ಸಾರಾಂಶ
ನರಸಿಂಹರಾಜಪುರ: ವಿದ್ಯೆ ಎಂಬುದು ಯಾರೂ ಕದಿಯಲಾಗದ ಸಂಪತ್ತಾಗಿದೆ ಎಂದು ದಿಂಡಿನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ಪುರುಷೋತ್ತಮ್ ಭಟ್ ತಿಳಿಸಿದರು.
ದಿಂಡಿನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ। ನಿವೃತ್ತ ಬಿಸಿಯೂಟ ಸಹಾಯಕಿಗೆ ಬೀಳ್ಕೊಡುಗೆ
ನರಸಿಂಹರಾಜಪುರ: ವಿದ್ಯೆ ಎಂಬುದು ಯಾರೂ ಕದಿಯಲಾಗದ ಸಂಪತ್ತಾಗಿದೆ ಎಂದು ದಿಂಡಿನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ಪುರುಷೋತ್ತಮ್ ಭಟ್ ತಿಳಿಸಿದರು.ಶುಕ್ರವಾರ ತಾಲೂಕಿನ ನಾಗಲಾಪುರ ಗ್ರಾಮದ ದಿಂಡಿನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾರದಾ ಪೂಜೆ ಹಾಗೂ ಬಿಸಿಯೂಟ ತಯಾರಿಕೆಯ ನಿವೃತ್ತ ಸಹಾಯಕಿ ಸೀತಮ್ಮ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ 19 ವರ್ಷದಿಂದಲೂ ಶಾಲೆಯಲ್ಲಿ ಬಿಸಿಯೂಟ ತಯಾರಿಸುತ್ತಿದ್ದ ಸೀತಮ್ಮ ಶುಚಿ ಹಾಗೂ ರುಚಿ ಯಾಗಿ ಆಹಾರ ತಯಾರಿಸಿ ಶಾಲೆ ಮಕ್ಕಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಶಿಕ್ಷಣ ಕಲಿತರೆ ಎಲ್ಲಿ ಬೇಕಾದರೂ ಜೀವನ ಮಾಡಬಹುದು. ಪ್ರತಿಯೊಬ್ಬ ಮಕ್ಕಳು ಶ್ರದ್ಧೆಯಿಂದ ಶಿಕ್ಷಣ ಕಲಿಯಬೇಕು ಎಂದು ಸಲಹೆ ನೀಡಿದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜುನಾಥ್ ಮಾತನಾಡಿ, ನಿವೃತ್ತ ಅಡುಗೆ ಸಹಾಯಕಿ ಸೀತಮ್ಮ ಸ್ವಚ್ಛತೆಯಿಂದ ಅಡುಗೆ ತಯಾರಿಸಿ ಇತರ ಅಡುಗೆಯವರಿಗೆ ಮಾದರಿಯಾಗಿದ್ದಾರೆ ಎಂದರು.ಶಾಲಾ ಮುಖ್ಯೋಪಾಧ್ಯಾಯಿನಿ ಅರುಣಕುಮಾರಿ ಮಾತನಾಡಿ, ಸೀತಮ್ಮ ತಮ್ಮ ಸೇವಾ ಅವಧಿಯಲ್ಲಿ ಉತ್ತಮ ರೀತಿ ಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದು ಮುಂದಿನ ಅವರ ಜೀವನ ಸುಖವಾಗಿರಲಿ ಎಂದು ಹಾರೈಸಿದರು.
ಸಭೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ.ಸದಸ್ಯರಾದ ರಾಧಾ, ಶ್ವೇತ,ನಿರ್ಮಲ,ತಮ್ಮಯ್ಯ, ಶಾಲೆಯ ಸಹ ಶಿಕ್ಷಕ ಸಲ್ಲಾ ಉದ್ದೀನ್ ಹಾಗೂ ಪೋಷಕರು ಇದ್ದರು.