ಶಿಕ್ಷಣ ಎಂಬುದು ಪ್ರತಿಯೊಬ್ಬ ವ್ಯಕ್ತಿಗೆ ಅವಶ್ಯಕ ಮಾನದಂಡ. ಪ್ರತಿ ಮಗು ಶಿಕ್ಷಣ ಪಡೆಯಬೇಕು. ಆ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಪ್ರೋತ್ಸಾದಾಯಕವಾಗಿ ಕಲಿಕೆಗೆ ಸಾಥ್ ನೀಡಬೇಕು.
ಕುಕನೂರು: ಉಜ್ವಲ ಭವಿಷ್ಯಕ್ಕೆ ಶಿಕ್ಷಣವೇ ಪ್ರೇರಣೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಮಂಗಳೂರು ಗ್ರಾಮದ ವಿದ್ಯಾರ್ಥಿನಿ ಸಂಗೀತಾ ಶೇಖರಗೌಡ ಪಾಟೀಲ್ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆ ಅವರ ನಿವಾಸಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿ ಹಾಗೂ ಅವರ ತಂದೆ ಶೇಖರಗೌಡ ಹಾಗು ತಾಯಿ ಶ್ವೇತಾಗೆ ಸನ್ಮಾನಿಸಿ ಮಾತನಾಡಿದರು.ಶಿಕ್ಷಣ ಎಂಬುದು ಪ್ರತಿಯೊಬ್ಬ ವ್ಯಕ್ತಿಗೆ ಅವಶ್ಯಕ ಮಾನದಂಡ. ಪ್ರತಿ ಮಗು ಶಿಕ್ಷಣ ಪಡೆಯಬೇಕು. ಆ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಪ್ರೋತ್ಸಾದಾಯಕವಾಗಿ ಕಲಿಕೆಗೆ ಸಾಥ್ ನೀಡಬೇಕು. ಉಜ್ವಲ ಭವಿಷ್ಯಕ್ಕೆ ಶಿಕ್ಷಣವೊಂದೆ ಮಾರ್ಗ.ಆ ನಿಟ್ಟಿನಲ್ಲಿ ಬಡತನದ ಕುಲುಮೆಯಲ್ಲಿ ಬೆಂದಿರುವ ಸಂಗೀತಾ ತನ್ನ ಕಲಿಕೆಗೆ ಆದ್ಯತೆ ನೀಡಿ ಹಿಂದುಳಿದ ಪ್ರದೇಶದಲ್ಲಿ ಅರಳಿದ ಪ್ರತಿಭೆ ಆಗಿದ್ದಾಳೆ. ರಾಜ್ಯಕ್ಕೆ ಪಿಯುಸಿ ಕಲಾ ವಿಭಾಗದಲ್ಲಿ ಟಾಪರ್ ಆಗಿರುವುದು ಹೆಮ್ಮೆ ಸಂಗತಿ. ಆಕೆಯ ಉನ್ನತ ವ್ಯಾಸಂಗಕ್ಕೆ ಸದಾ ಸಹಾಯಕ ಮಾಡುತ್ತೇನೆ ಎಂದರು.
ಇದೇ ವೇಳೆ ಶೈಕ್ಷಣೀಕ ಕಾರ್ಯಕ್ಕೆ ಹತ್ತು ಸಾವಿರ ಪ್ರೋತ್ಸಾಹ ಧನ ವಿತರಿಸಿದರು.ಬಿಜೆಪಿ ಯಲಬುರ್ಗಾ ಮಂಡಲ ಅಧ್ಯಕ್ಷ ಮಾರುತಿ ಹೊಸಮನಿ, ವೀರಣ್ಣ ಹುಬ್ಬಳ್ಳಿ, ಶಿವಕುಮಾರ ನಾಗಲಾಪೂರಮಠ, ವಿಶ್ವನಾಥ ಮರಿಬಸಪ್ಪನವರ, ಪತ್ರಕರ್ತ ರವಿ ತೋಟದ, ಮಂಗಳೂರು ಗ್ರಾಮದ ಹಿರಿಯರು, ಯುವಕರಿದ್ದರು.