ಸಾರಾಂಶ
ಕನ್ನಡ ಪ್ರಭ ವಾರ್ತೆ ವಿಜಯಪುರ ಕಲಿಕೆಯ ಜೊತೆಗೆ ಮಕ್ಕಳಲ್ಲಿ ನೆಲೆಗೊಂಡಿರುವ ದೇಶಾಭಿಮಾನವನ್ನು ಪೋಷಿಸುವುದೇ ಪರಿಪೂರ್ಣ ಶಿಕ್ಷಣದ ಮೊದಲ ಹೆಜ್ಜೆಯಾಗುತ್ತದೆ ಎಂದು ಭಾರತೀಯ ವಾಯು ಪಡೆಯ ನಿವೃತ್ತ ಸ್ಕ್ವಾಡ್ರನ್ ಲೀಡರ್ ಎಸ್.ಎಂ.ಗುಡ್ಡದ ಹೇಳಿದರು. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶ ಎಲ್ಲ ಕ್ಷೇತ್ರಗಳಲ್ಲಿಯೂ ಬಲಿಷ್ಠತೆವಾಗುತ್ತ ಹೊರಟಿದೆ.
ಕನ್ನಡ ಪ್ರಭ ವಾರ್ತೆ ವಿಜಯಪುರ
ಕಲಿಕೆಯ ಜೊತೆಗೆ ಮಕ್ಕಳಲ್ಲಿ ನೆಲೆಗೊಂಡಿರುವ ದೇಶಾಭಿಮಾನವನ್ನು ಪೋಷಿಸುವುದೇ ಪರಿಪೂರ್ಣ ಶಿಕ್ಷಣದ ಮೊದಲ ಹೆಜ್ಜೆಯಾಗುತ್ತದೆ ಎಂದು ಭಾರತೀಯ ವಾಯು ಪಡೆಯ ನಿವೃತ್ತ ಸ್ಕ್ವಾಡ್ರನ್ ಲೀಡರ್ ಎಸ್.ಎಂ.ಗುಡ್ಡದ ಹೇಳಿದರು.ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶ ಎಲ್ಲ ಕ್ಷೇತ್ರಗಳಲ್ಲಿಯೂ ಬಲಿಷ್ಠತೆವಾಗುತ್ತ ಹೊರಟಿದೆ. ಪರಿಪೂರ್ಣತೆಯೆಡೆಗೆ ಸಾಗಬೇಕಾದರೆ ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ಅರಿತು ಕೆಲಸ ಮಾಡಬೇಕಾಗುತ್ತದೆ ಎಂದರು.ನಿವೃತ್ತ ಅಭಿಯಂತರ ಜಿ.ಬಿ.ಜಿಡ್ಡಿಮನಿ ಮಾತನಾಡಿ, ಕಲಿಯುವಾಗ ನಿಯತ್ತಿನಿಂದ ಕಲಿತು ಕಲಿಸಿದ ಶಾಲೆಗೆ, ಹೆತ್ತವರಿಗೆ ಉತ್ತಮ ಮಕ್ಕಳಾಗಿ ಹೆಸರು ತರಬೇಕು. ಆಗ ಅದೇ ನಾವು ದೇಶಕ್ಕೆ ನೀಡುವ ದೊಡ್ಡ ಕೊಡುಗೆ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ದೇಶ ಸೇವೆ ಮಾಡಿದ ನಿವೃತ್ತ ಭೂಸೇನಾ ಅಧಿಕಾರಿ ಜಿಸಿಒ ಮಹಾದೇವ ಪವಾರ ಹಾಗೂ ಹವಾಲ್ದಾರ್ ಅಶೋಕ ರಾಯಗೊಂಡ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ್ ಕೆ.ಎಸ್ ಅಧ್ಯಕ್ಷತೆ ವಹಿಸಿದ್ದರು. ಅಂಕಣಕಾರ ಹಾಗೂ ವಾಗ್ಮಿ ಮಂಜುನಾಥ ಜುನಗೊಂಡ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶರಣಗೌಡ ಪಾಟೀಲ ಸ್ವಾಗತಿಸಿದರು, ವಿದ್ಯಾರ್ಥಿನಿ ಆಕಾಂಕ್ಷಾ ಬೊದರ್ದೆ ಪ್ರಾರ್ಥಿಸಿದರು, ಶ್ರದ್ಧಾ ಜಾಧವ ನಿರೂಪಿಸಿ ವಂದಿಸಿದರು. ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.