ಸಾರಾಂಶ
ನಾಡಿನ ಅಭಿವೃದ್ದಿ, ಪ್ರಗತಿಯು ಯುವಕರ ಆಲೋಚನೆ, ಶ್ರಮದ ಮೇಲೆ ಅವಲಂಬಿತವಾಗಿರುತ್ತದೆ. ಯುವಕರಿಗೆ ಉದ್ಯೋಗಗಳ ಅವಕಾಶಗಳನ್ನು ಕಲ್ಪಿಸಿಕೊಡುವ ಕೆಲಸ ಸರ್ಕಾರದಿಂದ ಆಗಬೇಕು. ಯುವಕರು ಕೇವಲ ಶಿಕ್ಷಣ ಪಡೆದು ಉದ್ಯೋಗ ಪಡೆಯಲು ಸೀಮಿತವಾಗದೆ ದೇಶವನ್ನು ಕಟ್ಟುವ ಕೆಲಸದಲ್ಲೂ ತೊಡಗಿಸಿಕೊಳ್ಳುವಂತೆ ಮಾಡಬೇಕು.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವು ಅಭಿವೃದ್ದಿ, ಶೈಕ್ಷಣಿಕ ಹಾಗೂ ಆರೋಗ್ಯ ಸವಲತ್ತುಗಳು ಜನ ಸಾಮಾನ್ಯರಿಗೆ ಸಿಗುವಂತ ವಿಚಾರದಲ್ಲಿ ಮಾದರಿಯಾಬೇಕು, ಅದಕ್ಕೆ ಸಂಘಟಿತ ಕಾರ್ಯ ಮುಖ್ಯ ಎಂದು ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ತಿಳಿಸಿದರು.ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ನಾಡಿನ ಅಭಿವೃದ್ದಿ, ಪ್ರಗತಿಯು ಯುವಕರ ಆಲೋಚನೆ, ಶ್ರಮದ ಮೇಲೆ ಅವಲಂಬಿತವಾಗಿರುತ್ತದೆ. ಯುವಕರಿಗೆ ಉದ್ಯೋಗಗಳ ಅವಕಾಶಗಳನ್ನು ಕಲ್ಪಿಸಿಕೊಡುವ ಕೆಲಸ ಸರ್ಕಾರದಿಂದ ಆಗಬೇಕು ಎಂದರು.ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಈ ನಿಟ್ಟಿನಲ್ಲಿ ನಮ್ಮ ಎಬಿಡಿ ಟ್ರಸ್ಟ್ ಈ ತಿಂಗಳ ೨೧ ರಂದು ಐಎಎಸ್, ಕೆಎಎಸ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಕೇಂದ್ರವನ್ನು ಆರಂಭಿಸುತ್ತಿದ್ದು ಸಂಪೂರ್ಣವಾಗಿ ಉಚಿತವಾಗಿ ಇಲ್ಲಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲಾಗುವುದು. ಈಗಾಗಲೆ ತರಬೇತಿ ಕೇಂದ್ರಕ್ಕೆ ಹೆಸರುಗಳ ನೊಂದಣಿ ಇನ್ನಿತರೆ ಚಟುವಟಿಕೆಗಳು ನಡೆಯುತ್ತಿದ್ದು ಉತ್ತಮ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಹೇಳಿದರು.
ಯುವಕರು ಕೇವಲ ಶಿಕ್ಷಣ ಪಡೆದು ಉದ್ಯೋಗ ಪಡೆಯಲು ಸೀಮಿತವಾಗದೆ ದೇಶವನ್ನು ಕಟ್ಟುವ ಕೆಲಸದಲ್ಲೂ ತೊಡಗಿಸಿಕೊಳ್ಳುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಕ್ಷೇತ್ರದಲ್ಲಿರುವ ಪ್ರತಿಭಾವಂತ ಕ್ರಿಕೆಟ್ ಆಟಗಾರರಿಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ತಮ್ಮಿಂದ ಎಲ್ಲಾ ರೀತಿಯ ಸಹಕಾರ ಮತ್ತು ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.ಕ್ರಿಕೆಟ್ ಟೂರ್ನಿಯ ಸಂಘಟಕ ಎನ್.ಎ.ವೆಂಕಟೇಶ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜೀವ್ ಗೌಡ ಅವರು ಚುಣಾವಣೆಯಲ್ಲಿ ಸೋತರೂ ಕ್ಷೇತ್ರವನ್ನು ಬಿಡದೆ ಇಲ್ಲಿ ಉಳಿದುಕೊಂಡು ಕ್ಷೇತ್ರದ ಅಭಿವೃದ್ದಿಗೆ ಪಣತೊಟ್ಟು ಶ್ರಮಿಸುತ್ತಿದ್ದಾರೆ ಎಂದರು. ಪ್ರಥಮ ಬಹುಮಾನ ₹1 ಲಕ್ಷ
ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಯಾವುದೇ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ. ಪ್ರಥಮ ಬಹುಮಾನ ೧ ಲಕ್ಷ ರೂ ಹಾಗೂ ಪಾರಿತೋಷಕ, ದ್ವಿತೀಯ ಬಹುಮಾನವನ್ನು ೫೦ ಸಾವಿರ ರೂ ಹಾಗೂ ಪಾರಿತೋಷಕ, ಮತ್ತು ಭಾಗವಹಿಸುವ ತಂಡಗಳಿಗೆ ಒಂದು ಕ್ರಿಕೆಟ್ ಕಿಟ್ಟು ಹಾಗೂ ಭಾಗವಹಿಸುವ ಕ್ರೀಡಾಪಟುಗಳಿಗೆ ಸಮವಸ್ತ್ರವನ್ನು ವಿತರಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಕ್ರಿಕೆಟ್ ಆಟಗಾರ ಅತೀಕ್, ತಜ್ಜು, ನಗರಸಭೆಯ ಮಾಜಿ ಸದಸ್ಯ ಅಬ್ದುಲ್ ಗಫೂರ್, ನಾಗ ನರಸಿಂಹ, ಮುತ್ತೂರು ವೆಂಕಟೇಶ್ , ಅಫ್ಜಲ್ ಪಾಷ, ಆನೂರು ಚಲಪತಿ ಹಾಜರಿದ್ದರು.