ಉನ್ನತ ಸಾಧನೆಗೆ ಶಿಕ್ಷಣ ಮುನ್ನುಡಿ: ರವಿ

| Published : Jul 02 2025, 11:48 PM IST

ಸಾರಾಂಶ

ಗದಗ ತಾಲೂಕಿನ ಕದಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಗದಗ: ಶಿಕ್ಷಣದಿಂದ ವ್ಯಕ್ತಿ ಸುಶಿಕ್ಷಿತನಾಗಬಲ್ಲ, ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ, ಉನ್ನತ ಸಾಧನೆಗೆ ಮುನ್ನುಡಿ ಆಗಬಲ್ಲದು ಎಂದು ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಹಿರಿಯ ಸದಸ್ಯ ರವಿ ದಂಡಿನ ಹೇಳಿದರು.

ತಾಲೂಕಿನ ಕದಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇರಬೇಕು. ಸಜ್ಜನರ ಸಹವಾಸದಿಂದ ಉತ್ತಮ ಮೌಲ್ಯಗಳು ನಮ್ಮ ಬದುಕಿನಲ್ಲಿ ಒಡಮೂಡುತ್ತವೆ. ಅದಕ್ಕಾಗಿ ವಿದ್ಯಾರ್ಥಿಗಳು ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿ ಸಹಬಾಳ್ವೆಯ ಹಾದಿಯಲ್ಲಿ ಸಾಗಬೇಕು. ಇದಕ್ಕೆಲ್ಲ ದಾರಿ ತೋರುವವರು ಗುರುಗಳಾಗಿದ್ದಾರೆ ಎಂದರು.

ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ಕಳೆದ 11 ವರ್ಷಗಳಿಂದ ಈ ರೀತಿಯ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ. ಆ ಮೂಲಕ ಗುರುಗಳಾದ ಬಿ.ಜಿ. ಅಣ್ಣಿಗೇರಿ ಅವರನ್ನು ಸದಾಕಾಲ ಸ್ಮರಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಕದಡಿ ಪ್ರೌಢಶಾಲೆಯ ಲಕ್ಷ್ಮೀ ಬ್ಯಾಹಟ್ಟಿ, ಜಯಲಕ್ಷ್ಮೀ ಬಾರಕೇರ, ಪ್ರಿಯದರ್ಶಿನಿ ಬೈಲಪತ್ತಾರ, ಪ್ರತಿಭಾ ಲಚಮಣ್ಣವರ, ರಂಜಿತಾ ಶಲವಡಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯ ಎಂ.ಎಂ. ಹಳಪೇಟಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ಶಿವಾನಂದ ಕತ್ತಿ, ಸುಭಾಸ ಬೆಟದೂರ, ಸಿದ್ಧಣ್ಣ ಕವಲೂರ, ಎಸ್.ಜಿ. ಫಿರಂಗಿ, ನೇಹಾ, ಸುಧಾರಾಣಿ, ವೀರೇಶ ಗಂಜಿ, ಎಸ್.ಎಸ್. ಕುರ್ಲಗೇರಿ ಉಪಸ್ಥಿತರಿದ್ದರು. ಎಸ್.ವೈ. ಕರಮುಡಿ ಸ್ವಾಗತಿಸಿದರು. ಡಿ.ಪಿ. ರಂಗವಾಲೆ ಕಾರ್ಯಕ್ರಮ ನಿರೂಪಿಸಿದರು. ಎನ್.ಎ. ಶೇಖರ ವಂದಿಸಿದರು.

ಲಿಂಗದಾಳ: ಲಿಂಗದಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ನಿಶ್ಚಿತಾ ಗುಳೇದ, ಅನು ದ್ಯಾಮಣ್ಣವರ, ಸಹನಾ ಕೊಂಡಿಕೊಪ್ಪ, ಅಂಕಿತಾ ಚೆನ್ನಶೆಟ್ಟಿ, ಮೊಹ್ಮದ್ ದೊಡ್ಡಮನಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಪಿ.ಎಸ್. ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ. ಭಜಂತ್ರಿ ಸ್ವಾಗತಿಸಿದರು. ಎನ್‌.ಎಸ್. ಕುರುಬನಾಳ ಪರಿಚಯಿಸಿದರು. ಆನಂದಕುಮಾರ ಮೇಗಡಿ ಕಾರ್ಯಕ್ರಮ ನಿರೂಪಿಸಿದರು. ಆರ್.ಎಂ. ಬಿಂಗಿ ವಂದಿಸಿದರು.

ಹೊಂಬಳ: ಹೊಂಬಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸುಧಾ ಚೌಡಣ್ಣವರ, ಶ್ರೇಯಾ ಮೊರಬದ, ಅಮೂಲ್ಯ ದಿಡ್ಡಿಮನಿ, ಖುರ್ಷಿದ್ ಕಲೇಬಾವಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ದಿಡ್ಡಿಮನಿ ಅಧ್ಯಕ್ಷತೆ ವಹಿಸಿದ್ದರು. ಕನಾಜ್, ಡಾ. ಶಿವನಗೌಡ ಜೋಳದರಾಶಿ, ಭಾರತಿ ಪಾಟೀಲ ಮುಂತಾದವರಿದ್ದರು. ಕೆ.ವಿ. ಹಿರೇಮಠ ಸ್ವಾಗತಿಸಿದರು. ಎಂ.ಬಿ. ಕರಡ್ಡಿ ಕಾರ್ಯಕ್ರಮ ನಿರೂಪಿಸಿದರು. ವಿ.ಆರ್. ಜಂಗಮನಿ ವಂದಿಸಿದರು.