ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಮಕ್ಕಳು ಪ್ರೌಢಾವಸ್ಥೆ ನಂತರ ಜೀವನವನ್ನು ವಿಶೇಷವಾಗಿ ವಿದ್ಯಾಭ್ಯಾಸಕ್ಕಾಗಿ ಮುಡಿಪಾಗಿಟ್ಟಲ್ಲಿ ಮುಂದಿನ ಹಾದಿ ಸುಗಮವಾಗಲು ಸಾಧ್ಯ ಎಂದು ತರೀಕೆರೆ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಪ್ರಗತಿ ಸಂಸ್ಥೆ ಅಧ್ಯಕ್ಷೆ ಕಲ್ಪನಾ ಸುಧಾಮ್ ಹೇಳಿದ್ದಾರೆ.ಸೀನಿಯರ್ ಚೇಂಬರ್ ಇಂಟರ್ಷ ನ್ಯಾಷನಲ್ ಸಂಸ್ಥೆ ಯಿಂದ ಪಟ್ಟಣದ ಸರ್ಕಾರಿ ಮೊರಾರ್ಜಿ ಅಂಬೇಡ್ಕರ್ ವಸತಿ ಶಾಲೆ ಮಕ್ಕಳಿಗೆ ಹದಿಹರೆಯ, ಹಾಗೂ ಋತುಚಕ್ರದ ಆರೈಕೆ ಹಾಗೂ ಮಹಿಳಾ ಸಬಲೀಕರಣದ ಅರಿವು ಮೂಡಿಸಲು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹದಿಹರೆಯದ ಈ ಹುಚ್ಚು ಕೊಡಿ ಮನಸನ್ನ ಹರಿಬಿಡದೆ ಒಳಿತು ಕೆಡಕುಗಳನ್ನು ಹಿರಿಯರ, ಗುರುಗಳ, ಸನ್ಮಾರ್ಗದಲ್ಲಿ ಈ ಪ್ರೌಢಾವಸ್ಥೆಯನ್ನು ಕಳೆದು ಜೀವನವನ್ನು ವಿಶೇಷವಾಗಿ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿದರೆ ಮಕ್ಕಳ ಮುಂದಿನ ಹಾದಿ ಉತ್ತಮವಾಗಿರಲಿದೆ. ಹೆಣ್ಣು ಮಕ್ಕಳ ಋತುಚಕ್ರದ ಸ್ವಚ್ಛತೆ ಹಾಗೂ ಪ್ಯಾಡ್ ಬಳಕೆಯಿಂದ ಮಕ್ಕಳಲ್ಲಿ ಆಗುವ ಆರೋಗ್ಯದ ಏರುಪೇರುಗಳನ್ನು ಕುರಿತು ಅವರು ಮಾಹಿತಿ ನೀಡಿದರು.ಪ್ರತಿಯೊಬ್ಬರು ಪರಿಸರದ ಸ್ವಚ್ಛತೆಯನ್ನು ಅವಲಂಬಿಸಿದರೆ ಇಡೀ ದೇಶದಲ್ಲಿ ಸ್ವಚ್ಛತೆ ಕಾಪಾಡಬಹುದು, ಈ ಯುವ ಪೀಳಿಗೆ ಹೆಣ್ಣು ಮಕ್ಕಳೇ ಮುಂದಿನ ಸಂಸಾರದ ಹಾಗೂ ಸಮಾಜದ ಕಣ್ಣಾಗುವವರು. ಹಾಗಾಗಿ ಮಹಿಳಾ ಸಬಲೀಕರಣ ಎಂಬ ವಿಷಯದಲ್ಲಿ ಈ ಪ್ರಕೃತಿಯ ಮಡಿಲಲ್ಲಿ ಈ ಭೂಮಿ ತಾಯಿ ಹೆಣ್ಣು, ಭರತ ಮಾತೆ ಹೆಣ್ಣು, ಹೀಗೆ ನ್ಯಾಯದೇವತೆ, ಶಕ್ತಿ ದೇವತೆ, ನದಿ ದೇವತೆ, ಒಂದೊಂದು ಸ್ಥಾನಕ್ಕೂ ಈ ಹೆಣ್ಣಿನ ಸ್ಥಾನ ಕೊಟ್ಟಿದೆ. ಈ ನಮ್ಮ ಸಂವಿಧಾನದಲ್ಲೂ ಮಹಿಳೆಗೆ ಒಂದು ಪವಿತ್ರವಾದ ಸ್ಥಾನ ನೀಡಲಾಗಿದೆ. ಗಂಡಿಗಿಂತ ಹೆಚ್ಚಾಗಿ ಹಲವಾರು ರೀತಿಯಲ್ಲಿ ಹೆಣ್ಣಿಗೆ ಸವಲತ್ತು ಸಹಕಾರಗಳನ್ನು ನೀಡಿದೆ. ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಿಸುತ್ತ ಬರಲಾಗುತ್ತಿದೆ. ಈ ಹೆಣ್ಣು ಬರೀ ಸಂಸಾರದ ಕಣ್ಣಾಗಿರದೆ ಸಮಾಜದ ಕಣ್ಣಾಗಿ ಕೂಡ ಬೆಳೆಯಬೇಕು, ಸಾಮಾಜಿಕ, ಆರ್ಥಿಕ, ನೈತಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಗಂಡಿಗೆ ಸರಿ ಸಮಾನವಾಗಿ ಸಮಾಜದ ಮಾದರಿಯಾಗಿ ನಿಲ್ಲಬೇಕು. ಮಹಿಳೆ ಅಬಲೆಯಲ್ಲ ಸಬಲೆ ಎಂದು ಅವರು ಹೇಳಿದರು.ಮೈಸೂರು ಅನಿತಾ ಜಾದವ್, ಸ್ನೇಹಾ ಕೊಂಡೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಆಶಾ ಭೋಸ್ಲೆ, ಮುಖ್ಯಉಪಾಧ್ಯಾಯರು, ಹಾಗೂ ಉಪಾದ್ಯಾಯರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.24ಕೆಟಿಆರ್.ಕೆ.1ಃ
ತರೀಕೆರೆಯಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ತರೀಕೆರೆ ಪ್ರಗತಿ ಸಂಸ್ಥೆಯಿಂದ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷೆ ಕಲ್ಪನಾ ಸುಧಾಮ್ ಮಾತನಾಡಿದರು. ಮೈಸೂರು ಅನಿತಾ ಜಾಧವ್, ಸ್ನೇಹಾ ಕೊಂಡೆ ಮತ್ತಿತರರು ಇದ್ದರು.