ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯ: ಗದ್ದೆಪ್ಪ ಹಡಪದ

| Published : Jan 12 2024, 01:45 AM IST

ಸಾರಾಂಶ

ಮುದಗಲ್‌ ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸ್ಥಳೀಯ ಸಮಾಜ ಬಾಂಧವರು ಹಮ್ಮಿ ಕೊಂಡ ನೂತನ ಜಿಲ್ಲಾ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಮುದಗಲ್‌

ನಮ್ಮ ಸಮಾಜ ಕಾಯಕವೇ ಕೈಲಾಸ ಎನ್ನುವ ನಾಣ್ಣುಡಿಯಂತೆ, ಸಮಾಜ ಬಾಂಧವರು ಕಾಯಕದ ಮೂಲಕ ಮೂಲ ಕಸುಬು ವೃತ್ತಿಯನ್ನಾಗಿಸಿಕೊಂಡು ಅನ್ಯ ಸಮಾಜ ಬಾಂಧವರ ಜೊತೆಗೆ ಪ್ರೀತಿ, ಸಹಕಾರದೊಂದಿಗೆ ಬಾಳುತ್ತಿದ್ದೇವೆ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ಹಡಪದ ಅಪ್ಪಣ ಸಮಾಜದ ನೂತನ ಜಿಲ್ಲಾಧ್ಯಕ್ಷ ಗದ್ದೆಪ್ಪ ಹಡಪದ ಜಕ್ಕೆರಮಡು ಹೇಳಿದರು.

ಮುದಗಲ್‌ ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸ್ಥಳೀಯ ಸಮಾಜ ಬಾಂಧವರು ಹಮ್ಮಿ ಕೊಂಡ ನೂತನ ಜಿಲ್ಲಾ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿದರೆ ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದೆ. ವಿದ್ಯಾವಂತ ಯುವಕರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಉದ್ಯೋತವಂತರಾಗಿ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಉತ್ತಮ ಸಂಸ್ಕಾರ, ಸಂಸ್ಕೃತಿ, ಶಿಕ್ಷಣದ ಜೊತೆಗೆ ಸಮಾಜದ ಸಂಘಟನೆಗೆ ಎಲ್ಲರೂ ಆದ್ಯತೆ ನೀಡೋಣ ಎಂದರು.

ಜಿಲ್ಲಾ ಗೌರವಾದ್ಯಕ್ಷ ಮಾಬಳೇಶ ಬಳಗಾನೂರ, ಬಿಜೆಪಿ ಮುದಗಲ್ ಘಟಕಾದ್ಯಕ್ಷ ಸಣ್ಣಸಿದ್ದಯ್ಯ ಮಾತನಾಡಿದರು.

ಜಿಲ್ಲಾ ಉಪಾಧ್ಯಕ್ಷ ಸಿದ್ಪ ಸಿರವಾರ, ಪ್ರಧಾನ ಕಾರ್ಯದರ್ಶಿ ಅಮರೇಶ ಚಿಲಕ್ರಾಗಿ, ಕಾರ್ಯದರ್ಶಿ ಶರಣಪ್ಪ ಮುಳ್ಳೂರ, ಖಜಾಂಚಿ ಹಪ್ಪನ್ನ ಮಾನವಿ, ಮುದಗಲ್ ಘಟಕಾಧ್ಯಕ್ಷ ಗುಂಡಪ್ಪ, ಪುರಸಭೆ ಸದಸ್ಯ ಶ್ರೀಕಾಂತ ಗೌಡ ಪಾಟೀಲ್ ಹನುಮಂತ ಜಕ್ಕೆರಮಡು, ವಿಶ್ವನಾಥ ದೇಸಾಯಿ ಶಿವಣ್ಣ ಖೈರವಾಡಗಿ, ಅಮರೇಶ ಮಟ್ಟೂರ, ಸೇರಿದಂತೆ ಮುಂತಾದವರಿದ್ದರು.