ಶಿಕ್ಷಣ, ನೀರಾವರಿಗೆ ಪ್ರಮುಖ ಆದ್ಯತೆ: ಸಂಸದ ಹಿಟ್ನಾಳ

| Published : Sep 30 2024, 01:17 AM IST

ಸಾರಾಂಶ

Education, irrigation top priority: MP Hitnala

-ಮಸ್ಕಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬೋಧಕ, ಬೋಧಕೇತರ ವಸತಿ ಗೃಹ ಉದ್ಘಾಟನೆ । ಬಿಸಿಎಂ ವಸತಿ ಶಾಲಾ ಕಟ್ಟಡ ಭೂಮಿ ಪೂಜೆ

----

ಕನ್ನಡಪ್ರಭ ವಾರ್ತೆ ಮಸ್ಕಿ

ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಮೊರಾರ್ಜಿ ವಸತಿ ಶಾಲೆಗಳು ಮುಂಚೂಣಿಯಲ್ಲಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿವೆ ಎಂದು ಕೊಪ್ಪಳ ಸಂಸದ ಕೆ.ರಾಜಶೇಖರ್ ಹಿಟ್ನಾಳ ಹೇಳಿದರು.

ಮಸ್ಕಿ ಪಟ್ಟಣದ ಮುದುಗಲ್ ರಸ್ತೆಯ ಹತ್ತಿರವಿರುವ ಮೊರಾರ್ಜಿ ದೇಸಾಯಿ ಎಸ್ಸಿ ವಸತಿ ಶಾಲೆಯ ಬೋಧಕ ಬೋಧಕೇತರ ವಸತಿ ಗೃಹ ಉದ್ಘಾಟನೆ ಹಾಗೂ ಮೊರಾರ್ಜಿ ದೇಸಾಯಿ ಬಿಸಿಎಂ ವಸತಿ ಶಾಲೆಯ ಕಟ್ಟಡ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಮೊರಾರ್ಜಿ ವಸತಿ ಶಾಲೆಗಳು ಆರಂಭ ಅದ ನಂತರ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸರ್ಕಾರ ನೀಡುತ್ತಿದೆ. ಮಸ್ಕಿ ಕ್ಷೇತ್ರದಲ್ಲಿ ಶಾಸಕ ಆರ್.ಬಸನಗೌಡರು ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಶಿಕ್ಷಣದ ಜೊತೆಗೆ ನೀರಾವರಿ ಕ್ಷೆತ್ರದ ಅಭಿವೃದ್ಧಿ ಆದ್ಯತೆ ನೀಡುತ್ತಿದ್ದಾರೆ ಎಂದರು.

ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ, ಕ್ಷೇತ್ರದಲ್ಲಿ ಗ್ರಾಮಿಣ ಬಾಗದ ಮಕ್ಕಳು ಶಿಕ್ಷಣದಿಂದ ಯಾವುದೇ ಕಾರಣಕ್ಕೂ ವಂಚಿತರಾಗಬಾರದು. ಮುಂದಿನ ದಿನಮಾನಗಳಲ್ಲಿ ಶಿಕ್ಷಣಕ್ಕಾಗಿ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತದೆ. ಆದ್ದರಿಂದ ಪೊಷಕರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಎಂದರು. ನಂತರ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಮಾತನಾಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ಮಲ್ಲಪ್ಪ.ಕೆ ಯರಗೋಳ, ತಾ.ಪಂ ಇಒ ಅಮರೇಶ ಯಾದವ್, ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಚಿದಾನಂದಪ್ಪ ಎಂಜಿನಿಯರ್ ಮಾಲತೇಶ್, ಪ್ರಾಂಶುಪಾಲರಾದ ಚನ್ನಬಸ್ಸಪ್ಪ, ಸಂಗಮೇಶ ಕೊಳ್ಳಿ, ಗುತ್ತಿಗೆದಾರರು ಶಂಕರ್ ಇದ್ದರು

ಸಂವಿದಾನ ಪೀಠಿಕೆ ಬೋಧನೆ :ಮೊರಾಜಿ ದೇಸಾಯಿ ವಸತಿ ಶಾಲಾ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧನೆ ಮಾಡಿ ಗಮನ ಸೆಳೆದರು.

--------

....ಬಾಕ್ಸ್.....

ಮೊರಾರ್ಜಿ ವಸತಿ ಶಾಲೆಗಳ ಕಲ್ಪನೆ ಸಿದ್ದರಾಮಯ್ಯನವರದ್ದು: ಶಾಸಕ ಹಂಪನಗೌಡ

ಮಸ್ಕಿ ಪಟ್ಟಣದಲ್ಲಿ ಮೊರಾರ್ಜಿ ವಸತಿ ಶಾಲೆಗಳ ಭೂಮಿ ಪೀಜೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಿಂದನೂರಿನ ಶಾಸಕ ಹಂಪನಗೌಡ ಬಾದರ್ಲಿ ಆರ್. ಬಸನಗೌಡರ ಶ್ರಮ ಅಪಾರ ವಸತಿ ಶಾಲೆಗಳಿಗಾಗಿ ಸಿಎಂ ಸಿದ್ದರಾಮಯ್ಯನವರ ಕೊಡುಗೆ ಅಪಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ವಿಶೇಷ ಅನುದಾನ ನೀಡಿದ್ದು ಕರ್ನಾಟಕ ರಾಜ್ಯ ಮಾದರಿಯಾಗಿದೆ ಎಂದರು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಕಲ್ಪನೆ ಸಿದ್ದರಾಮಯ್ಯನವರದ್ದಾಗಿದ್ದಾರೆ. ಪಾಲಕರು ಹಾಗೂ ಶಿಕ್ಷಕರ ಜವಾಬ್ದಾರಿ ಹೆಚ್ಚಿನ ಪ್ರಮಾಣದಲ್ಲಿದೆ. ಪಾಲಕರು ಮಕ್ಕಳನ್ನು ಸರಿಯಾದ ರೀತಿಯ ಸಂಸ್ಕಾರದಿಂದ ಬೆಳಿಸಿ ಶಿಕ್ಷಕರು ಉತ್ತಮ ಶಿಕ್ಷಣ ನೀಡಿ ಸರ್ವೋತೋಮುಖ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

--------

29-ಎಂಎಸ್ಕೆ-01:ಮಸ್ಕಿಯಲ್ಲಿ ಮೊರಾರ್ಜಿ ದೇಸಾಯಿ ಎಸ್ಸಿ ವಸತಿ ಶಾಲೆಯ ಬೋಧಕ-ಬೋಧಕೇತರ ವಸತಿ ಗೃಹ ಉದ್ಘಾಟನೆ ಹಾಗೂ ಮೊರಾರ್ಜಿ ದೇಸಾಯಿ ಬಿಸಿ ವಸತಿ ಶಾಲೆಯ ಕಟ್ಟಡ ಭೂಮಿ ಪೂಜೆ ನಡೆಯಿತು.

--------