ಅಜ್ಞಾನವೆಂಬ ಶತ್ರು ಓಡಿಸಲು ವಿದ್ಯೆ ಅತ್ಯಂತ ಪ್ರಮುಖ ಅಸ್ತ್ರ: ಡಾ.ಸಿ.ಟಿ. ಜಯದೇವ್

| Published : May 11 2025, 01:16 AM IST

ಅಜ್ಞಾನವೆಂಬ ಶತ್ರು ಓಡಿಸಲು ವಿದ್ಯೆ ಅತ್ಯಂತ ಪ್ರಮುಖ ಅಸ್ತ್ರ: ಡಾ.ಸಿ.ಟಿ. ಜಯದೇವ್
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುವಿದ್ಯೆ ಸಾಧಕನ ಸ್ವತ್ತು, ಶ್ರದ್ಧೆ, ಶಿಸ್ತು ಮತ್ತು ಪರಿಶ್ರಮದಿಂದ ಮಾತ್ರ ಅದನ್ನು ಗಳಿಸಬಹುದು ಎಂದು ಎಐಟಿ ಪ್ರಾಂಶುಪಾಲ ಡಾ.ಸಿ.ಟಿ. ಜಯದೇವ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದ್ಯೆ ಸಾಧಕನ ಸ್ವತ್ತು, ಶ್ರದ್ಧೆ, ಶಿಸ್ತು ಮತ್ತು ಪರಿಶ್ರಮದಿಂದ ಮಾತ್ರ ಅದನ್ನು ಗಳಿಸಬಹುದು ಎಂದು ಎಐಟಿ ಪ್ರಾಂಶುಪಾಲ ಡಾ.ಸಿ.ಟಿ. ಜಯದೇವ್ ಹೇಳಿದರು.ಮಲೆನಾಡು ವಿದ್ಯಾಸಂಸ್ಥೆಯ ಎಂ. ಎಸ್. ಪದ್ಮಾವತಮ್ಮ, ಎಂ. ಕೆ. ಸಾಂಬಶಿವ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ವಿವಿಧ ವಿದ್ಯಾರ್ಥಿ ಸಂಘಗಳ ಸಮಾರೋಪ ಮತ್ತು ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಬಡತನ ಮತ್ತು ಅಜ್ಞಾನವೆಂಬ ಶತ್ರುವನ್ನು ಓಡಿಸಲು ವಿದ್ಯೆ ಅತ್ಯಂತ ಪ್ರಮುಖವಾದ ಅಸ್ತ್ರ , ವಿದ್ಯಾವಂತನನ್ನು ಮಾತ್ರ ಸಮಾಜ ಗೌರವಿಸುತ್ತದೆ. ಸೂಕ್ತ ಸ್ಥಾನ ಮಾನ ನೀಡುತ್ತದೆ. ಶಿಕ್ಷಣವಂತರಾದರೆ ಮಾತ್ರ ನಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದ ಅವರು, ವಿದ್ಯಾರ್ಥಿಗಳು ಇದನ್ನು ಅರಿತು ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.ಹೃದ್ರೋಗ ತಜ್ಞ ಡಾ. ಅನಿಕೇತ್ ವಿಜಯ್ ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ, ಉತ್ತಮ ಭವಿಷ್ಯಕ್ಕೆ, ವಿದ್ಯಾರ್ಥಿ ಸಂಘಗಳು ಸಹಕಾರಿ ಎಂದರು.ವಿದ್ಯಾರ್ಥಿ ಸಂಘಗಳು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದ ಅವರು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದೃಷ್ಟಿಯಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಸಲಹೆ ಮಾಡಿದರು.ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ. ವಿಜಯಕುಮಾರ್ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘ ಗಳನ್ನು ಸದುಪಯೋಗಪಡಿಸಿಕೊಂಡು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.ಪ್ರಾಂಶುಪಾಲರಾದ ಪ್ರೊ, ಹಸೀನಾ ಬಾನು ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಪುರಸ್ಕರಿಸಲಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.ಮಲೆನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಎನ್, ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಸಹಕಾರ್ಯದರ್ಶಿ ಶಂಕರ ನಾರಾಯಣ ಭಟ್, ಶೈಕ್ಷಣಿಕ ಸಲಹೆಗಾರ ಪ್ರೊ. ಕೆ.ಎನ್. ಮಂಜುನಾಥ ಭಟ್, ಕಚೇರಿ ವ್ಯವಸ್ಥಾಪಕಿ ಶ್ರೀ ಲಕ್ಷ್ಮಿ , ಉಪನ್ಯಾಸಕರಾದ ಸುಮಂತ್ ಕುಮಾರ್, ಶುಗುಪ್ತಾ ಜಬೀನ್, ವಿದ್ಯಾರ್ಥಿಗಳಾದ ಎಂ, ಜೆ, ಖುಷಿ, ವಿ, ವಿಷ್ಣು ಉಪಸ್ಥಿತರಿದ್ದರು.