ಮಕ್ಕಳ ಭವಿಷ್ಯ ಉಜ್ವಲಕ್ಕೆ ಶಿಕ್ಷಣವೇ ದೊಡ್ಡ ಅಸ್ತ್ರ: ಶ್ವೇತಾ ಎನ್. ವೈಕುಂಠೆ

| Published : May 11 2025, 11:48 PM IST

ಮಕ್ಕಳ ಭವಿಷ್ಯ ಉಜ್ವಲಕ್ಕೆ ಶಿಕ್ಷಣವೇ ದೊಡ್ಡ ಅಸ್ತ್ರ: ಶ್ವೇತಾ ಎನ್. ವೈಕುಂಠೆ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಿಸಿ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರುವಂತೆ ಮಾಡುವುದು, ಈ ಮೂಲಕ ನಮ್ಮ ತಂದೆಯವರ ಆಶಯ ಈಡೇರಿಸುವ ಉದ್ದೇಶ ಹೊಂದಲಾಗಿದೆ.

ರಾಣಿಬೆನ್ನೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದರಲ್ಲಿ ಸ್ಪರ್ಧೆಯನ್ನು ಎದುರಿಸಿಯೇ ಗೆಲ್ಲಬೇಕಾದ ಅನಿವಾರ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಶಿಕ್ಷಣವೇ ದೊಡ್ಡ ಅಸ್ತ್ರವಾಗಬೇಕಿದೆ ಎಂದು ಗ್ರಾಮೀಣ ಟ್ರಸ್ಟ್ ಅಧ್ಯಕ್ಷೆ ಶ್ವೇತಾ ಎನ್. ವೈಕುಂಠೆ ಹೇಳಿದರು.

ತಾಲೂಕಿನ ಕಜ್ಜರಿ ಗ್ರಾಮದ ಶ್ರೀ ಮಾಲತೇಶ ಪ್ರೌಢಶಾಲೆಯಲ್ಲಿ ಗ್ರಾಮೀಣ ಟ್ರಸ್ಟ್ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿಂತಾಶದ ಹಿನ್ನೆಲೆ ಮುಖ್ಯಶಿಕ್ಷಕರಿಗೆ ಅಭಿನಂದಿಸಿ, ಪ್ರೋತ್ಸಾಹನಿಧಿ ವಿತರಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿನ ಮಕ್ಕಳು ಕೂಡ ಬಹಳಷ್ಟು ಪ್ರತಿಭಾವಂತರಿರುತ್ತಾರೆ. ಆದರೆ ಅವರಿಗೆ ಸೂಕ್ತ ಸೌಲಭ್ಯ ಹಾಗೂ ಅವಕಾಶಗಳು ದೊರೆಯಬೇಕಿದೆ. ಶಾಲೆಯ ಎಲ್ಲ ಸಿಬ್ಬಂದಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಸಾಕಷ್ಟು ಶ್ರಮವಹಿಸಿ, ವಿಶೇಷ ಕಾಳಜಿ ತೋರಿದ್ದು ಶ್ಲಾಘನೀಯ ಎಂದರು.

ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಿಸಿ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರುವಂತೆ ಮಾಡುವುದು, ಈ ಮೂಲಕ ನಮ್ಮ ತಂದೆಯವರ ಆಶಯ ಈಡೇರಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಮುಖ್ಯ ಶಿಕ್ಷಕ ಅಶೋಕ ಯು. ಕಡ್ಲಿಮಟ್ಟಿ ಮಾತನಾಡಿ, ಮಕ್ಕಳು ಪರಿಶ್ರಮದಿಂದ ನಿರಂತರ ಅಧ್ಯಯನದಲ್ಲಿ ತೊಡಗಿದಾಗ ಮಾತ್ರ ಯಶಸ್ಸು ಸಾಧ್ಯ. ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ಅಂದಾಗ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯವಾಗುತ್ತದೆ ಎಂದರು.

ಟ್ರಸ್ಟ್ ಉಪಾಧ್ಯಕ್ಷೆ ಶೋಭಾ ವೈಕುಂಠೆ, ಬಿ.ಎನ್. ಗೊರವರ, ಸಾಕ್ಷಿ ಕೆ. ಹಾಗೂ ಟ್ರಸ್ಟ್ ಪದಾಧಿಕಾರಿಗಳು, ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.ಗ್ರಾಮಗಳ ಅಭಿವೃದ್ಧಿಯಿಂದ ರಾಮರಾಜ್ಯ

ರಾಣಿಬೆನ್ನೂರು: ಗಾಂಧೀಜಿ ಕಂಡ ಕನಸಿನಂತೆ ಗ್ರಾಮಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ರಾಮರಾಜ್ಯವಾಗಲು ಸಾಧ್ಯ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಭಾನುವಾರ ಘನತ್ಯಾಜ್ಯ ವಿಲೇವಾರಿ ಘಟಕ, ವಾಲ್ಮೀಕಿ ಸಮುದಾಯ ಭವನ, ಸಿದ್ಧರಾಮೇಶ್ವರ ಸಮುದಾಯ ಭವನ, ದುಂಡಿ ಬಸವೇಶ್ವರ ದ್ವಾರಬಾಗಿಲು ಹಾಗೂ ಬೀರಲಿಂಗೇಶ್ವರ ದ್ವಾರಬಾಗಿಲು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ ಅನುದಾನ ನೀಡಿದ್ದು, ರಾಜ್ಯ ಸರ್ಕಾರ ಜಾಗ ಒದಗಿಸಿದೆ. 16 ಗ್ರಾಪಂಗಳು ಈ ಘಟಕದ ವ್ಯಾಪ್ತಿಗೆ ಒಳಪಡುತ್ತವೆ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡಿಸುವುದು ಮುಖ್ಯವಲ್ಲ. ಅದರ ಸದುಪಯೋಗವಾಗಬೇಕು ಎಂದರು.ಗ್ರಾಪಂ ಅಧ್ಯಕ್ಷ ಎಂ.ಎಚ್. ಮಾಸಣಗಿ, ಸದಸ್ಯರಾದ ಬಸವರಾಜ ಮಜ್ಜಗಿ, ಸುರೇಶ್ ಅರಳಿ, ಮಹದೇವಕ್ಕ ಕುರುಬರ, ಗಿರಿಜಮ್ಮ ಪೂಜಾರ, ಧಾರವಾಡ ಕೃಷಿ ವಿವಿ ನಿರ್ದೇಶಕ ವಿ.ಪಿ. ಪೊಲೀಸಗೌಡ್ರ, ಮಹೇಶ ಮಾಸಣಗಿ, ಬಸವನಗೌಡ, ಸುರೇಶ ಅರಳಿ, ಬೀರಪ್ಪ ಕುರಬರ, ಮಂಜಣ್ಣ ಅನ್ವೇರಿ, ಬಸಣ್ಣ ಮಳೇಯಪ್ಪನವರ, ಲೆಕ್ಕಪ್ಪ ಗುಡ್ಡದಬೇವನಹಳ್ಳಿ, ರಾಮಣ್ಣ ದ್ಯಾಮಣ್ಣನವರ, ರಾಜು ಮಸಿಯಪ್ಪನವರ, ಬಿ.ಎಸ್. ಮಾಸಣಗಿ, ಜಿಪಂ ಸಕಾನಿ ಎಂಜಿನಿಯರ್ ರಾಮಪ್ಪ ದೊಡ್ಡಮನಿ, ಪಿಡಿಒ ರೂಪಾ ಶಿರಗಾಪುರ ಮತ್ತಿತರರಿದ್ದರು.