ಸಾರಾಂಶ
ಹೊಸಕೋಟೆ: ವಿದ್ಯಾರ್ಥಿ ಜೀವನದಲ್ಲಿ ಸಾಧಿಸುವ ಅವಕಾಶ ಎಲ್ಲರಿಗೂ ಇರುತ್ತದೆ. ವಿದ್ಯೆ ಸಾಧಕನ ಸ್ವತ್ತು, ಅದನ್ನು ಪ್ರತಿಯೊಬ್ಬರು ಗಳಿಸಬೇಕು ಎಂದು ಹಳೇ ವಿದ್ಯಾರ್ಥಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಟರಾಜ್ ಹೇಳಿದರು.
ಹೊಸಕೋಟೆ: ವಿದ್ಯಾರ್ಥಿ ಜೀವನದಲ್ಲಿ ಸಾಧಿಸುವ ಅವಕಾಶ ಎಲ್ಲರಿಗೂ ಇರುತ್ತದೆ. ವಿದ್ಯೆ ಸಾಧಕನ ಸ್ವತ್ತು, ಅದನ್ನು ಪ್ರತಿಯೊಬ್ಬರು ಗಳಿಸಬೇಕು ಎಂದು ಹಳೇ ವಿದ್ಯಾರ್ಥಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಟರಾಜ್ ಹೇಳಿದರು.
ತಾಲೂಕಿನ ಜಡಿಗೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿ, ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ವಿದ್ಯೆ ಕೊಡಿ, ಅವರೇ ಕುಟುಂಬ ಮತ್ತು ದೇಶಕ್ಕೆ ಆಸ್ತಿಯಾಗುತ್ತಾರೆ. ಸದೃಢ ಸಮಾಜ ನಿರ್ಮಾಣಕ್ಕೆ ವಿದ್ಯೆ ಅನಿವಾರ್ಯತೆ ಹೆಚ್ಚಿದೆ ಎಂದರು.ಜಡಿಗೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಸುಜಾತ ಮಾತನಾಡಿ, ತರಗತಿಗಳಲ್ಲಿ ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ನೀಡಲಾಗುತ್ತದೆ. ಆದರೆ ಕೆಲವು ಉನ್ನತ ಶ್ರೇಣಿಯಲ್ಲಿ ಕೆಲವು ಸಾಮಾನ್ಯ ಶ್ರೇಣಿಯಲ್ಲಿ ಉತ್ತಿರ್ಣರಾಗುತ್ತಾರೆ. ಅದು ಅವರ ಜ್ಞಾನಕ್ಕೆ ಸಿಕ್ಕ ಪ್ರತಿಫಲ ಎಂದು ಹೇಳಿದರು.
ಹಳೇ ವಿದ್ಯಾರ್ಥಿ ಹಾಗೂ ಪೋಲಿಸ್ ಇನ್ಸ್‌ಪೆಕ್ಟರ್ ಭತ್ಯಪ್ಪ ಮಾತನಾಡಿ, ಇಂದಿನ ಯುವ ಸಮುದಾಯ ಹಾಗೂ ಪ್ರಾಥಮಿಕ ಹಂತದಲ್ಲಿಯೇ ಮೊಬೈಲ್ ದಾಸರಾಗಿದ್ದು ಇವರಿಗೆ ಶಿಕ್ಷಣ ಎಂಬುದು ಕಬ್ಬಿಣದ ಕಡಲೆಯಾಗಿದೆ. ಗುರುಹಿರಿಯರು ಹಾಗೂ ತಂದೆ ತಾಯಿಗೆ ಗೌರವ ಇಲ್ಲದ ಸಮಾಜದ ಕಡೆ ನಾವು ಹೆಜ್ಜೆ ಹಾಕುತ್ತಿದ್ದೇವೆ ಎಂದು ವಿಷಾದಿಸಿದರು.ಹಳೇ ವಿದ್ಯಾರ್ಥಿಗಳಿಂದ 2023ನೇ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ಕಾರ್ತಿಕ, ರಾಧಿಕ, ಸಾಹೇಬ್ ಫಾತಿಮಾ ಅವರಿಗೆ ಗೌರವಿಸಿ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಜೆಆರ್‌ಡಿ ಮಾಲತಿ, ಇನ್ನರ್ ವಿಲ್ ಕ್ಲಬ್ ವಿಜಯಲಕ್ಷ್ಮೀ, ಹಳೆಯ ವಿದ್ಯಾರ್ಥಿಗಳಾದ ಬಸವರಾಜ್, ಜೆ.ಸಿ.ಮಂಜುನಾಥ್, ಕೊಳತೂರು ಸುರೇಶ್, ಪಿಳ್ಳಾಂಜಿನಪ್ಪ, ಸೋಲೂರು ನಾರಾಯಣಸ್ವಾಮಿ, ಮಂಜುಳ,ಅಣ್ಣಮ್ಮ, ರತ್ನಮ್ಮ, ಒರೊಹಳ್ಳಿ ಮಹಾದೇವಿ, ಕೊಳತೂರು ನಾರಾಯಣಸ್ವಾಮಿ ಇತರರಿದ್ದರು.ಫೋಟೋ: 25 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.