾನ ಸಾಹಿತ್ಯದಲ್ಲಿ ಮಾಡಿದ ಪ್ರಯೋಗಗಳು, ಅವುಗಳ ಸಮಕಾಲೀನ ಮೌಲ್ಯ ಕುರಿತ 81 ಲೇಖನಗಳು ಇಲ್ಲಿವೆ. ಇವುಗಳನ್ನು ಎಂಟು ವಿಭಾಗಗಳಾಗಿ ವಿಂಗಡಿಸಲಾಗಿದೆ.ಗೆಳೆಯರ ಅಂಗಳದಲ್ಲಿ ನೇಮಿಚಂದ್ರ, ಪಾಲಹಳ್ಳಿ ವಿಶ್ವನಾಥ್, ಆಕಾಶ್‌ ಬಾಲಕೃಷ್ಣ, ವಸುಂದರ ಭೂಪತಿ, ಎಂ.ಬಿ. ದೀಪಾ, ಗುರುರಾಜ ಎಸ್. ದಾವಣಗೆರೆ, ಬಿ.ಆರ್‌. ಗುರುಪ್ರಸಾದ್‌, ಎಂ.ಎಸ್. ರಘುನಾಥ್‌, ಬಿಂಡಿಗನವಿಲೆ ಭಗವಾನ್‌, ಕ್ಷಮಾ ವಿ. ಭಾನುಪ್ರಕಾಶ್‌, ಎಸ್. ಕ್ಷಮಾ, ಕೆ.ಎಸ್. ನಟರಾಜ್‌, ಎಲ್.ಜಿ. ಮೀರಾ, ಸುಕನ್ಯಾ ಸೂನಗಹಳ್ಳಿ, ಎಸ್. ಮಂಜುನಾಥ್, ಪ್ರಭಾಕರ ಸಂಗೂರಮಠ, ಎಚ್‌.ಕೆ. ಸುಬ್ಬಲಕ್ಷ್ಮಿ, ಬಿ. ಪ್ರೇಮಲತಾ, ಸರೋಜಾ ಪ್ರಕಾಶ್‌, ಸಿ. ಯತಿರಾಜು ಮೇಘನಾ ಸುಧೀಂದ್ರ, ಟಿ.ಎ. ಬಾಲಕೃಷ್ಣ ಅಡಿಗ, ಸ.ರ. ಸುದರ್ಶನ, ಎ.ಎಂ. ರಮೇಶ್‌, ಶಿವರಾಮ್‌ ಕನ್ಸೇನ್‌, ವಿ.ಎಸ್.ಎಸ್. ಶಾಸ್ತ್ರೀ, ಕೆ.ಎಂ. ಸದಾನಂದಮೂರ್ತಿ, ಬೈರಮಂಗಲ ರಾಮೇಗೌಡ, ಎನ್‌. ಗುರುರಾಜ, ಎಲ್.ಎಸ್. ಶಾಮಸುಂದರ ಶರ್ಮ, ಕೃಷ್ಣ ಚೈತನ್ಯ ಅವರ ಲೇಖನಗಳಿವೆ.ಈ ಎಲ್ಲಾ ಲೇಖನಗಳಲ್ಲೂ ಕೂಡ ಟಿ.ಆರ್. ಅನಂತರಾಮು ಅವರು ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಬಗ್ಗೆ ಬರೆಯಲಾಗಿದೆ. ಅದ್ವೀತಿಯ ವಿಜ್ಞಾನ ಸಂವಹನಕಾರ, ವಿಜ್ಞಾನ ಸಂಗಾತಿ, ಅವಿರತ ಅನಂತಪಥ, ವಿಜ್ಞಾನ ಸಿಂಧು, ಕಿರಿಯರಿಗೆ ಕೈಮರ, ದಣಿವರಿಯದ ಬರಹಗಾರ, ವಿಜ್ಞಾನ ಸಾಹಿತ್ಯದ ಚುಂಬಕ ಶಕ್ತಿ, ಅಂಬಿಗ, ದಣಿವರಿಯದ, ಪ್ರತಿಭಾನ್ವಿತ, ನಗುಮೊಗದ ವಿಜ್ಞಾನ ಬರಹಗಾರ, ಛಲಂದಕ ಮಲ್ಲ, ಬದುಕಿನ ಗಣಿಯೊಳಗೆ ದೊರೆತ ಸ್ನಿಗ್ಧಪ್ರೀತಿಯ ಗುರು, ವಿಜ್ಞಾನದೀವಿಗೆಯ ವಾರಸುದಾರ, ಅವಿಶ್ರಾಂತ ಸಾಧಕ, ಸಾರ್ಥಕ ಬದುಕಿನ ಸಾರಥಿ, ಅಪರೂಪದ ಜನವಿಜ್ಞಾನಿ, ಭೂವಿಜ್ಞಾನದ ಸೇತುಬಂಧ, ಕನ್ನಡನಾಡಿನ ವಿಜ್ಞಾನ ನಾಡಿ, ಋಷಿಸದೃಶ ವಿಜ್ಞಾನಿ, ಅಸಾಧಾರಣ ವಿಜ್ಞಾನ ಪರಿಶೋಧಕ- ಹೀಗೆ ಅನಂತರಾಮು ಅವರ ವ್ಯಕ್ತಿತ್ವವನ್ನು ಹಾಗೂ ಸಾಹಿತ್ಯವನ್ನು ಪರಿಚಯಿಸಿದ್ದಾರೆ.ವಿಜ್ಞಾನ ಸಾಹಿತ್ಯದ ಕನ್ನಡಿಯಲ್ಲಿ ಬಿ.ಎಸ್. ಶೈಲಜಾ, ಎಸ್.ಆರ್. ತೋಂಟದಾರ್ಯ, ನಾ. ಸೋಮೇಶ್ವರ, ಎಲ್‌.ವಿ. ಶಾಂತಕುಮಾರಿ, ಎನ್‌. ನಂದೀಶ್ವರ, ಸಿ.ಆರ್. ಚಂದ್ರಶೇಖರ್‌, ಜಿ.ವಿ. ನಿರ್ಮಲಾ, ಪಿ.ಎಸ್. ಶಂಕರ್, ಎಂ.ಆರ್‌. ನಾಗರಾಜು, ಟಿ.ಎಸ್. ಗೋಪಾಲ್‌, ಕಲ್ಗುಂಡಿ ನವೀನ್‌, ಜಿ. ಅಶ್ವತ್ಥನಾರಾಯಣ, ಕೆ.ಎಸ್. ಪವಿತ್ರಾ, ಜಿ.ಟಿ. ಶ್ರೀನಿಧಿ, ಜಿ.ಎನ್‌. ನರಸಿಂಹಮೂರ್ತಿ, ಎಚ್.ಎ. ಪುರುಷೋತ್ತಮ ರಾವ್‌, ರಾ.ನಂ. ಚಂದ್ರಶೇಖರ, ಬಿ,.ಎಸ್. ಜಯಪ್ರಕಾಶ ನಾರಾಯಣ, ಶರಣಬಸವೇಶ್ವರ ಅಂಗಡಿ, ಶಶಿಧರ ಹಾಲಾಡಿ, ಓಂಶಿವಪ್ರಕಾಶ್‌ ಅವರ ಲೇಖನಗಳಿವೆ. ಇಲ್ಲಿ ಕೂಡ ನಿರ್ಜೀವ ಶಿಲೆಗಳಲ್ಲಿ ಅರಳಿದ ಅದ್ಭುತ ಸೆಲೆ, ಕನ್ನಡ ವಿಜ್ಞಾನ ಸಾಹಿತ್ಯದ ಮೇರು ಲೇಖಕ, ಸವ್ಯಸಾಚಿ, ವಿಜ್ಞಾನ ಗಂಗೆಯಲ್ಲಿ ಮಿಂದೆದ್ದ ಲೇಖಕ, ವ್ಯಕಿತ್ವದ ಅನಂತ ಮುಖಗಳನ್ನು ಪರಿಚಯಿಸಲಾಗಿದೆ. ಜೊತೆ ಜೊತೆಗೆ ವಿಜ್ಞಾನ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ದಾಖಲಿಸಲಾಗಿದೆ.ಮಾಧ್ಯಮ ಮಿತ್ರ ಮಸೂರದಲ್ಲಿ ನಾಗೇಶ ಹೆಗಡೆ, ನಾಗತಿಹಳ್ಳಿ ಚಂದ್ರಶೇಖರ, ಜಯಂತ ಕಾಯ್ಕಿಣಿ, ಎಚ್.ಆರ್. ಕೃಷ್ಣಮೂರ್ತಿ, ಚ.ಹ. ರಘುನಾಥ್‌, ಎನ್.ಎಸ್. ಶ್ರೀಧರಮೂರ್ತಿ, ಎ. ರಮೇಶ ಉಡುಪ, ಆರ್. ದೊಡ್ಡೇಗೌಡ, ಕೆ.ಎಸ್. ಮುರಳಿ, ರವಿಪ್ರಕಾಶ್‌, ಎಸ್. ನಾಗಣ್ಣ, ಜಿ.ಎನ್‌. ಮಂಜುನಾಥ ಅವರು ತಾವು ಕಂಡ ಅನಂತರಾಮು ಅವರ ವ್ಯಕ್ತಿತ್ವ ಹಾಗೂ ಬರಹವನ್ನು ಕಟ್ಟಿಕೊಟ್ಟಿದ್ದಾರೆ.ಅರಣ್ಯಪರ್ವದ ದಿನಗಳು ಭಾಗದಲ್ಲಿ ಮಂಜುನಾಥ್‌, ಎಂ. ವೆಂಕಟಸ್ವಾಮಿ, ಎಂ.ಎಸ್. ಚಂದ್ರಶೇಖರ್,. ಕೆ. ಚಂದ್ರಶೇಖರ್‌ ಅವರು ರಾಮರಾವ್‌ ಕಂಪನಿಯಿಂದ ಜಿಎಸ್‌ಐ ಕ್ಯಾಂಪ್‌ ವರೆಗೆ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಿ, ಅನಂತರಾಮ್‌ ಅವರೊಂದಿಗೆ ಕಳೆದ ದಿನಗಳನ್ನು ಚಿತ್ರಿಸಿದ್ದಾರೆ.ಕುಟುಂಬದ ಚಾವಡಿಯಲ್ಲಿ ಟಿ.ಆರ್‌. ಲಲಿತಮ್ಮ, ಟಿ.ಆರ್‌. ಸಾವಿತ್ರಮ್ಮ, ಎ.ಆರ್‌. ಅನ್ನಪೂರ್ಣ, ರಂಗಸ್ವಾಮಿ ಮೂಕನಹಳ್ಳಿ, ಎ.ಆರ್. ಉಮಾ, ಎಚ್‌.ಎನ್‌. ಕೃಷ್ಣಮೂರ್ತಿ, ಸುಮಾ ಗುರುಪ್ರಸಾದ್‌, ಟಿ.ಎಸ್. ವಿಶ್ವನಾಥ, ಲಕ್ಷ್ಮೀನಾರಾಯಣಪ್ಪ, ಟಿ.ಎ. ಚೇತನ್‌, ಟಿ.ಎ. ರಮ್ಯಾ, ಅನನ್ಯಾ,. ಟಿ.ಎಸ್. ನಾಗೇಶ್,. ಎ.ಎನ್. ಜೋಯಿತ ಅವರ ಆಪ್ತ ಬರಹಗಳಿವೆ. ನಂತರದ ಭಾಗಗಳಲ್ಲಿ ಅನಂತರಾಮು ಅವರ ಜೀವನ ಸಾಧನೆ, ಲೇಖಕರ ಮಾಹಿತಿ, ಮನದಂಗಳಲ್ಲಿ ನಿಂತ ಸ್ಮೃತಿ ಚಿತ್ರಗಳು, ಅನಂತರಾಮು ಅವರ ಕೃತಿಗಳ ಪಕ್ಷಿನೋಟವಿದೆ.ಕೀನ್ಯಾದಲ್ಲಿಟ್ಟುಕೊಂಡೆ ಡಾ.ಸುಕನ್ಯಾ ಸೂನಗಹಳ್ಳಿ ಅವರು ಇಲ್ಲಿನ ಲೇಖಕರನ್ನು ಸಂಪರ್ಕಿಸಿ, ಅನಂತರಾಮು ಅವರ ಜೀವನ- ಸಾಧನೆಯನ್ನು ಪರಿಚಯಿಸುವ ಗ್ರಂಥವನ್ನು ಸಂಪಾದಿಸಿಕೊಟ್ಟಿದ್ದಾರೆ. ಹೀಗಾಗಿ.ಇದೊಂದು ಅಭಿನಂದನಾ ಗ್ರಂಥ ಎನ್ನುವುದಕ್ಕಿಂತ ಅನಂತರಾಮು ಅವರ ಆತ್ಮಚರಿತ್ರೆಯಂತೆಯೂ ಇದೆ. ಕನ್ನಡ ವಿಜ್ಞಾನ ಸಾಹಿತ್ಯದ ಬಗ್ಗೆ ಆಸಕ್ತಿ ಇರುವರೆಲ್ಲರೂ ಓದಬಹುದಾದ ಗ್ರಂಥ, ಅಷ್ಟೊಂದು ಆಸಕ್ತಿದಾಯಕವಾಗಿದೆ. ಆಸಕ್ತರು ಹರಿವು ಬುಕ್‌ ಪ್ರಕಸಿದ್ದು, ಆಸಕ್ತರು ಮೊ. 80888 22171 ಸಂಪರ್ಕಿಸಬಹುದು.