ಕುದೂರು: ಸುಪ್ತವಾಗಿರುವ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರುವುದೇ ನಿಜವಾದ ಶಿಕ್ಷಣ. ಇಂತಹ ಕಾರ್ಯವನ್ನು ದೇವರ ಪೂಜೆಯಷ್ಟೇ ಶ್ರದ್ಧೆಯಿಂದ ಮಾಡುವವರನ್ನೇ ಗುರುಬ್ರಹ್ಮ, ವಿಷ್ಣು, ಮಹೇಶ್ವರರಾಗಿರುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ತಿಳಿಸಿದರು
ಕುದೂರು: ಸುಪ್ತವಾಗಿರುವ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರುವುದೇ ನಿಜವಾದ ಶಿಕ್ಷಣ. ಇಂತಹ ಕಾರ್ಯವನ್ನು ದೇವರ ಪೂಜೆಯಷ್ಟೇ ಶ್ರದ್ಧೆಯಿಂದ ಮಾಡುವವರನ್ನೇ ಗುರುಬ್ರಹ್ಮ, ವಿಷ್ಣು, ಮಹೇಶ್ವರರಾಗಿರುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ತಿಳಿಸಿದರು.
ಕುದೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಕಟ್ಟಡದೊಳಗಿನ ನಾಲ್ಕು ಗೋಡೆಯ ನಡುವೆ ಕುಳಿತು ಕಲಿತ ಅಕ್ಷರಗಳಷ್ಟೇ ಶಿಕ್ಷಣವಲ್ಲ. ಬದಲಿಗೆ ಮಗುವಿನ ಸರ್ವಾಂಗೀಣ ಅಭಿವೃದ್ದಿಯಾಗುವಂತೆ ಪ್ರೇರೇಪಿಸಿ ಪ್ರೋತ್ಸಾಹಿಸುವುದೇ ನಿಜವಾದ ಶಿಕ್ಷಣಧರ್ಮ ಎಂದು ಹೇಳಿದರು.ಮಾಗಡಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಂ ಮಾತನಾಡಿ, ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಿಂದ ನಮ್ಮ ದೇಸಿ ಕಲೆಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಅಪ್ಪಟ ಜನಪದ ಶೈಲಿಯ ಸ್ಪರ್ಧೆಗಳೇ ಇರುವುದರಿಂದ ಇದೊಂದು ಸಂಸ್ಕೃತಿಯ ಹರಿಕಾರರಂತೆ ಪ್ರತಿಭಾ ಕಾರಂಜಿ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಇದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ಎಲ್ಲ ರೀತಿಯಲ್ಲೂ ಜ್ಞಾನ ಸಂಪಾದನೆ ಆಗಬೇಕು. ಆಗ ಮಾತ್ರ ನಮ್ಮ ಗುರಿಗಳನ್ನು ತಲುಪಲು ಸಾಧ್ಯ. ಅದಕ್ಕೆ ಎಲ್ಲಾ ಆಯಾಮಗಳಲ್ಲೂ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರಾಚಾರ್ಯ ನಾರಾಯಣಪ್ಪ, ಉಪಪ್ರಾಚಾರ್ಯೆ ಶ್ರೀದೇವಿ, ಮುಖ್ಯಶಿಕ್ಷಕ ನಾಗರಾಜ್, ಶಿಕ್ಷಕ ಸಂಘದ ಮಲ್ಲೂರು ಲೋಕೇಶ್, ಸಂಘಟಕ ರಂಗೇಗೌಡರು, ಸಿಆರ್ಪಿ ರುಕ್ಸಾನಾಭಾನು, ಕವಿತ, ಎಸ್ಡಿಎಂಸಿ ಸದಸ್ಯ ನಾಗೇಶ್, ಕುಸುಮ, ಜಗದೀಶ್, ಶಿವಕುಮಾರ್ ಮತ್ತಿತರರು ಹಾಜರಿದ್ದರು.
ಪೊಟೋ೧೩ಸಿಪಿಟಿ೨: ಕುದೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಉದ್ಘಾಟಿಸಿದರು.