ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಅವಶ್ಯಕ. ಆ ದಿಸೆಯಲ್ಲಿ ಉನ್ನತಿ ಕಾನ್ವೆಂಟ್ ಶಾಲೆ ಸೇವೆಯ ರೂಪದಲ್ಲಿ ನಮ್ಮ ಗ್ರಾಮದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷರಾದ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಶಿಗ್ಗಾಂವಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಅವಶ್ಯಕ. ಆ ದಿಸೆಯಲ್ಲಿ ಉನ್ನತಿ ಕಾನ್ವೆಂಟ್ ಶಾಲೆ ಸೇವೆಯ ರೂಪದಲ್ಲಿ ನಮ್ಮ ಗ್ರಾಮದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷರಾದ ಶ್ರೀಕಾಂತ ದುಂಡಿಗೌಡ್ರ ಹೇಳಿದರು.ತಾಲೂಕಿನ ಬನ್ನೂರ ಗ್ರಾಮದ ಉನ್ನತಿ ಕಾನ್ವೆಂಟ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಹೀಗಿರುವಾಗ ಭವ್ಯ ಭಾರತದ ಕನಸು ನನಸಾಗಲು ಜ್ಞಾನ ಒಂದೇ ಸೂಕ್ತವಾದ ಮಾರ್ಗ ಎಂದು ಹೇಳಿದರು. ಇಂದು ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಿದ್ದು, ದೇಶದ ಅಭಿವೃದ್ಧಿ ಸೂಚಕ ಅಂಶವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿವಾನಂದಸ್ವಾಮಿ ಹಿರೇಮಠ ಗ್ರಾಮ ಪಂಚಾಯತ್ ಅಧ್ಯಕ್ಷ ಗಿರಿಜಮ್ಮ ದೊಡ್ಮನಿ, ವೀರಭದ್ರೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷ ಶಂಕರಗೌಡ ಪೊಲೀಸಗೌಡ್ರ, ಗ್ರಾಮದ ಹಿರಿಯರಾದ ಟಾಕನಗೌಡ ಪಾಟೀಲ, ಶಿಗ್ಗಾಂವಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅರುಣಗೌಡ ಹುಡೇದಗೌಡ್ರ, ಉಪನ್ಯಾಸಕ ಡಾ. ಶರೀಫ್ ಎನ್. ಮಾಕಪ್ಪನವರ , ಪ್ರಕಾಶ ಬಾಳಿಕಾಯಿ, ಗ್ರಾಮದ ಮುಖಂಡರಾದ, ವಿಶ್ವನಾಥ ಚಿಕ್ಕಮಠ ಶ್ರೀ ಖಾಜಾಮೋದಿನ ಶೇತಸನದಿ, ಪಿ.ಯು. ಪಾಟೀಲ, ವೀರಭದ್ರಪ್ಪ ಅಂಗಡಿ, ಮೌಲಾಸಾಬ ಶೇತಸನದಿ, ಶಿಕ್ಷಕರಾದ ನಜೀರಸಾಬ ಶೇತಸನದಿ, ಸಂಸ್ಥೆಯ ನಿರ್ದೇಶಕರಾದ ಮಹ್ಮದಜಾಫರ್ ಇಸ್ಮಿ ಹಾಗೂ ವಿವಿಧ ಮುಖಂಡರು ಶಿಕ್ಷಕರು, ಶಿಕ್ಷಕಿಯರು ಮುದ್ದು ವಿದ್ಯಾರ್ಥಿಗಳು ಪಾಲಕರು ಪೋಷಕರು ಹಾಜರಿದ್ದರು.