ನರಸಿಂಹರಾಜಪುರಶಿಕ್ಷಣ ಕದಿಯಲಾರದ ಸಂಪತ್ತಾಗಿದ್ದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಮುತ್ತಿನಕೊಪ್ಪ ಗ್ರಾಮದ ಸಂಜೀವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ 27 ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನ. ವ್ಯಾಪಾರ, ವ್ಯವಹಾರ, ಕೃಷಿ ಮಾಡಬೇಕಾದರೂ ಶಿಕ್ಷಣ ಪಡೆಯುವುದು ಅವಶ್ಯಕ. ಪ್ರತಿ ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರ ನ್ನಾಗಿ, ಬುದ್ಧಿವಂತರನ್ನಾಗಿ ಮಾಡಬೇಕು ಎಂದರು.

- ಸಂಜೀವಿನಿ ವಿದ್ಯಾ ಸಂಸ್ಥೆಯ 27 ನೇ ವರ್ಷದ ವಾರ್ಷಿಕೋತ್ಸವ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಶಿಕ್ಷಣ ಕದಿಯಲಾರದ ಸಂಪತ್ತಾಗಿದ್ದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಮುತ್ತಿನಕೊಪ್ಪ ಗ್ರಾಮದ ಸಂಜೀವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ 27 ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನ. ವ್ಯಾಪಾರ, ವ್ಯವಹಾರ, ಕೃಷಿ ಮಾಡಬೇಕಾದರೂ ಶಿಕ್ಷಣ ಪಡೆಯುವುದು ಅವಶ್ಯಕ. ಪ್ರತಿ ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರ ನ್ನಾಗಿ, ಬುದ್ಧಿವಂತರನ್ನಾಗಿ ಮಾಡಬೇಕು. ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಶೃಂಗೇರಿ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ನಾನು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷನಾದ ಮೇಲೆ ಪವ ಶಕ್ತಿ ಉತ್ಪಾದನೆ ಮತ್ತು ಸೌರಶಕ್ತಿ ಉತ್ಪಾದನೆಯಲ್ಲಿ ದೇಶದಲ್ಲಿಯೇ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ತಂದಿದ್ದೇನೆ ಎಂದರು.ಶಿವಮೊಗ್ಗ ಜ್ಞಾನ ದೀಪ ವಿದ್ಯಾಸಂಸ್ಥೆ ಅಧ್ಯಕ್ಷ ತಲವಾನೆ ಪ್ರಕಾಶ್ ಮಾತನಾಡಿ, ಪ್ರಾಥಮಿಕ ಹಂತದ ಶಿಕ್ಷಣವನ್ನು ರೆಸಿಡೆನ್ಸಿ ಶಾಲೆಯಲ್ಲಿ ಕೊಡಿಸುವುದು ಸರಿಯಲ್ಲ. ಪೋಷಕರೊಂದಿಗೆ ಇದ್ದು ಓದುವ ವ್ಯವಸ್ಥೆಯಾಗಬೇಕು. ಮಕ್ಕಳ ಮನಸ್ಸನ್ನು ಪ್ರೀತಿ ಯಿಂದ ಗೆಲ್ಲಬೇಕು. ಬಲತ್ಕಾರದಿಂದ ಗೆಲ್ಲುವುದು ಸರಿಯಲ್ಲ. ಯಾವುದೇ ಶಿಕ್ಷಣ ಸಂಸ್ಥೆ ಯಶಸ್ವಿಗೆ ಶಿಕ್ಷಕರ ಸಹಕಾರ ಮುಖ್ಯವಾಗಿದೆ ಎಂದರು.

ರೋಟರಿ ಸಂಸ್ಥೆ ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, 1998 ರಲ್ಲಿ ಕೇವಲ 20 ವಿದ್ಯಾರ್ಥಿಗಳಿಂದ ಆರಂಭವಾದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಪ್ರಸ್ತುತ 140 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿ ದ್ದಾರೆ. ಎಲ್ಲಾ ಪ್ರಾಣಿ, ಪಕ್ಷಿ, ಜೀವಸಂಕುಲಗಳು ತಮ್ಮ,ತಮ್ಮ ಧರ್ಮ ಪಾಲಿಸುತ್ತವೆ. ಧರ್ಮವೆಂದರೆ ಮತ ಎಂಬರ್ಥದಲ್ಲಿ ಅಲ್ಲ. ಎಲ್ಲರನ್ನೂ ಸಮನಾಗಿ ಕಾಣುವುದು, ಯಾರಿಗೂ ತೊಂದರೆ ಕೊಡದೆ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣುವುದೇ ನಿಜವಾದ ಧರ್ಮ. ಸಾಧನೆ ಎಂಬುದು ಸಾಧಿಸುವವರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ. ಮಕ್ಕಳಲ್ಲಿ ಏನನ್ನು ತುಂಬಬೇಕು. ಏನನ್ನು ತುಂಬಾರದು ಎಂಬುದನ್ನು ಚಿಂತಿಸಬೇಕು. ಒಳ್ಳೆಯದನ್ನು ಸ್ವೀಕರಿಸಬೇಕು ಎಂದು ಕರೆ ನೀಡಿದರು.

ಸಭೆ ಅಧ್ಯಕ್ಷತೆಯನ್ನು ಸಂಜೀವಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಕೆ.ಕೃಪಾಲ್ ವಹಿಸಿದ್ದರು.ಇದೇ ಸಂದರ್ಭದಲ್ಲಿ ರೇಣುಕಾ ಡೆಂಟಲ್ ಕ್ಲಿನಿಕ್ ನ ಡಾ.ಮಹೇಶ್ ಭಂಡಾರಿ ಮತ್ತು ಡಾ.ಸ್ವಪ್ನಾಲಿ ಮಹೇಶ್ ದಂಪತಿಯನ್ನು ಸನ್ಮಾನಿಸಲಾಯಿತು.ಸಭೆಯಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ನ ತಾಲೂಕು ಅಧ್ಯಕ್ಷ ಎಸ್.ಎಸ್. ಜಗದೀಶ್,ಸದಸ್ಯ ಎಸ್.ಎಸ್.ಪುಟ್ಟಸ್ವಾಮಿ, ರೋಟರಿ ಸಂಸ್ಥೆ ಅಧ್ಯಕ್ಷ ವಿನಯ್ ಕಣಿವೆ, ಸಮೂಹ ಸಂಪನ್ಮೂಲ ವ್ಯಕ್ತಿ ಶಿವಣ್ಣ ನಾಯ್ಕ, ಮುಖಂಡರಾದ ಎಸ್.ಗೋಪಾಲ್, ನವಾಜ್ ಸಾಬ್, ಸಂಜೀವಿನಿ ವಿದ್ಯಾ ಸಂಸ್ಥೆ ಖಜಾಂಚಿ ಆಶಾ ಕೃಪಾಲ್,ಸದಸ್ಯ ಕೆ.ಎಂ.ನಿಶ್ಚಲ್, ಮುಖ್ಯ ಶಿಕ್ಷಕಿ ಸುಪ್ರೀತಾ ಇದ್ದರು.