ವಿದ್ಯಾರ್ಥಿಯ ಭವಿಷ್ಯದ ಜೀವನಕ್ಕೆ ವಿದ್ಯೆ ಬಹಳ ಅವಶ್ಯಕ: ಡಾ.ಎಸ್.ಎಲ್.ಸುರೇಶ್

| Published : Feb 14 2024, 02:19 AM IST

ಸಾರಾಂಶ

ಶಿಕ್ಷಣ ಎಂದರೆ ಮಕ್ಕಳ ಸರ್ವೋತೋಮುಖ ಬೆಳವಣಿಗೆ. ಪೋಷಕರು ತಮ್ಮ ಮಕ್ಕಳ ಅಂಕದ ಹಿಂದೆ ಹೋಗದೆ ಮೌಲ್ಯಾಧಾರಿತ ಜೀವನ ಶಿಕ್ಷಣದ ಕಡೆಗೂ ಒತ್ತು ನೀಡುವ ಮೂಲಕ ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡಲು ಪೋಷಕರು ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಭಾರತೀನಗರ

ವಿದ್ಯಾರ್ಥಿಯ ಭವಿಷ್ಯದ ಜೀವನಕ್ಕೆ ವಿದ್ಯೆ ಬಹಳ ಅವಶ್ಯಕತೆ ಇರುವುದರಿಂದ ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಭಾರತೀ ಶಿಕ್ಷಣ ಮಹಾ ವಿದ್ಯಾನಿಲಯದ ಪ್ರಾಂಶುಪಾಲ ಡಾ.ಎಸ್.ಎಲ್.ಸುರೇಶ್ ತಿಳಿಸಿದರು.

ಭಾರತೀ ಕುವೆಂಪು ಸಭಾಂಗಣದಲ್ಲಿ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯಿಂದ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪೋಷಕರು ತಮ್ಮ ಮಕ್ಕಳ ಅಂಕದ ಹಿಂದೆ ಹೋಗದೆ ಮೌಲ್ಯಾಧಾರಿತ ಜೀವನ ಶಿಕ್ಷಣದ ಕಡೆಗೂ ಒತ್ತು ನೀಡುವ ಮೂಲಕ ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡಲು ಪೋಷಕರು ಮುಂದಾಗಬೇಕು ಎಂದರು.

ಗ್ರಾಪಂ ಮಾಜಿ ಸದಸ್ಯೆ ಅನುಪಮ ಸತೀಶ್ ಮಾತನಾಡಿ, ಬಾಲ್ಯ ಶಿಕ್ಷಣ ಮಗು ಮತ್ತು ಜೀವನದ ತಳಹದಿಯಾಗಿರುತ್ತದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಅಂಕಗಳಿಗೆ ಕೊಡುವ ಆದ್ಯತೆಯಷ್ಟೇ ಗ್ರಾಮೀಣ ಭಾಗದ ಕ್ರೀಡೆ, ಸಮಾಜದ ನಡೆ-ನುಡಿ ಸಂಸ್ಕೃತಿಯತ್ತ ಹೆಜ್ಜೆ ಹಾಕುವಂತೆ ಮನವಿ ಮಾಡಿದರು.

ಭಾರತೀ ಪದವಿ ಪೂರ್ವ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಎ.ಸಿ.ಮಾನಸ ಮಾತನಾಡಿ, ಶಿಕ್ಷಣ ಎಂದರೆ ಮಕ್ಕಳ ಸರ್ವೋತೋಮುಖ ಬೆಳವಣಿಗೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಶಿಕ್ಷಣ, ಎಲ್ಲ ಚಟುವಟಿಕೆಗಳಲ್ಲೂ ಭಾಗವಹಿಸಿದರೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಸಾಧ್ಯವಾಗುತ್ತದೆ ಎಂದರು.

ಈ ವೇಳೆ ವಿವಿಧ ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಗ್ರಾಪಂ ಮಾಜಿ ಸದಸ್ಯೆ ಅನುಪಮ ಸತೀಶ್, ಎ.ಸಿ.ಮಾನಸ ಅವರನ್ನು ಸನ್ಮಾನಿಸಿ ಗೌರವಿಸಿದರು. ಶಾಲೆ ಮುಖ್ಯಶಿಕ್ಷಕ ಎಚ್.ಪಿ.ಪ್ರತಿಮಾ, ಸಹಶಿಕ್ಷಕರಾದ ಸಿಂಧೂ, ರೇಖಾ, ಸುರಭಿ, ನಯನ, ರೇವಣ್ಣ, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜು, ನಂದ ಸೇರಿದಂತೆ ಹಲವರಿದ್ದರು.